ನಕಲಿ ಸುಪ್ರೀಂ ಕೋರ್ಟ್ ವೆಬ್‌ಸೈಟ್ ಸೃಷ್ಟಿ; ಫಿಶಿಂಗ್ ಅಟ್ಯಾಕ್ ಬಗ್ಗೆ ವಕೀಲರು, ದಾವೆದಾರರಿಗೆ ಸಿಜೆಐ ಎಚ್ಚರಿಕೆ!

ಫಿಶಿಂಗ್ ಅಟ್ಯಾಕ್ ಗಾಗಿ ಸೃಷ್ಟಿಸಲಾದ ಸುಪ್ರೀಂ ಕೋರ್ಟ್‌ನ ನಕಲಿ ವೆಬ್‌ಸೈಟ್ ಕುರಿತು ವಕೀಲರು ಮತ್ತು ದಾವೆದಾರರಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಗುರುವಾರ ಎಚ್ಚರಿಕೆ ನೀಡಿದ್ದಾರೆ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.
ಸಿಜೆಐ ಚಂದ್ರಚೂಡ್
ಸಿಜೆಐ ಚಂದ್ರಚೂಡ್

ನವದೆಹಲಿ: ಫಿಶಿಂಗ್ ಅಟ್ಯಾಕ್ ಗಾಗಿ ಸೃಷ್ಟಿಸಲಾದ ಸುಪ್ರೀಂ ಕೋರ್ಟ್‌ನ ನಕಲಿ ವೆಬ್‌ಸೈಟ್ ಕುರಿತು ವಕೀಲರು ಮತ್ತು ದಾವೆದಾರರಿಗೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಗುರುವಾರ ಎಚ್ಚರಿಕೆ ನೀಡಿದ್ದಾರೆ ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ.

ಈ ಸಂಬಂಧ ಸರ್ವೋಚ್ಚ ನ್ಯಾಯಾಲಯ ಸಾರ್ವಜನಿಕ ನೋಟಿಸ್  ಸಹ ಹೊರಡಿಸಿದೆ. ಅಲ್ಲದೇ,  ಸ್ವೀಕರಿಸುವ ಯಾವುದೇ ವೆಬ್‌ಸೈಟ್ ಲಿಂಕ್‌ಗಳನ್ನು ಅವುಗಳ ಸತ್ಯಾಸತ್ಯತೆ ಪರಿಶೀಲಿಸದೆ ಕ್ಲಿಕ್ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ ಸೂಚನೆ ನೀಡಿದೆ.  ದಯವಿಟ್ಟು ಜಾಗರೂಕರಾಗಿರಿ. ಆ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ. ಅದನ್ನು ಹಣಕಾಸು ವ್ಯವಹಾರಗಳಿಗೆ ವ ಬಳಸಬೇಡಿ ಎಂದು 370 ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳ ವಿಚಾರಣೆಯ ಸಂವಿಧಾನ ಪೀಠದಲ್ಲಿ ಕುಳಿತಿದ್ದ ಸಿಜೆಐ ಚಂದ್ರಚೂಡ್ ಹೇಳಿದರು.

ಫಿಶಿಂಗ್ ದಾಳಿಯ ಕುರಿತು ಸುಪ್ರೀಂ ಕೋರ್ಟ್ ಆಫ್ ಇಂಡಿಯಾದ ರಿಜಿಸ್ಟ್ರಿಗೆ ತಿಳಿಸಲಾಗಿದೆ. ಅಧಿಕೃತ ವೆಬ್‌ಸೈಟ್ ಹೋಲುವ ನಕಲಿ ವೆಬ್‌ಸೈಟ್  ರಚಿಸಲಾಗಿದ್ದು, ಯುಆರ್ ಎಲ್ ನಲ್ಲಿ ಹೋಸ್ಟ್ ಮಾಡಲಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ. URL ಮೂಲಕ ದಾಳಿಕೋರರು ವೈಯಕ್ತಿಕ ವಿವರಗಳು ಮತ್ತು ಗೌಪ್ಯ ಮಾಹಿತಿಯನ್ನು ಕೋರುತ್ತಿದ್ದಾರೆ. ಅಂತಹ ಯುಆರ್ ಎಲ್ ಗಳಲ್ಲಿ ಯಾವುದೇ ಸಂದರ್ಶಕರು ಯಾವುದೇ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳದಂತೆ ಮತ್ತು ಬಹಿರಂಗಪಡಿಸದಂತೆ ಸಲಹೆ ನೀಡಲಾಗುತ್ತಿದೆ ಏಕೆಂದರೆ ಇದು ಅಪರಾಧಿಗಳಿಗೆ ಮಾಹಿತಿಯನ್ನು ಕದಿಯಲು ಅನುವು ಮಾಡಿಕೊಡುತ್ತದೆ ಎಂದು ಅದು ಹೇಳಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯು ವೈಯಕ್ತಿಕ ಮಾಹಿತಿ, ಹಣಕಾಸಿನ ವಿವರಗಳು ಅಥವಾ ಇತರ ಗೌಪ್ಯ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂದು ನೋಟಿಸ್ ಹೇಳಿದೆ. www.sci.gov.in ಭಾರತದ ಸರ್ವೋಚ್ಚ ನ್ಯಾಯಾಲಯದ ನೋಂದಾಯಿತ ಡೊಮೇನ್ ಆಗಿದ್ದು, ಯಾವುದೇ URL  ಕ್ಲಿಕ್ ಮಾಡುವ ಮೊದಲು ಅದನ್ನು ಪರಿಶೀಲಿಸಿ ಎಂದು ಹೇಳಲಾಗಿದೆ. 

ಒಂದು ವೇಳೆ ನೀವು ಫಿಶಿಂಗ್ ದಾಳಿಗೆ ಒಳಗಾಗಿದ್ದರೆ ದಯವಿಟ್ಟು ನಿಮ್ಮ ಎಲ್ಲಾ ಆನ್‌ಲೈನ್ ಖಾತೆಗಳಿಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ ಮತ್ತು ಅಂತಹ ಅನಧಿಕೃತ ಪ್ರವೇಶವನ್ನು ವರದಿ ಮಾಡಲು ನಿಮ್ಮ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಕಂಪನಿಯನ್ನು ಸಂಪರ್ಕಿಸಿ. ಫಿಶಿಂಗ್ ದಾಳಿಯ ಬಗ್ಗೆ ಭಾರತದ ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿ ಸರಿಯಾದ ಕಾಳಜಿ ತೆಗೆದುಕೊಂಡಿದೆ ಮತ್ತು ತನಿಖೆ ಹಾಗೂ ಅಪರಾಧಿಗಳಿಗೆ ಶಿಕ್ಷೆ ಕೊಡಲು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಫ್ಲ್ಯಾಗ್ ಮಾಡಿದೆ ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com