ನವದೆಹಲಿ: ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆ ಇಳಿಕೆಯು ಮಹಿಳೆಯರ ಸೌಕರ್ಯ ಹೆಚ್ಚಿಸಿ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಂಗಳವಾರ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ನಲ್ಲಿ 400 ರೂ ಸಬ್ಸಿಡಿ ಘೋಷಣೆ ಮಾಡಿದ್ದು, ಉಜ್ವಲ ಯೋಜನೆಯಡಿಯಲ್ಲಿ ಇರುವವರಿಗೆ ರೂ.400 ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ. ಉಜ್ವಲ ಯೋಜನೆ ಫಲಾನುಭವಿಗಳಲ್ಲದವರಿಗೆ 200 ರೂ ಕಡಿಮೆ ದರದ ಸಿಲಿಂಡರ್ ಸಬ್ಸಿಡಿ ದೊರೆಯಲಿದೆ ಎಂದು ಹೇಳಿದೆ.
ಇದರ ಬೆನ್ನಲ್ಲೇ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, "ರಕ್ಷಾ ಬಂಧನದ ಹಬ್ಬವು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಗ್ಯಾಸ್ ಬೆಲೆಯಲ್ಲಿನ ಇಳಿಕೆಯು ನನ್ನ ಕುಟುಂಬದಲ್ಲಿನ ಸಹೋದರಿಯರ ಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿಯು ಸಂತೋಷವಾಗಿರಿ, ಆರೋಗ್ಯವಾಗಿರಿ, ಇದು ದೇವರಿಂದ ನನ್ನ ಹಾರೈಕೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸರ್ಕಾರದ ಗ್ಯಾಸ್ ಸಿಲಿಂಡರ್ ದರ ಕಡಿತ ಕ್ರಮವು ಬುಧವಾರದಿಂದ ಜಾರಿಗೆ ಬರಲಿದ್ದು, ದೇಶದಾದ್ಯಂತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 200 ರೂಪಾಯಿ ಇಳಿಕೆಯಾಗಲಿದೆ.
Advertisement