
ಬೆಂಗಳೂರು: ಚಲಿಸುವ ರೈಲಿನಲ್ಲಿ ಏಕಕಾಲದಲ್ಲಿ ನಮಾಜ್- ಹನುಮಾನ್ ಚಾಲೀಸಾ ಓದಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು free press journal ವೆಬ್‌ಸೈಟ್ ವರದಿ ಮಾಡಿದ್ದು, ಆಲ್ಟ್ ನ್ಯೂಸ್ ಡಾಟ್ ಕಾಮ್ ಮಹಮದ್ ಜುಬೇರ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ವಿಡಿಯೊದಲ್ಲಿ ಮುಸ್ಲಿಂ ವ್ಯಕ್ತಿ ರೈಲಿನ ಬೋಗಿಯೊಂದರಲ್ಲಿ ನಮಾಜ್ ಮಾಡುತ್ತಿರುತ್ತಾರೆ. ಇದೇ ವೇಳೆ ಕೆಲ ಹಿಂದೂ ಯುವಕರು ಜೋರಾಗಿ ಹನುಮಾನ್ ಚಾಲೀಸಾ ಹೇಳುವುದು ಕಾಣಿಸುತ್ತದೆ.
ಈ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಕೆಲವರು ಇದನ್ನು ಕೋಮು ಸಾಮರಸ್ಯ. ಇದು ಭಾರತದಲ್ಲಿ ಮಾತ್ರ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವು ಹಿಂದೂ ಪರ ಸಂಘಟನೆಗಳು ಯುವಕರನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೆ ಕೆಲವರು ಪ್ರಚೋದನೆ ಎಂದು ಟೀಕಿಸುತ್ತಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರರು ಯುವಕರು ಹನುಮಾನ್ ಚಾಲೀಸಾ ಪಠಣೆ ಮಾಡುತ್ತಿದ್ದಾಗ ಮುಸ್ಲಿಂ ವ್ಯಕ್ತಿ ನಮಾಜ್ ಗೆ ಮುಂದಾಗಿರಬಹುದು. ಆ ಸಾಧ್ಯತೆ ಕೂಡ ಇದೆ ಎಂದು ಹೇಳಿದ್ದಾರೆ.
ಆದರೆ ಈ ಘಟನೆ ಎಲ್ಲಿ? ಯಾವಾಗ? ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ.
ನೋಡಿ ಇದು ನವ ಭಾರತದ ಯುವಜನತೆ! ತನ್ನ ಸೀಟಿನಲ್ಲಿ ಮೌನವಾಗಿ ನಮಾಜ್ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಗೆ ವಿರೋಧವಾಗಿ ಎಂಬಂತೆ, ಹಲವಾರು ಹಿಂದೂ ಯುವಕರು ಜೋರಾಗಿ ಹನುಮಾನ್ ಚಾಲೀಸಾವನ್ನು ಮೊಬೈಲ್ ಫೋನುಗಳಿಂದ ಪಠಿಸುತ್ತಿದ್ದಾರೆ ಎಂದು ಅಶೋಕ್ ಸ್ವೈನ್ ಎನ್ನುವರು ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
A video got viral some boy's chanting Hanuman Chalisa loudly in train and also a Muslim guy doing namaz many people not happy from this incident but this is ‘SECULARISM’
Advertisement