ನೀಟ್ ಪರೀಕ್ಷೆಯಲ್ಲಿ ಅನುತ್ತೀರ್ಣ: ಮಗ ಆತ್ಮಹತ್ಯೆ ಮಾರನೆಯ ದಿನವೇ ತಂದೆ ಕೂಡ ಸಾವು!, NEET ಪರೀಕ್ಷೆ ಶೀಘ್ರ ರದ್ದು ಎಂದ ಸಿಎಂ

ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ 19 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ನಂತರ, ಯುವಕನ ತಂದೆ ಕೂಡ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ನೀಟ್ ಪರೀಕ್ಷೆ: ತಂದೆ-ಮಗ ಸಾವು
ನೀಟ್ ಪರೀಕ್ಷೆ: ತಂದೆ-ಮಗ ಸಾವು
Updated on

ಚೆನ್ನೈ: ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ನಂತರ 19 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡ ಒಂದು ದಿನದ ನಂತರ, ಯುವಕನ ತಂದೆ ಕೂಡ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.

ತಮಿಳುನಾಡಿನ ಚೆನ್ನೈನಲ್ಲಿರುವ ತನ್ನ ಮನೆಯಲ್ಲಿ ತಂದೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ 2022 ರಲ್ಲಿ 12 ನೇ ತರಗತಿಯಲ್ಲಿ 427 ಅಂಕಗಳೊಂದಿಗೆ ಪಾಸಾಗಿದ್ದ ಜಗದೀಶ್ವರನ್ ಎಂಬ ವಿದ್ಯಾರ್ಥಿ ಸತತ ಎರಡು ಪ್ರಯತ್ನಗಳಲ್ಲಿ ನೀಟ್ ಪ್ರವೇಶ ಪರೀಕ್ಷೆಯನ್ನು ಪಾಸಾಗಲು ಸಾಧ್ಯವಾಗಲಿಲ್ಲ. ಇತ್ತೀಚಿನ ಫಲಿತಾಂಶದಿಂದ ತೀವ್ರ ನೊಂದಿದ್ದ ಜಗದೀಶ್ವರನ್ ಶನಿವಾರ ತಂದೆ ಕರೆ ಮಾಡಿದರೂ ಸ್ಪಂದಿಸಿರಲಿಲ್ಲ. ನಂತರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಮಗನ ಸಾವಿನ ದುಃಖ ತಾಳಲಾರದೆ ಸೆಲ್ವಶೇಖರ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ .ಸ್ಟಾಲಿನ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, "ಆತ್ಮಹತ್ಯೆಯ ಆಲೋಚನೆಗಳನ್ನು ಮಾಡಬೇಡಿ. ಆತ್ಮ ವಿಶ್ವಾಸವನ್ನು ಹೊಂದಲು ಹಾಗೂ ಬದುಕಲು ಕಲಿಯಿರಿ" ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.

NEET ಪರೀಕ್ಷೆಯನ್ನು ಖಂಡಿತವಾಗಿಯೂ ತೆಗೆದುಹಾಕುತ್ತೇವೆ: ತ.ನಾಡು ಸಿಎಂ ಸ್ಟಾಲಿನ್‌
ಇದೇ ವೇಳೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ನಿಮ್ಮ ಗುರಿಗೆ ತೊಡಕಾಗಿರುವ ನೀಟ್‌ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದು ಹಾಕುತ್ತೇವೆ. ಯಾರೂ ಕೂಡ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ನಾನು ವಿದ್ಯಾರ್ಥಿಗಳೊಂದಿಗೆ ಮನವಿ ಮಾಡುತ್ತೇನೆ. ನಿಮ್ಮ ಗುರಿಗೆ ತೊಡಕಾಗಿರುವ ನೀಟ್‌ ಪರೀಕ್ಷೆಯನ್ನು ನಾವು ಖಂಡಿತವಾಗಿಯೂ ತೆಗೆದುಹಾಕುತ್ತೇವೆ. ತಮಿಳುನಾಡು ಸರ್ಕಾರ ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ ಎಂದು ಹೇಳಿದ್ದಾರೆ.

‘ನೀಟ್‌ ಅಭ್ಯರ್ಥಿ ಜಗದೀಶ್ವರನ್, ಆತ್ಮಹತ್ಯೆ ಮಾಡಿಕೊಂಡಿದ್ದು ಕೇಳಿ ನನಗೆ ಆಘಾತವಾಯಿತು. ಅವರ ಪೋಷಕರನ್ನು ಸಮಾಧಾನ ಮಾಡುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಅವರ ತಂದೆ ಸೆಲ್ವಶೇಖರ್‌ ಕೂಡ ಆತ್ಮಹತ್ಯೆ ಮಾಡಿಕೊಂಡರು. ಜಗದೀಶ್ವರನ್ ಅವರ ಕುಟುಂಬ, ಸ್ನೇಹಿತ ವರ್ಗ ಹಾಗೂ ಬಂಧು ಬಳಗಕ್ಕೆ ಹೇಗೆ ಸಾಂತ್ವನ ಹೇಳುವುದು ಎಂದು ನನಗೆ ತಿಳಿಯತ್ತಿಲ್ಲ. ವೈದ್ಯನಾಗುವ ಆಸೆ ಕಂಡಿದ್ದ ಬುದ್ದಿವಂತ ವಿದ್ಯಾರ್ಥಿಯೊಬ್ಬ ನೀಟ್‌ನಿಂದ ಆತ್ಮಹತ್ಯೆ ಮಾಡಿಕೊಂಡವರ ಸಾಲಿಗೆ ಸೇರಿದ್ದು ದುರಂತ’ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com