ಬಿಜೆಪಿ ಅಭ್ಯರ್ಥಿ ನಾಮಪತ್ರ ವಾಪಸ್: ದೆಹಲಿ ಮೇಯರ್‌ ಆಗಿ ಎಎಪಿಯ ಶೆಲ್ಲಿ ಒಬೆರಾಯ್‌ ಅವಿರೋಧ ಆಯ್ಕೆ

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಎಎಪಿಯ ಶೆಲ್ಲಿ ಒಬೆರಾಯ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಎಪಿ ಕಾರ್ಪೊರೇಟರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರು ಉಪಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ದೆಹಲಿ ಮೇಯರ್ ಆಗಿ ಶೆಲ್ಲಿ ಒಬೆರಾಯ್ ಆಯ್ಕೆ
ದೆಹಲಿ ಮೇಯರ್ ಆಗಿ ಶೆಲ್ಲಿ ಒಬೆರಾಯ್ ಆಯ್ಕೆ

ದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಆಗಿ ಎಎಪಿಯ ಶೆಲ್ಲಿ ಒಬೆರಾಯ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಎಪಿ ಕಾರ್ಪೊರೇಟರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರು ಉಪಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿಯ ಶಿಖಾ ರೈ ನಾಮಪತ್ರ ಹಿಂಪಡೆದ ಹಿನ್ನೆಲೆ ಆಮ್‌ ಆದ್ಮಿ ಪಕ್ಷದ (ಎಎಪಿ) ಶೆಲ್ಲಿ ಒಬೆರಾಯ್ ದೆಹಲಿಯ ಮೇಯರ್ ಆಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಎರಡನೇ ಅವಧಿಗೂ ಮೇಯರ್ ಆಗಿ ಮುಂದುವರಿದ್ದಾರೆ.

‘ಸ್ಥಾಯಿ ಸಮಿತಿಗೆ ಚುನಾವಣೆ ನಡೆಯದ ಕಾರಣ ನಾಮಪತ್ರ ಹಿಂಪಡೆದುಕೊಂಡಿದ್ದೇನೆ‘ ಎಂದು ಶಿಖಾ ರೈ ಹೇಳಿದ್ದಾರೆ. ಶಿಖಾ ರೈ ಜೊತೆಗೆ ಉಪ ಮೇಯರ್‌ ಸ್ಥಾನಕ್ಕೆ ಸ್ಪರ್ಧಿಸಲು ಅಣಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸೋನಿ ಪಾಲ್‌ ಕೂಡ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಸೋನಿ ಪಾಲ್ ನಾಮಪತ್ರವನ್ನು ಹಿಂಪಡೆದ ಹಿನ್ನೆಲೆ ಹಾಲಿ ಉಪಮೇಯರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರು ಮತ್ತೊಂದು ಅವಧಿಗೆ ಉಪ ಮೇಯರ್‌ ಆಗಿ ಮುಂದುವರೆದಿದ್ದಾರೆ.

ಎಎಪಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ನಲ್ಲಿ ಆಡಳಿತ ಪಕ್ಷವಾಗಿದೆ. ಹಾಲಿ ಮೇಯರ್‌ ಆಗಿರುವ ಶೆಲ್ಲಿ ಒಬೆರಾಯ್ ಮತ್ತು ಶಿಖಾ ರೈ ನಡುವೆ ಮೇಯರ್‌ ಸ್ಥಾನಕ್ಕೆ ನೇರ ಹಣಾಹಣಿ ಏರ್ಪಟ್ಟಿತ್ತು. ನಾಮಪತ್ರ ಹಿಂತೆಗೆಯುವುದರ ಮೂಲಕ ಸ್ಪರ್ಧೆ ಇಲ್ಲದೇ ಶೆಲ್ಲಿ ಒಬೆರಾಯ್‌ ಮೇಯರ್‌ ಆಯ್ಕೆಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿತ್ತು. ಎಎಪಿ ಅಭ್ಯರ್ಥಿ ಶೈಲಿ ಒಬೆರಾಯ್ ಮೇಯರ್ ಮತ್ತು ಮೊಹಮ್ಮದ್ ಇಕ್ಬಾಲ್ ಉಪಮೇಯರ್ ಆಗಿ ಆಯ್ಕೆಯಾದರು. ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ಶೈಲಿ ಒಬೆರಾಯ್ ಅವರು ಫೆಬ್ರವರಿ 22 ರಂದು ದೆಹಲಿಯ ಮೇಯರ್ ಆಗಿ ಆಯ್ಕೆಯಾದರು. ಅವರು ಭಾರತೀಯ ಜನತಾ ಪಕ್ಷದ ರೇಖಾ ಗುಪ್ತಾ ಅವರನ್ನು 34 ಮತಗಳ ಅಂತರದಿಂದ ಸೋಲಿಸಿದರು. ಒಬೆರಾಯ್ ಒಟ್ಟು 266 ಮತಗಳಲ್ಲಿ 150 ಮತಗಳನ್ನು ಪಡೆದರೆ ರೇಖಾ ಗುಪ್ತಾ 116 ಮತಗಳನ್ನು ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com