ಡಿ.17 ಕ್ಕೆ INDIA ಮೈತ್ರಿಕೂಟದ ಸಭೆ ನಿಗದಿ, 2024 ರ ಚುನಾವಣೆಗೆ ಕಾರ್ಯತಂತ್ರದ ಚರ್ಚೆ: ಆರ್ ಜೆಡಿ ನಾಯಕ ಲಾಲು

ವಿಪಕ್ಷಗಳ ಮೈತ್ರಿಕೂಟ INDIA ಸಭೆ ಡಿ.17 ರಂದು ನಡೆಯಲಿರುವುದಾಗಿ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ. 
INDIA ಮೈತ್ರಿಕೂಟದ ನಾಯಕರು
INDIA ಮೈತ್ರಿಕೂಟದ ನಾಯಕರು

ಪಾಟ್ನ: ವಿಪಕ್ಷಗಳ ಮೈತ್ರಿಕೂಟ INDIA ಸಭೆ ಡಿ.17 ರಂದು ನಡೆಯಲಿರುವುದಾಗಿ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಸ್ಪಷ್ಟಪಡಿಸಿದ್ದಾರೆ. 

2024 ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಚರ್ಚಿಸಲು ಡಿ.06 ರಂದು ಸಭೆ ನಡೆಯಬೇಕಿತ್ತು. 

ಆದರೆ ಡಿ.06 ರಂದು ಮಮತಾ ಬ್ಯಾನರ್ಜಿ, ನಿತೀಶ್ ಸೇರಿದಂತೆ ಹಲವು ಪ್ರಮುಖ ನಾಯಕರ ಅಲಭ್ಯತೆಯ ಕಾರಣದಿಂದ ಸಭೆಯನ್ನು ಮುಂದೂಡಲಾಗಿತ್ತು.  ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಲಾಲು ಪ್ರಸಾದ್ ಯಾದವ್, ಸಭೆಯನ್ನು ಡಿ.17 ಕ್ಕೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಮುಖ ನಾಯಕರ ಗೈರು ಸಾಧ್ಯತೆ: INDIA ಮೈತ್ರಿಕೂಟ ಸಭೆ ಮುಂದೂಡಿದ ಕಾಂಗ್ರೆಸ್
 
ಇನ್ನು ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆಯೂ ಲಾಲು ಪ್ರಸಾದ್ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ದುರ್ಬಲವಾಗಿಲ್ಲ. ಆದರೆ ರಾಜ್ಯಗಳಲ್ಲಿನ ಸ್ಥಳೀಯ ನಾಯಕತ್ವದ ದುರ್ಬಲತೆಯಿಂದಾಗಿ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಸೋತಿದೆ. ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸ್ಥಳೀಯ ನಾಯಕತ್ವದೆಡೆಗೆ ಕಾಂಗ್ರೆಸ್ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com