ಮೋದಿ ಸರ್ಕಾರದಿಂದ ಆರ್‌ಟಿಐ ಕಾಯ್ದೆಯ 'ಕೊಲೆ': ಮಲ್ಲಿಕಾರ್ಜುನ ಖರ್ಗೆ

'ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಪಿತೂರಿ'ಯ ಭಾಗವಾಗಿ ನರೇಂದ್ರ ಮೋದಿ ಸರ್ಕಾರ ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಯನ್ನು ಹಂತ ಹಂತವಾಗಿ "ಕೊಲ್ಲುತ್ತಿದೆ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: 'ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸುವ ಪಿತೂರಿ'ಯ ಭಾಗವಾಗಿ ನರೇಂದ್ರ ಮೋದಿ ಸರ್ಕಾರ ಮಾಹಿತಿ ಹಕ್ಕು(ಆರ್‌ಟಿಐ) ಕಾಯ್ದೆಯನ್ನು ಹಂತ ಹಂತವಾಗಿ "ಕೊಲ್ಲುತ್ತಿದೆ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.

ಆರ್‌ಟಿಐ ವೆಬ್‌ಸೈಟ್‌ನಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಕಣ್ಮರೆಯಾಗುತ್ತಿವೆ ಎಂಬ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಖರ್ಗೆ, ಬಹಿರಂಗವಾಗಿ ಕಾಣಿಸುತ್ತಿರುವುದು ಸ್ವಲ್ಪ, ಆದರೆ ಆಂತರಿಕ ಅತಿ ಹೆಚ್ಚು ಅರ್ಜಿಗಳು ಕಣ್ಣರೆಯಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

"ಮೋದಿ ಸರ್ಕಾರವು RTI ಕಾಯಿದೆಯನ್ನು ಹಂತ ಹಂತವಾಗಿ ಕೊಲ್ಲುತ್ತಿದೆ. ಇದು ಕೇವಲ ಸಾಂವಿಧಾನಿಕ ಹಕ್ಕುಗಳ(ಜನರ) ಮೇಲಿನ ದಾಳಿಯಲ್ಲ. ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ಪಿತೂರಿಯ ಮತ್ತೊಂದು ಹೆಜ್ಜೆ" ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ದತ್ತಾಂಶ ಸಂರಕ್ಷಣಾ ಕಾನೂನಿನ ನೆಪದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವುದು ನಿರಂಕುಶ ಸರ್ಕಾರದಿಂದ ಮಾಹಿತಿ ಹಕ್ಕಿನ ಮೇಲೆ ನಡೆಯುತ್ತಿರುವ ಹೇಡಿತನದ ದಾಳಿಯಾಗಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ಅಂಗೀಕರಿಸಲಾದ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯು ಆರ್‌ಟಿಐ ಕಾಯ್ದೆಯ ನಿಬಂಧನೆಗಳನ್ನು ದುರ್ಬಲಗೊಳಿಸುತ್ತದೆ ಎಂದು ಹಲವು ವಿರೋಧ ಪಕ್ಷಗಳು ಮತ್ತು ಸಾಮಾಜಿಕ ಹೋರಾಟಗಾರರು ಪ್ರತಿಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com