ಹೈದಾರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಅಧಿಕಾರಿಗಳ ನಿರ್ಲಕ್ಷದಿಂದ ಸಿಕಂದರಾಬಾದ್‌ನ ಕಲಾಸಿಗುಡಾದಲ್ಲಿ ತೆರೆದ ಮ್ಯಾನ್ ಹೋಲ್ ಗೆ ಬಿದ್ದು 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ.
ಭಾರೀ ಮಳೆಯ ನಡುವೆ, ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಮೌನಿಕಾ ಬೆಳಿಗ್ಗೆ 7:30 ರ ಸುಮಾರಿಗೆ ಹಾಲಿನ ಪ್ಯಾಕೆಟ್ ಖರೀದಿಸಲು ಹೊರಗೆ ಹೋಗಿದ್ದಳು ಎಂದು ವರದಿಯಾಗಿದೆ. ಅವಳು ತೆರೆದ ಚರಂಡಿಯಲ್ಲಿ ಜಾರಿಬಿದ್ದು ಪಾರ್ಕ್‌ಲೇನ್‌ನಲ್ಲಿನ ಪ್ರಮುಖ ನಾಲೆಯಲ್ಲಿ ಕೊಚ್ಚಿಕೊಂಡಳು. ನಂತರ ವಿಪತ್ತು ನಿರ್ವಹಣಾ ಪಡೆ (ಡಿಆರ್‌ಎಫ್) ತಂಡ ಮೃತದೇಹವನ್ನು ಹೊರತೆಗೆದು ಗಾಂಧಿ ಆಸ್ಪತ್ರೆಗೆ ರವಾನಿಸಿದೆ.
ಮಹಂಕಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಹೈದರಾಬಾದ್ ಮೇಯರ್ ಗದ್ವಾಲ್ ವಿಜಯಲಕ್ಷ್ಮಿ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Advertisement