ಮತ್ತೆ ಸಿಕ್ಕ ಕಳ್ಳತನವಾಗಿದ್ದ ಬೈಕ್; ಕಳ್ಳನ ಮನ ಬದಲಾಯಿಸಿತು ಸಾಮಾಜಿಕ ಮಾಧ್ಯಮದ ಪೋಸ್ಟ್!

ಅಪರೂಪದ ಘಟನೆಯೊಂದರಲ್ಲಿ, ಸೂರತ್ ನಗರದಲ್ಲಿ ಕಳ್ಳನೊಬ್ಬನ ಮನಸ್ಸನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್‌ವೊಂದು ಬದಲಾಯಿಸಿದೆ. ಕಳ್ಳತನವಾಗಿದ್ದ ಬೈಕ್ ಮತ್ತೆ ಮಾಲೀಕನಿಗೆ ದೊರಕಿದೆ.
ಬೈಕ್‌ ಜೊತೆಗಿದ್ದ ಕಳ್ಳನ ಸಿಸಿಟಿವಿ ದೃಶ್ಯಾವಳಿ
ಬೈಕ್‌ ಜೊತೆಗಿದ್ದ ಕಳ್ಳನ ಸಿಸಿಟಿವಿ ದೃಶ್ಯಾವಳಿ

ಅಹಮದಾಬಾದ್: ಅಪರೂಪದ ಘಟನೆಯೊಂದರಲ್ಲಿ, ಸೂರತ್ ನಗರದಲ್ಲಿ ಕಳ್ಳನೊಬ್ಬನ ಮನಸ್ಸನ್ನು ಸಾಮಾಜಿಕ ಮಾಧ್ಯಮದ ಪೋಸ್ಟ್‌ವೊಂದು ಬದಲಾಯಿಸಿದೆ. ಕಳ್ಳತನವಾಗಿದ್ದ ಬೈಕ್ ಮತ್ತೆ ಮಾಲೀಕನಿಗೆ ದೊರಕಿದೆ.

ಸೂರತ್‌ನ ವಜ್ರದ ಕೆಲಸಗಾರ ಪರೇಶ್ ಪಟೇಲ್ ಎಂಬುವವರು ಮೋಟಾ ವರಚಾದಿಂದ ತಮ್ಮ ಮೋಟಾರ್‌ಸೈಕಲ್ ಅನ್ನು ಕಳೆದುಕೊಂಡಿದ್ದರು. ಬೈಕ್ ಕಳ್ಳತನವಾದಾಗ, ಪೊಲೀಸರಿಗೆ ದೂರು ನೀಡುವ ಬದಲು, ಪಟೇಲ್ ತನ್ನ ಪ್ರೀತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದವನನ್ನು ಉದ್ಧೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
 

ಪಟೇಲ್ ಆ ಪೋಸ್ಟ್‌ನಲ್ಲಿ, 'ನನಗಿಂತ ಹೆಚ್ಚು ನಿಮಗೆ ಆ ಮೋಟಾರ್‌ ಸೈಕಲ್‌ನ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಬಳಿ ಬೈಸಿಕಲ್ ಇದೆ ಮತ್ತು ನಾನು ಅದರ ಮೇಲೆ ತಿರುಗಬಹುದು. ನೀವು ನನ್ನ ಮೋಟಾರ್‌ ಸೈಕಲ್ ಅನ್ನು ಕದ್ದ ಸ್ಥಳದ ನೆಲಮಾಳಿಗೆಯ ಪಾರ್ಕಿಂಗ್ ಸ್ಥಳದಲ್ಲಿ ವಿದ್ಯುತ್ ಮೀಟರ್‌ನ ಪಕ್ಕದಲ್ಲಿ ನಾನು ಮೋಟಾರ್‌ ಸೈಕಲ್‌ನ ಪೇಪರ್‌ಗಳು ಮತ್ತು ಆರ್‌ಸಿ ಪುಸ್ತಕವನ್ನು ಇಟ್ಟಿರುತ್ತೇನೆ' ಎಂದು ಬರೆದಿದ್ದರು.

ಈ ಸಂದೇಶವು ಸೂರತ್‌ನಾದ್ಯಂತ ವ್ಯಾಪಕವಾಗಿ ಪ್ರತಿಧ್ವನಿಸಿದೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಳ್ಗಿಚ್ಚಿನಂತೆ ಹರಡಿದೆ. ಆದರೆ, ಪವಾಡವೆಂಬಂತೆ ಸಾಮಾಜಿಕ ಮಾಧ್ಯಮದಲ್ಲಿನ ಈ ಸಂದೇಶ ಕಳ್ಳನ ಮನಸ್ಸನ್ನು ಬದಲಾಯಿಸಿದೆ.

ಬೈಕು ಮತ್ತು ಅದರ ದಾಖಲೆಗಳನ್ನು ತೆಗೆದುಕೊಳ್ಳುವ ಅವಕಾಶವನ್ನು ಬಳಸಿಕೊಳ್ಳುವ ಬದಲು, ಕಳ್ಳ ತಾನು ಎಲ್ಲಿಂದ ಮೋಟಾರ್‌ ಸೈಕಲ್ ಅನ್ನು ಕದ್ದಿದ್ದನೋ, ಅಲ್ಲಿಯೇ ನಿಲ್ಲಿಸಿದ್ದಾನೆ. ಅದಾದ, ನಾಲ್ಕು ದಿನಗಳ ನಂತರ ಆ ಬೈಕ್ ಮತ್ತೆ ಪಟೇಲ್ ಅವರನ್ನು ಸೇರಿದೆ.

ಈ ಘಟನೆಗಳ ಅನಿರೀಕ್ಷಿತ ತಿರುವಿನಿಂದ ಉತ್ಸುಕರಾದ ಪಟೇಲ್ ಸುದ್ದಿಗಾರರೊಂದಿಗೆ ಮಾತನಾಡಿ, 'ಐದು ದಿನಗಳ ಹಿಂದೆ, ನಾನು ನನ್ನ ಬೈಕನ್ನು ಯಾವಾಗಲೂ ನಿಲ್ಲಿಸುತ್ತಿದ್ದ ಸ್ಥಳದಲ್ಲಿಯೇ ಪಾರ್ಕ್ ಮಾಡಿದ್ದೆ. ಬಳಿಕ ಸಂಜೆ ವೇಳೆಗೆ ಅದು ಕಾಣೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬೈಕ್ ಕಳ್ಳತನವಾಗಿರುವುದು ತಿಳಿಯಿತು' ಎನ್ನುತ್ತಾರೆ. 

ಬೈಕ್ ಕಳ್ಳ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರಬಹುದೆಂದು ಊಹಿಸಿ, ಆತನನ್ನು ಉದ್ದೇಶಿಸಿ, 'ಶ್ರೀಯುತ ಕಳ್ಳ, ನೀನು ನನ್ನ ಬೈಕ್ ತೆಗೆದುಕೊಂಡು ಹೋದೆ. ಇದೀಗ ಆ ಬೈಕಿನ ಆರ್‌ಸಿ ಪುಸ್ತಕ ಮತ್ತು ಕೀಯನ್ನು ಕೂಡ ತೆಗೆದುಕೊಂಡು ಹೋಗು. ನಾನು ಅವುಗಳನ್ನು ಪಾರ್ಕಿಂಗ್ ಸ್ಥಳದಲ್ಲಿ ಇಟ್ಟಿದ್ದೇನೆ. ನೀವು ಆರಾಮಾಗಿ ಬೈಕ್ ಓಡಿಸಿ. ನನ್ನ ಬಳಿ ಸೈಕಲ್ ಇದೆ, ಅದರಲ್ಲಿ ನಾನು ನನ್ನ ಕೆಲಸವನ್ನು ಮಾಡಿಕೊಳ್ಳುತ್ತೇನೆ' ಎಂದು ಪಟೇಲ್ ಬರೆದಿದ್ದರು.

ಬಳಿಕ ಅನಿರೀಕ್ಷಿತ ಟ್ವಿಸ್ಟ್‌ ಎದುರಾಗಿದ್ದು, ಪಟೇಲರ ಮಾತುಗಳು ಕಳ್ಳನ ಮನಸ್ಸನ್ನು ಮುಟ್ಟಿದೆ. ಕಳ್ಳ ಬೈಕನ್ನು ಕದ್ದ ಸ್ಥಳಕ್ಕೇ ತಂದು ನಿಲ್ಲಿಸಿದ್ದು, ಕಳ್ಳತನದ ಸಮಯದಲ್ಲಿ ಉಂಟಾದ ಹಾನಿಯನ್ನು ಸರಿಪಡಿಸಲು ಮುಂದಾಗಿದ್ದಾನೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com