ನುಹ್ ಹಿಂಸಾಚಾರದಲ್ಲಿ ಕಾಂಗ್ರೆಸ್ ಕೈವಾಡ, ಶಾಸಕ ಮಮ್ಮನ್ ಖಾನ್ ವಿಚಾರಣೆ: ಸಚಿವ ಅನಿಲ್ ವಿಜ್

ನುಹ್ ಕೋಮು ಹಿಂಸಾಚಾರದಲ್ಲಿ ಕಾಂಗ್ರೆಸ್ ಕೈವಾಡವಿದ್ದು, ಈ ಸಂಬಂಧ ಶಾಸಕ ಮಮ್ಮನ್ ಖಾನ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಮಂಗಳವಾರ ಹೇಳಿದ್ದಾರೆ.
ನುಹ್ ಹಿಂಸಾಚಾರ (ಸಂಗ್ರಹ ಚಿತ್ರ)
ನುಹ್ ಹಿಂಸಾಚಾರ (ಸಂಗ್ರಹ ಚಿತ್ರ)

ಚಂಡಿಗಢ: ನುಹ್ ಕೋಮು ಹಿಂಸಾಚಾರದಲ್ಲಿ ಕಾಂಗ್ರೆಸ್ ಕೈವಾಡವಿದ್ದು, ಈ ಸಂಬಂಧ ಶಾಸಕ ಮಮ್ಮನ್ ಖಾನ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಮಂಗಳವಾರ ಹೇಳಿದ್ದಾರೆ.

ನುಹ್ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿನ ಘರ್ಷಣೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ನ ಪಾತ್ರವನ್ನು ಪ್ರಾಥಮಿಕ ತನಿಖೆಯು ತೋರಿಸಿದ್ದು, ಈವರೆಗೆ 510 ಜನರನ್ನು ಬಂಧಿಸಲಾಗಿದೆ ಮತ್ತು 130-140 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಚಂಡೀಗಢದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಜ್, 'ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಅವರ ವಿರುದ್ಧ ಹಿಂಸಾಚಾರ ನಡೆದ ಪ್ರದೇಶಗಳಿಗೆ ಅವರು ಭೇಟಿ ನೀಡಿದ್ದಕ್ಕೆ ಸಾಕ್ಷ್ಯವಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ “ಪ್ರಾಥಮಿಕ ತನಿಖೆಯಲ್ಲಿ ನಾವು ಸುಮಾರು 510 ಜನರನ್ನು ಬಂಧಿಸಿದ್ದೇವೆ ಮತ್ತು 130-140 ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ. ಅವರ ವಿಚಾರಣೆಯ ನಂತರ ನಮಗೆ ಇದೀಗ ಬಂದಿರುವ ತೀರ್ಮಾನವೆಂದರೆ ಇದು ಕಾಂಗ್ರೆಸ್‌ನಿಂದ ಮಾಡಲ್ಪಟ್ಟಿದೆ ಎಂದು ತೋರುತ್ತಿದೆ. ಇದರಲ್ಲಿ ಕಾಂಗ್ರೆಸ್‌ನ ಶಾಸಕ ಮಮ್ಮನ್ ಖಾನ್ ಅವರನ್ನು ಆಗಸ್ಟ್ 30 ರಂದು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ ಎಂದು ವಿಜ್ ಹೇಳಿದರು.

ಮೇಲಾಗಿ ತನಿಖೆಯ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಕ್ಕಿಬಿದ್ದಿರುವ ವ್ಯಕ್ತಿಗಳು ಕಾಂಗ್ರೆಸ್ ಜತೆ ಸಂಪರ್ಕ ಹೊಂದಿದ್ದಾರೆ. ತನಿಖೆ ತೀವ್ರವಾದಂತೆ ಹಲವು ಕೋನಗಳು ಬರುತ್ತಿವೆ. ನಾವು ನ್ಯಾಯಯುತ ತನಿಖೆ ನಡೆಸುತ್ತಿದ್ದೇವೆ ಮತ್ತು ಹಿಂಸಾಚಾರದ ಹಿಂದಿನ ಮಾಸ್ಟರ್‌ಮೈಂಡ್‌ಗಳಿಗೆ ನಾವು ಅದನ್ನು ತೋರಿಸುತ್ತೇವೆ" ಎಂದು ಹೇಳಿದರು.

ಕಳೆದ ತಿಂಗಳ ಆರಂಭದಲ್ಲಿ, ಜಿಲ್ಲೆಯ ಮೂಲಕ ಹಾದುಹೋಗುವ ವಿಎಚ್ ಪಿಯ ಧಾರ್ಮಿಕ ಮೆರವಣಿಗೆಯ ನಂತರ ನುಹ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದವು, ಇದರಲ್ಲಿ ಇಬ್ಬರು ಗೃಹರಕ್ಷಕರು ಸೇರಿದಂತೆ ಆರು ಜನರು ಸಾವನ್ನಪ್ಪಿದರು ಮತ್ತು ನಂತರದ ಹಿಂಸಾಚಾರದಲ್ಲಿ ಸುಮಾರು 20 ಮಂದಿ ಪೊಲೀಸರು ಗಾಯಗೊಂಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com