ಭಾರತದ ಮೊದಲ ವೈಡ್​ ಬಾಡಿ ವಿಮಾನ: Air India ತೆಕ್ಕೆ ಸೇರಿತು ಮೊದಲ ಏರ್ ಬಸ್ A350 ವಿಮಾನ

ದೇಶದ ಮೊದಲ ವೈಡ್​ ಬಾಡಿ ವಿಮಾನ Air India ತೆಕ್ಕೆ ಸೇರಿದ್ದು, ಏರ್ ಬಸ್ A350 ವಿಮಾನವನ್ನು ಏರ್ ಇಂಡಿಯಾ ಸಂಸ್ಥೆ ಇಂದು ತನ್ನ ಕಾರ್ಯಾಚರಣೆಗೆ ಸೇರಿಸಿಕೊಂಡಿದೆ.
ಏರ್ ಬಸ್ A350 ವಿಮಾನ
ಏರ್ ಬಸ್ A350 ವಿಮಾನ

ಬೆಂಗಳೂರು: ದೇಶದ ಮೊದಲ ವೈಡ್​ ಬಾಡಿ ವಿಮಾನ Air India ತೆಕ್ಕೆ ಸೇರಿದ್ದು, ಏರ್ ಬಸ್ A350 ವಿಮಾನವನ್ನು ಏರ್ ಇಂಡಿಯಾ ಸಂಸ್ಥೆ ಇಂದು ತನ್ನ ಕಾರ್ಯಾಚರಣೆಗೆ ಸೇರಿಸಿಕೊಂಡಿದೆ.

ದೀರ್ಘ ಪ್ರಯಾಣಕ್ಕೆ ಸೂಕ್ತವಾಗುವ ಐಷಾರಾಮಿ ಸೌಕರ್ಯಗಳನ್ನು ಕಲ್ಪಿಸುವ ವೈಡ್​ ಬಾಡಿ A350 ವಿಮಾನ ಟಾಟಾ ಮಾಲೀಕತ್ವದ ಏರ್​ಇಂಡಿಯಾ (Air India) ಸಂಸ್ಥೆಯ ತಕ್ಕೆ ಸೇರಿದೆ. ಇದು ಭಾರತ ಮೂಲಕ ಸಂಸ್ಥೆಯೊಂದು ಕಾರ್ಯಾಚರಣೆ ಮಾಡಲಿರುವ ಮೊಟ್ಟಮೊದಲ ವೈಡ್​ ಬಾಡಿ ವಿಮಾನವಾಗಿದೆ. ಈ ವಿಮಾನ ನ್ಯಾರೊ ವಿಮಾನಕ್ಕಿಂತ ಎರಡು ಪಟ್ಟು ಅಗಲವಾಗಿದ್ದು, ಮಲಗಿಕೊಂಡು ಪ್ರಯಾಣ ಮಾಡಬಲ್ಲ ಸೀಟಿಂಗ್ ವ್ಯವಸ್ಥೆಯನ್ನೂ ನಿರ್ಮಿಸಲು ಪೂರಕವಾಗಿದೆ.

ಇದೇ ಮಾದರಿಯ 20 ವಿಮಾನಗಳಿಗೆ ಟಾಟಾ ಆರ್ಡರ್ ನೀಡಿದ್ದು, ಅದರಲ್ಲಿ ಮೊದಲ ವಿಮಾನ 350-900 ಭಾರತಕ್ಕೆ ಬಂದಿಳಿದಿದೆ. ಏರ್ ಇಂಡಿಯಾದ ಫ್ಲೀಟ್ ವಿಸ್ತರಣೆ ಯೋಜನೆಯಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ದೆಹಲಿಗೆ ಬಂದಿಳಿದ ವಿಮಾನಕ್ಕೆ ಎಲ್ಲಾ ಕಡ್ಡಾಯ ಪರೀಕ್ಷೆಗಳು ಮತ್ತು ತಪಾಸಣೆಗಳನ್ನು ಮಾಡಲಾಗಿದೆ. ಆ ಬಳಿಕ ಕಸ್ಟಮ್ಸ್ ಕ್ಲಿಯರೆನ್ಸ್ ಪಡೆದುಕೊಳ್ಳಲಾಗಿದೆ. ವಿಮಾನದ ಉಪಕರಣಗಳ ಡಿಜಿಸಿಎ ತಪಾಸಣೆಗಳು, ಹಾರಾಟ ಪರೀಕ್ಷೆಗಳನ್ನು ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com