ಸೈಬರ್ ಅಪರಾಧ ನಿಯಂತ್ರಣದತ್ತ ಕೇಂದ್ರ ಗಮನಹರಿಸುತ್ತಿದೆ: ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯಲ್ಲಿ ಅಶ್ವಿನಿ ವೈಷ್ಣವ್

ಕೇಂದ್ರ ಸರ್ಕಾರ ಸೈಬರ್ ವಂಚನೆ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ಗಮನಹರಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಚಿವ ಅಶ್ವಿನಿ ವೈಷ್ಣವ್‌
ಸಚಿವ ಅಶ್ವಿನಿ ವೈಷ್ಣವ್‌

ಬೆಂಗಳೂರು: ಕೇಂದ್ರ ಸರ್ಕಾರ ಸೈಬರ್ ವಂಚನೆ ಚಟುವಟಿಕೆಗಳನ್ನು ನಿಯಂತ್ರಿಸುವತ್ತ ಗಮನಹರಿಸುತ್ತಿದೆ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಜಿ20 ಡಿಜಿಟಲ್ ಎಕಾನಮಿ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್,  3 ದಿನಗಳ ಹಿಂದೆ ನಾವು ಎರಡು ಸುಧಾರಣೆಗಳನ್ನು ಘೋಷಿಸಿದ್ದು, ಈ ಮೂಲಕ ಪ್ರತಿಯೊಬ್ಬ ಡೀಲರ್ ನ್ನೂ ಪರಿಶೀಲನೆ ಮಾಡುತ್ತೇವೆ ಈ ಮೂಲಕ ಸೈಬರ್ ವಂಚನೆ ಹಾಗೂ ಇತರ ವಂಚಕ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದರತ್ತ ಗಮನ ಕೇಂದ್ರೀಕರಿಸಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. 

ಇದು ಪ್ರಧಾನಿ ಮೋದಿ ಅವರು ಡಿಜಿಟಲ್ ಇಂಡಿಯಾದೊಂದಿಗೆ ಆರಂಭಿಸಿದ್ದಕ್ಕೆ ಅತ್ಯುತ್ತಮ ಸಾಕ್ಷ್ಯವಾಗಿದೆ ಹಾಗೂ ಈ ಮೂಲಕ ಅತ್ಯಂತ ಕಡಿಮೆ ಆದಾಯವಿರುವ ಮಂದಿಗೂ ತಂತ್ರಜ್ಞಾನ ಲಭ್ಯವಾಗುತ್ತಿದೆ, ಅದರ ಲಾಭವನ್ನು ಅವರೂ ಪಡೆಯಬೇಕು ಎಂದು ಸಚಿವರು ತಿಳಿಸಿದ್ದಾರೆ.

ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಗೆ ಭಾರತದ ನಾಯಕತ್ವ ಮೂರು ಆದ್ಯತೆಯ ವಲಯ- ಡಿಜಿಟಲ್ ಪಬ್ಲಿಕ್ ಮೂಲಸೌಕರ್ಯ (ಡಿಪಿಐ), ಡಿಜಿಟಲ್ ಎಕಾನಮಿಯಲ್ಲಿ ಭದ್ರತೆ ಹಾಗೂ ಡಿಜಿಟಲ್ ಸ್ಕೇಲಿಂಗ್ ಆಯ್ಕೆ ಮಾಡಿರುವುದನ್ನು ಅಶ್ವಿನಿ ವೈಷ್ಣವ್ ಒತ್ತಿ ಹೇಳಿದ್ದು ಈ ಮೂರು ಪ್ರಧಾನಿ ಮೋದಿ ಅವರ ಆದ್ಯತೆಗಳನ್ನು ಸೂಚಿಸುತ್ತವೆ ಎಂದಿದ್ದಾರೆ.  

ಈ ಆದ್ಯತೆಗಳು ಸುರಕ್ಷಿತ ಡಿಜಿಟಲ್ ಆರ್ಥಿಕತೆಯ ವಿಶಾಲ ಜಾಗತಿಕ ಕಾರ್ಯಸೂಚಿಗಳಿಗೆ ಹೊಂದಿಕೆಯಾಗಲಿವೆ, ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣದಲ್ಲಿ ಪ್ರಧಾನಿ ಮೋದಿ ನಂಬಿಕೆ ಇಟ್ಟಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com