'ಚಂದ್ರಯಾನ, ಸೂರ್ಯಯಾನ ಸರಿ.. ಆದರೆ ಈರುಳ್ಳಿ ಕೂಡ ಟೊಮೆಟೋ ದಾರಿ ಹಿಡಿಯುತ್ತಿದೆ.. ದರ ಏರಿಕೆಗೆ ಪರಿಹಾರ ಯಾವಾಗ?'

ಚಂದ್ರಯಾನ, ಸೂರ್ಯಯಾನ ಸರಿ.. ಆದರೆ ಈರುಳ್ಳಿ ಕೂಡ ಟೊಮೆಟೋ ದಾರಿ ಹಿಡಿಯುತ್ತಿದೆ.. ದರ ಏರಿಕೆಗೆ ಪರಿಹಾರ ಯಾವಾಗ? ಎಂದು ಪ್ರಶ್ನಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಇಡೀ ದೇಶ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ-3 ಯಶಸ್ಸಿನಲ್ಲಿ ತೇಲುತ್ತಿರುವಂತೆಯೇ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿರುವ ಶಿವಸೇನೆ.. ಚಂದ್ರಯಾನ, ಸೂರ್ಯಯಾನ ಸರಿ.. ಆದರೆ ಈರುಳ್ಳಿ ಕೂಡ ಟೊಮೆಟೋ ದಾರಿ ಹಿಡಿಯುತ್ತಿದೆ.. ದರ ಏರಿಕೆಗೆ ಪರಿಹಾರ ಯಾವಾಗ? ಎಂದು ಪ್ರಶ್ನಿಸಿದೆ.

ಈರುಳ್ಳಿ ರಫ್ತಿಗೆ ಶೇ.40ರಷ್ಟು ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶಿವಸೇನಾ (ಯುಟಿಬಿ) ಟೀಕೆ ಮಾಡಿದ್ದು, ‘ಮೋದಿ ಸರ್ಕಾರ ಸೂರ್ಯನಿಗೂ ನೌಕೆ ಕಳುಹಿಸಬಹುದು. ಆದರೆ ಅದಕ್ಕಿಂತ ಮೊದಲು ದೇಶದ ಈರುಳ್ಳಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಯ. ಇಲ್ಲದಿದ್ದರೆ 2024ರ ಲೋಕಸಭೆ ಚುನಾವಣೆ ಗೆಲ್ಲುವ ಪ್ರಯತ್ನವು ವಿಫಲಗೊಳ್ಳುತ್ತವೆ ಎಂದು ಆಡಳಿತ ಪಕ್ಷಕ್ಕೆ ತಿಳಿದಿಲ್ಲ’ ಎಂದು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದಿದೆ.

‘ದೇಶದ ಜನ ಸೂರ್ಯಯಾನ, ಚಂದ್ರಯಾನ ಹಾಗೂ ಶುಕ್ರಯಾನ ಮುಂತಾದ ವಿಷಯಗಳಲ್ಲಿ ತಲ್ಲೀನರಾಗಿದ್ದಾರೆ. ಸೂರ್ಯಯಾನ ಎಲ್ಲವೂ ಸರಿ, ಆದರೆ ರಾಜ್ಯದಲ್ಲಿ ಈರುಳ್ಳಿ ಸಮಸ್ಯೆಯನ್ನು ಸ್ಥಿರಗೊಳಿಸುವುದು ಮುಖ್ಯ ಎಂದು ಹೇಳಿದೆ.

ಮಹಾರಾಷ್ಟ್ರದ ಅಹ್ಮದನಗರ, ನಾಸಿಕ್‌ ಹಾಗೂ ಪುಣೆ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಈರುಳ್ಳಿ ರಫ್ತಿಗೆ ಶೇ 40ರಷ್ಟು ತೆರಿಗೆ ವಿಧಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಲ್ಲಿನ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com