ಲಂಕಾ ನೌಕಾಪಡೆಯಿಂದ ಮೀನುಗಾರರ ಮೇಲೆ ನಿರಂತರ ದಾಳಿ; ಮೋದಿ ಸರ್ಕಾರ ದುರ್ಬಲವಾಗಿದೆ ಎಂದ ಸ್ಟಾಲಿನ್

ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ "ದುರ್ಬಲವಾಗಿದೆ" ಎಂಬುದನ್ನು ತೋರಿಸುತ್ತಿದೆ ಎಂದು ತಮಿಳುನಾಡು...
ಎಂ ಕೆ ಸ್ಟಾಲಿನ್
ಎಂ ಕೆ ಸ್ಟಾಲಿನ್

ರಾಮನಾಥಪುರ: ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ "ದುರ್ಬಲವಾಗಿದೆ" ಎಂಬುದನ್ನು ತೋರಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಮೀನುಗಾರರ ಕಲ್ಯಾಣ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಟಾಲಿನ್, 1974ರಲ್ಲಿ ಪರಸ್ಪರ ಒಪ್ಪಂದದ ಮೂಲಕ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟಿದ್ದ ಕಚ್ಚತೀವು ದ್ವೀಪವನ್ನು ಹಿಂಪಡೆಯುವುದೇ ಮೀನುಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಪುನರುಚ್ಚರಿಸಿದ್ದಾರೆ.

ಆಡಳಿತಾರೂಢ ಡಿಎಂಕೆ ಅಧ್ಯಕ್ಷರಾಗಿರುವ ಸ್ಟಾಲಿನ್, ತಮ್ಮ ತಂದೆ ಮತ್ತು ದಿವಂಗತ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಕಚ್ಚತೀವು ಭಾರತಕ್ಕೆ ಸೇರಿದ್ದು ಎಂದು ವರದಿ ನೀಡಿದ್ದರು ಎಂದರು.

1974 ರಲ್ಲಿ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ನೀಡಿದ್ದು ಇಂದಿರಾ ಗಾಂಧಿ ಸರ್ಕಾರ ಎಂದು ಪ್ರಧಾನಿ ಮೋದಿ ಅವರು ಹೇಳಿದ ಕೆಲವೇ ದಿನಗಳಲ್ಲಿ ತಮಿಳುನಾಡು ಮುಖ್ಯಮಂತ್ರಿ ದ್ವೀಪ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಎನ್‌ಡಿಎ ಆಡಳಿತದಲ್ಲಿ ಲಂಕಾ ನೌಕಾಪಡೆಯಿಂದ ತಮಿಳುನಾಡು ಮೀನುಗಾರರ ಮೇಲೆ ದಾಳಿಗಳು ಹೆಚ್ಚುತ್ತಿವೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರಿಗೆ ನಿರಂತರ ಕಿರುಕುಳ ಮತ್ತು ದಾಳಿಯನ್ನು ಮೀನುಗಾರರ ಸಮಾವೇಶ ಖಂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com