ಉಪನ್ಯಾಸ ನೀಡುವಾಗಲೇ ಹೃದಯಘಾತದಿಂದ ಕಾನ್ಪುರ ಐಐಟಿ ಪ್ರೊಫೆಸರ್ ಸಾವು!

ಐಐಟಿ-ಕಾನ್ಪುರದ 53 ವರ್ಷದ ಹಿರಿಯ ಪ್ರಾಧ್ಯಾಪಕರೊಬ್ಬರು ಹಳೆ ವಿದ್ಯಾರ್ಥಿಗಳ ಸಭೆಯೊಂದರಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಐಐಟಿ ಕಾನ್ಪುರ ಪ್ರೊಫೆಸರ್ ಖಾಂಡೇಕರ್
ಐಐಟಿ ಕಾನ್ಪುರ ಪ್ರೊಫೆಸರ್ ಖಾಂಡೇಕರ್

ಕಾನ್ಪುರ: ಐಐಟಿ-ಕಾನ್ಪುರದ 53 ವರ್ಷದ ಹಿರಿಯ ಪ್ರಾಧ್ಯಾಪಕರೊಬ್ಬರು ಹಳೆ ವಿದ್ಯಾರ್ಥಿಗಳ ಸಭೆಯೊಂದರಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಡೀನ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಾಂಡೇಕರ್ ಅವರು ಶುಕ್ರವಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ವೇದಿಕೆಯ ಮೇಲೆ ಕುಸಿದುಬಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ತಲುಪಿದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ಸೇರಿಸಿದ್ದಾರೆ.

ಸುಮಾರು ಐದು ವರ್ಷಗಳ ಹಿಂದೆ ಖಾಂಡೇಕರ್‌ಗೆ  ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿರುವುದು ಪತ್ತೆಯಾಗಿತ್ತು ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದ್ದಾರೆ. ಅವರು ಅತ್ಯುತ್ತಮ ಶಿಕ್ಷಕ ಮತ್ತು ಸಂಶೋಧಕ ಎಂದು ಬಣ್ಣಿಸಿದ ಐಐಟಿ-ಕಾನ್ಪುರದ ಮಾಜಿ ನಿರ್ದೇಶಕ ಅಭಯ್ ಕರಂಡಿಕರ್, ಖಾಂಡಕೇರ್ ಅವರು ಉಪನ್ಯಾಸ ನೀಡುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಬೆವರತೊಡಗಿದ್ದಾರೆ. ಏನಾಯಿತು ಎಂದು ಅರ್ಥವಾಗುವ ಮೊದಲೇ ಅವರು ವೇದಿಕೆಯ ಮೇಲೆ ಕುಸಿದು ಬಿದ್ದರು ಎಂದು ತಿಳಿಸಿದರು. 

ಮೃತದೇಹವನ್ನು ಐಐಟಿ-ಕಾನ್ಪುರದ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಅವರ ಏಕೈಕ ಪುತ್ರ ಪ್ರವಾಹ್ ಖಾಂಡೇಕರ್ ಆಗಮಿಸಿದ ನಂತರವೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com