
ಮಲಪ್ಪುರಂ: ಕರ್ನಾಟಕದಿಂದ ಬರುತ್ತಿದ್ದ ಶಬರಿಮಲೆ ಯಾತ್ರಾರ್ಥಿಗಳ ಬಸ್‌ಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ನಾಲ್ವರು ಪ್ರಯಾಣಿಕರು ಸೇರಿದಂತೆ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಂಚೇರಿಯಲ್ಲಿ ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಸಂಭವಿಸಿದೆ.
ನಿನ್ನೆ ಸಂಜೆ ಆರು ಗಂಟೆಗೆ ಮಂಚೇರಿ-ಅರೀಕೋಡು ರಸ್ತೆಯ ಚೆಟ್ಟಿಅಂಗಡಿ ಎಂಬಲ್ಲಿ ಅಪಘಾತ ನಡೆದಿದೆ. ಶಬರಿಮಲೆ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಕರ್ನಾಟಕ ಬಸ್ ಮತ್ತು ಆಟೋ ಮಧ್ಯೆ ಅಪಘಾತವಾಗಿದೆ.
ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಅಬ್ದುಲ್ ಮಜೀದ್ (50) ಮತ್ತು ಪ್ರಯಾಣಿಕರಾದ ಥೆಸ್ಲೀಮಾ (34) ಮುಹ್ಸಿನಾ (32) ಮತ್ತು ಅವರ ಮಕ್ಕಳಾದ ರೈಹಾ ಫಾತಿಮಾ (4) ಮತ್ತು ರಿನ್ಶಾ ಫಾತಿಮಾ (7) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ದೇಹಗಳನ್ನು ಮಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಮಲಪ್ಪುರಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಶಶಿಧರನ್ ಎಸ್, ಮೋಟಾರು ವಾಹನ ಇಲಾಖೆಯೊಂದಿಗೆ ಪೊಲೀಸರು ಜಂಟಿ ತನಿಖೆ ನಡೆಸಲಿದ್ದಾರೆ. ಅಪಘಾತ ಸ್ಥಳವನ್ನು ಸರಿಯಾಗಿ ಪರಿಶೀಲಿಸಿ ರಸ್ತೆಯಲ್ಲಿ ಏನಾದರೂ ಸಮಸ್ಯೆಗಳಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. ಮುಂದೆ ಇಂತಹ ಅಪಘಾತಗಳು ಸಂಭವಿಸದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಘಟನೆಯಲ್ಲಿ ಐವರು ಶಬರಿಮಲೆ ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Advertisement