ನಾಲ್ಕು ದಿನಗಳ ನಂತರ 276 ಭಾರತೀಯರು ಸ್ವದೇಶಕ್ಕೆ ವಾಪಸ್, 23 ಮಂದಿ ಫ್ರಾನ್ಸ್ ನಲ್ಲಿ ಉಳಿಯಲು ನಿರ್ಧಾರ

ಮಾನವ ಕಳ್ಳಸಾಗಣೆ ಶಂಕೆಯ ಮೇಲೆ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ  ಲ್ಯಾಂಡ್ ಮಾಡಿಸಿದ್ದಾರೆ ಎನ್ನಲಾಗಿದ್ದ ವಿಮಾನದಲ್ಲಿದ್ದ 276 ಜನರು ಭಾರತಕ್ಕೆ ಮರಳಿದ್ದಾರೆ.
ಫ್ರಾನ್ಸ್ ನಲ್ಲಿ ತಡೆದಿದ್ದ ವಿಮಾನ
ಫ್ರಾನ್ಸ್ ನಲ್ಲಿ ತಡೆದಿದ್ದ ವಿಮಾನ

ನವದೆಹಲಿ: ಮಾನವ ಕಳ್ಳಸಾಗಣೆ ಶಂಕೆಯ ಮೇಲೆ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ  ಲ್ಯಾಂಡ್ ಮಾಡಿಸಿದ್ದಾರೆ ಎನ್ನಲಾಗಿದ್ದ ವಿಮಾನದಲ್ಲಿದ್ದ 276 ಜನರು ಭಾರತಕ್ಕೆ ಮರಳಿದ್ದಾರೆ. ಇನ್ನೂ 23 ಜನರು ಫ್ರಾನ್ಸ್ ಗೆ ತೆರಳಲು ನಿರ್ಧರಿಸಿದ್ದಾರೆ. 303 ಭಾರತೀಯ ಪ್ರಯಾಣಿಕರಿದ್ದ ಲೆಜೆಂಡ್ ಏರ್‌ಲೈನ್ಸ್‌ಗೆ ಸೇರಿದ ವಿಮಾನ ನಿಕರಾಗುವಾಕ್ಕೆ ತೆರಳಿದ ಬಳಿಕ ಫುಜಿರಾದಲ್ಲಿ ಅಲ್ಪಾವಧಿಯ ನಿಲುಗಡೆಯೊಂದಿಗೆ ಮುಂಬೈಗೆ ಆಗಮಿಸಿತು.

ವಿಮಾನದಲ್ಲಿ 276 ಪ್ರಯಾಣಿಕರು ಹಿಂತಿರುಗಿದ್ದಾರೆ. ಇದರಲ್ಲಿ 23 ಜನರು ಫ್ರಾನ್ಸ್ ಗೆ ಮರಳಿದ್ದಾರೆ. ಇತರ ಪ್ರಯಾಣಿಕರು ಸ್ವಯಂಪ್ರೇರಣೆಯಿಂದ ಭಾರತಕ್ಕೆ ಮರಳಿದ್ದಾರೆ. ಒಟ್ಟು 303 ಪ್ರಯಾಣಿಕರ ಪೈಕಿ ನಾಲ್ವರು ನೇಪಾಳದವರು. ಇಬ್ಬರು ಪ್ರಯಾಣಿಕರನ್ನು ಫ್ರೆಂಚ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

11 ಅಪ್ರಾಪ್ತ ವಯಸ್ಕರು ಇದ್ದರು. ಅಪ್ರಾಪ್ತ ವಯಸ್ಕರ ವಯಸ್ಸು 21 ತಿಂಗಳಿಂದ 17 ವರ್ಷಗಳವರೆಗೆ ಇದೆ ಎಂದು ಮೂಲಗಳು ತಿಳಿಸಿವೆ. ಬಂಧಿತ ಇಬ್ಬರು ಪ್ರಯಾಣಿಕರನ್ನು ಮಾನವ ಕಳ್ಳಸಾಗಣೆಯಲ್ಲಿ ಅವರ ಪಾತ್ರಕ್ಕಾಗಿ ವಿಚಾರಣೆ ನಡೆಸಲಾಗುತ್ತಿದೆ. ಫ್ರಾನ್ಸ್‌ನಲ್ಲಿ ಮಾನವ ಕಳ್ಳಸಾಗಣೆ 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು.

ಆತಿಥ್ಯದ ಜೊತೆಗೆ ಮನೆಗೆ ಮರಳಲು ಅನುವು ಮಾಡಿಕೊಡುವ ಪರಿಸ್ಥಿತಿಯನ್ನು ತ್ವರಿತವಾಗಿ ಪರಿಹರಿಸಿದ್ದಕ್ಕಾಗಿ ಫ್ರೆಂಚ್ ಸರ್ಕಾರ ಮತ್ತು ವ್ಯಾಟ್ರಿ ವಿಮಾನ ನಿಲ್ದಾಣಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಅಲ್ಲದೆ, ಭಾರತೀಯ ರಾಯಭಾರ ಕಚೇರಿಗೂ  ಧನ್ಯವಾದ ಆರ್ಪಿಸುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com