ಸದ್ಯಕ್ಕೆ I.N.D.I.A ಮೈತ್ರಿಕೂಟದೊಂದಿಗೆ ಮೈತ್ರಿ ಇಲ್ಲ: ಪ್ರಕಾಶ್ ಅಂಬೇಡ್ಕರ್

ಸದ್ಯದ ಮಟ್ಟಿಗೆ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ I.N.D.I.A ಮೈತ್ರಿಕೂಟ ಸೇರುವ ಯಾವುದೇ ಯೋಚನೆ ಇಲ್ಲ ಎಂದು ‘ವಂಚಿತ ಬಹುಜನ ಅಘಾಡಿ’ ಪಕ್ಷದ ಸ್ಥಾಪಕ ಪ್ರಕಾಶ್‌ ಅಂಬೇಡ್ಕರ್‌ ಹೇಳಿದ್ದಾರೆ.
ಪ್ರಕಾಶ್ ಅಂಬೇಡ್ಕರ್
ಪ್ರಕಾಶ್ ಅಂಬೇಡ್ಕರ್

ನವದೆಹಲಿ: ಸದ್ಯದ ಮಟ್ಟಿಗೆ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ I.N.D.I.A ಮೈತ್ರಿಕೂಟ ಸೇರುವ ಯಾವುದೇ ಯೋಚನೆ ಇಲ್ಲ ಎಂದು ‘ವಂಚಿತ ಬಹುಜನ ಅಘಾಡಿ’ ಪಕ್ಷದ ಸ್ಥಾಪಕ ಪ್ರಕಾಶ್‌ ಅಂಬೇಡ್ಕರ್‌ ಹೇಳಿದ್ದಾರೆ.

ವಿಪಕ್ಷಗಳ ಮೈತ್ರಿಕೂಟದ ಕುರಿತು ಮಾತನಾಡಿದ ಅವರು, ಯಾವ ಪಾರಿವಾಳವೂ ಬಂದಿಲ್ಲ, ಫೋನ್ ಕರೆಯೂ ಬಂದಿಲ್ಲ... ಎನ್ನುವ ಮೂಲಕ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರತಿಪಕ್ಷಗಳ I.N.D.I.A ಮೈತ್ರಿ ಕೂಟಕ್ಕೆ ಸೇರಲು ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದರು ಎಂಬ ವರದಿಗಳನ್ನು ‘ವಂಚಿತ ಬಹುಜನ ಅಘಾಡಿ’ ಪಕ್ಷದ ಸ್ಥಾಪಕ ಪ್ರಕಾಶ್‌ ಅಂಬೇಡ್ಕರ್‌ ತಳ್ಳಿಹಾಕಿದ್ದಾರೆ.

ಅಲ್ಲದೆ ಕೂಟಕ್ಕೆ ಸೇರಲು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎನ್ನುವುದು ಸುಳ್ಳು, I.N.D.I.A ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ. ಇದು ಕಾಂಗ್ರೆಸ್‌ನ ಪೇಟೆಂಟ್ ವಿಧಾನವಾಗಿದೆ. ಸರಿಯಾದ ರೀತಿಯ ಸಂವಹನ ನಡೆಸದೆ ಎಲ್ಲೆಡೆ ಹೇಳಿಕೊಂಡು ಬಂದರೆ ಇದೇ ರೀತಿ ಆಗುತ್ತದೆ ಎಂದು ಪ್ರಕಾಶ್‌ ಅಂಬೇಡ್ಕರ್ ಹೇಳಿದ್ದಾರೆ.

ಮುಂಬೈ ಮೂಲದ ಪ್ರಕಾಶ್‌ ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ. ಇವರು ವಕೀಲರು ಕೂಡ ಹೌದು. ಎರಡು ಬಾರಿ ಅಕೊಲಾ ಪ್ರದೇಶದಿಂದ ಸಂಸದರಾಗಿ ಲೋಕಸಭೆಗೆ ಹಾಗೂ ಒಂದು ಬಾರಿ ರಾಜ್ಯ ಸಭಾ ಸಂಸದರಾಗಿ ಆಯ್ಕೆಯಾಗಿದ್ದರು.

ಕೆಲವು ತಿಂಗಳುಗಳ ಹಿಂದೆ, ಅಂಬೇಡ್ಕರ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದರು, ಆದಾಗ್ಯೂ, ಇದು ಎರಡು ಪಕ್ಷಗಳಿಗೆ ಸೀಮಿತವಾಗಿತ್ತು ಮತ್ತು ವಿಬಿಎ ಇನ್ನೂ ಮಹಾರಾಷ್ಟ್ರದ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿಯ ಭಾಗವಾಗಿರಲಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com