2024: ಮೂರನೇ ಬಾರಿ ಪ್ರಧಾನಿ ಆಗುತ್ತಾರಾ ಮೋದಿ? ಜಾಗತಿಕ ಮಟ್ಟದಲ್ಲಿ ಐದು ಪ್ರಮುಖ ದೇಶಗಳ ಚುನಾವಣೆ ನಡೆಯುವ ವರ್ಷ!

ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷರಾಗುತ್ತಾರೆಯೇ? ರಷ್ಯಾದಲ್ಲಿ ಯಾರಾದರೂ ವ್ಲಾಡಿಮಿರ್ ಪುಟಿನ್ ಅವರನ್ನು ಎದುರಿಸಬಹುದೇ? ಭಾರತದಲ್ಲಿ ಮೂರನೇ ಬಾರಿಗೆ ಮೋದಿ ಸರ್ಕಾರ ಬರುತ್ತದೆಯೇ? ಹೀಗೆ ವಿಶ್ವದಲ್ಲಿ ಪ್ರಮುಖ ಚುನಾವಣೆಗಳು ನಡೆಯುವ, ವಿಶ್ವ ನಾಯಕರ ಭವಿಷ್ಯ ನಿರ್ಧಾರವಾಗುವ ವರ್ಷ 2024 ಆಗಿದೆ. 
ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್(ಸಂಗ್ರಹ ಚಿತ್ರ)
ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿ ಮತ್ತು ವ್ಲಾಡಿಮಿರ್ ಪುಟಿನ್(ಸಂಗ್ರಹ ಚಿತ್ರ)

ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕ ಅಧ್ಯಕ್ಷರಾಗುತ್ತಾರೆಯೇ? ರಷ್ಯಾದಲ್ಲಿ ಯಾರಾದರೂ ವ್ಲಾಡಿಮಿರ್ ಪುಟಿನ್ ಅವರನ್ನು ಎದುರಿಸಬಹುದೇ? ಭಾರತದಲ್ಲಿ ಮೂರನೇ ಬಾರಿಗೆ ಮೋದಿ ಸರ್ಕಾರ ಬರುತ್ತದೆಯೇ? ಹೀಗೆ ವಿಶ್ವದಲ್ಲಿ ಪ್ರಮುಖ ಚುನಾವಣೆಗಳು ನಡೆಯುವ, ವಿಶ್ವ ನಾಯಕರ ಭವಿಷ್ಯ ನಿರ್ಧಾರವಾಗುವ ವರ್ಷ 2024 ಆಗಿದೆ. 

40ಕ್ಕೂ ಹೆಚ್ಚು ದೇಶಗಳಲ್ಲಿ ಮೂರು ಶತಕೋಟಿ ಮತದಾರರು 2024 ರಲ್ಲಿ ತಮ್ಮ ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡುತ್ತಾರೆ, ಜನವರಿಯಲ್ಲಿ ತೈವಾನ್‌ನ ಚುನಾವಣೆಯಿಂದ ಪ್ರಾರಂಭಿಸಿ ವರ್ಷದ ಕೊನೆಗೆ ಅಂದರೆ 2024ರ ನವೆಂಬರ್ ನಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷೀಯ ಚುನಾವಣೆಯವರೆಗೆ ಪ್ರಮುಖ ಚುನಾವಣೆಗಳು ನಡೆಯಲಿವೆ. ಭಾರತ, ಇಂಡೋನೇಷ್ಯಾ, ಇರಾನ್, ಪಾಕಿಸ್ತಾನ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಹ ಮುಂದಿನ ವರ್ಷ ಚುನಾವಣೆಗಳು ನಡೆಯಲಿವೆ.

ಬ್ಲೂಮ್‌ಬರ್ಗ್ ಎಕನಾಮಿಕ್ಸ್ ಪ್ರಕಾರ, ಈ ರಾಷ್ಟ್ರಗಳಲ್ಲಿನ ಮತದಾರರು ಪ್ರಪಂಚದ ಜನಸಂಖ್ಯೆಯ ಸುಮಾರು ಶೇಕಡಾ 41ರಷ್ಟು ಪ್ರತಿನಿಧಿಸುತ್ತಾರೆ. 44.2 ಟ್ರಿಲಿಯನ್ ಡಾಲರ್ ಅಥವಾ ಗರಿಷ್ಠ ಬೆಳವಣಿಗೆ ದರದ ಶೇಕಡಾ 42ರಷ್ಟು ಕೊಡುಗೆ ನೀಡಲಿದ್ದಾರೆ.

ಜಾಗತಿಕ ಆರ್ಥಿಕತೆಯು ಈ ವರ್ಷ ಗಾಜಾ ಮತ್ತು ಉಕ್ರೇನ್‌ನಲ್ಲಿ ಎರಡು ತೀವ್ರವಾದ ಘರ್ಷಣೆಗಳ ನಡುವೆ ಸತತ ಸವಾಲುಗಳನ್ನು ಎದುರಿಸುತ್ತಿದೆ, ನಿರಂತರ ಹಣದುಬ್ಬರ ಮತ್ತು ಹೆಚ್ಚಿದ ಸಾಲದ ವೆಚ್ಚಗಳು, ಸಾಂಕ್ರಾಮಿಕ ನಂತರದ ಬದುಕನ್ನು ಸಾಮಾನ್ಯ ಸ್ಥಿತಿಗೆ ತರಲು ಅಡ್ಡಿಯಾಗುತ್ತಿದೆ, 2024 ರ ಚುನಾವಣಾ ವರ್ಷವು ಜಗತ್ತಿನಲ್ಲಿ ಬಹುಮುಖಿ ಬಿಕ್ಕಟ್ಟುಗಳ ಈ ಯುಗದಲ್ಲಿ ನಿರ್ಣಾಯಕವಾಗಿದೆ. 

2024 ರಲ್ಲಿ ವಿಶ್ವದ ಶೇಕಡಾ 40ಕ್ಕಿಂತ ಹೆಚ್ಚು ಜನರು ಮತ ಚಲಾಯಿಸುತ್ತಿದ್ದು, ಐದು ಪ್ರಮುಖ ದೇಶಗಳ ಚುನಾವಣೆಗಳು ಇಲ್ಲಿವೆ:

ಟ್ರಂಪ್-ಬೈಡನ್ ಹಣಾಹಣಿ:

2024ರ ನವೆಂಬರ್ 5 ರಂದು, ಅಮೆರಿಕನ್ನರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ, ಇಲ್ಲಿ ಜೊ ಬೈಡನ್ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯೆ ನೇರ ಹಣಾಹಣಿಯಾಗಿದೆ. 86 ವರ್ಷದ ಜೊ ಬೈಡನ್ ಅವರ ಪ್ರತಿಸ್ಪರ್ಧಿ, ಮಾಜಿ ಅಧ್ಯಕ್ಷ 77 ವರ್ಷದ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತೊಮ್ಮೆ ಎದುರಿಸಿ ಇಲ್ಲಿ ರಿಪಬ್ಲಿಕನ್ ಪಕ್ಷ ಅಥವಾ ಡೆಮಾಕ್ರಟ್ ಪಕ್ಷ ಬರುತ್ತದೆಯೇ ಎಂಬುದನ್ನು ನೋಡಬೇಕಿದೆ. 

ಮತ್ತೊಮ್ಮೆ ಅಧಿಕಾರದ ಮೇಲೆ ಪುಟಿನ್ ಕಣ್ಣು:

ಎರಡು ವರ್ಷಗಳ ಯುದ್ಧದಲ್ಲಿ ಉಕ್ರೇನ್‌ನಲ್ಲಿ ತಮ್ಮ ಸ್ಥಾನಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ತನ್ನ ಪಡೆಗಳ ಯಶಸ್ಸಿನಿಂದ ಹುಮ್ಮಸ್ಸಿನಲ್ಲಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಮುಂದಿನ ಮಾರ್ಚ್ ಚುನಾವಣೆಯಲ್ಲಿ ತನ್ನ 24 ವರ್ಷಗಳ ಆಡಳಿತವನ್ನು ಇನ್ನೂ ಆರು ವರ್ಷಗಳವರೆಗೆ ವಿಸ್ತರಿಸಲು ಆಶಿಸುತ್ತಿದ್ದಾರೆ. ಡಿಸೆಂಬರ್ 8 ರಂದು ಅವರು ಐದನೇ ಅವಧಿಗೆ ಸ್ಪರ್ಧಿಸುವುದಾಗಿ ಘೋಷಿಸಿದರು, ಅವರು ಅಧಿಕಾರಕ್ಕೆ ಬಂದರೆ 2030 ರವರೆಗೆ ಅಧಿಕಾರದಲ್ಲಿ ಇರುತ್ತಾರೆ. 2020 ರಲ್ಲಿ, ಅವರು 2036 ರವರೆಗೆ ಸೈದ್ಧಾಂತಿಕವಾಗಿ ಅಧಿಕಾರದಲ್ಲಿ ಉಳಿಯಲು ಸಂವಿಧಾನವನ್ನು ತಿದ್ದುಪಡಿ ಮಾಡಿದರು.

3ನೇ ಅವಧಿಗೆ ಪ್ರಧಾನಿಯಾಗುತ್ತಾರಾ ಮೋದಿ?:

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ರಾಷ್ಟ್ರೀಯವಾದಿ ಬಿಜೆಪಿ ಪಕ್ಷವು ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದು, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವು ಚುನಾವಣೆ ಎದುರಿಸುತ್ತಿದ್ದು, ಸುಮಾರು ಒಂದು ಶತಕೋಟಿ ಭಾರತೀಯರು ಏಪ್ರಿಲ್-ಮೇ ತಿಂಗಳಲ್ಲಿ ಮತ ಚಲಾಯಿಸಲಿದ್ದಾರೆ. 

ಮೋದಿಯವರ ರಾಜಕೀಯ ಜೀವನ ಮತ್ತು ಯಶಸ್ಸು ಭಾರತದ ಒಂದು ಬಿಲಿಯನ್ ಗೂ ಅಧಿಕ ಹಿಂದೂಗಳ ಬೆಂಬಲವನ್ನು ಆಧರಿಸಿದೆ. ದೇಶದ ದೊಡ್ಡ ಮುಸ್ಲಿಂ ಅಲ್ಪಸಂಖ್ಯಾತರ ಕಡೆಗೆ ದ್ವೇಷವನ್ನು ಹುಟ್ಟುಹಾಕುತ್ತದೆ ಎಂದು ವಿಮರ್ಶಕರು ಹೇಳುತ್ತಾರೆ.

ಐರೋಪ್ಯ ಒಕ್ಕೂಟ:

ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಯಲ್ಲಿ 400 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿರುತ್ತಾರೆ. 400 ದಶಲಕ್ಷಕ್ಕೂ ಹೆಚ್ಚು ಮತದಾರರು 27 ಸದಸ್ಯ ರಾಷ್ಟ್ರಗಳಲ್ಲಿ ಯುರೋಪಿಯನ್ ಪಾರ್ಲಿಮೆಂಟ್‌ನ 720 ಸದಸ್ಯರನ್ನು ಆಯ್ಕೆ ಮಾಡುತ್ತಾರೆ.

ಮೆಕ್ಸಿಕನ್ ಗೆ ಮೊದಲ ಅಧ್ಯಕ್ಷೆ?:

ಜೂನ್‌ನಲ್ಲಿ ಮೆಕ್ಸಿಕೊದಲ್ಲಿ ಮ್ಯಾಚಿಸ್ಮೋ ಸಂಪ್ರದಾಯವನ್ನು ಹೊಂದಿರುವ ದೇಶದ ಮೊದಲ ಮಹಿಳಾ ಅಧ್ಯಕ್ಷರಾಗುವ ಮೂಲಕ ಇತಿಹಾಸ ನಿರ್ಮಿಸಲು ನಿರ್ಗಮಿತ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಮೊರೆನಾ ಪಕ್ಷದ ಪರವಾಗಿ ಮೆಕ್ಸಿಕೋ ನಗರದ ಮಾಜಿ ಮೇಯರ್ ಕ್ಲೌಡಿಯಾ ಶೀನ್‌ಬಾಮ್ ಸ್ಪರ್ಧಿಸುತ್ತಿದ್ದಾರೆ.

ಆಕೆಯ ಬಹಿರಂಗ ಎದುರಾಳಿ ಕ್ಸೊಕಿಟಿ ಗಲ್ವೇಝ್ ಅವರು ಮೆಕ್ಸಿಕೋದ ಬ್ರಾಡ್ ಫ್ರಂಟ್ ಎಂಬ ವಿರೋಧ ಒಕ್ಕೂಟವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com