
ಹಜಾರಿಬಾಗ್: ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ಅಪಹರಣಕ್ಕೊಳಾಗಿ ಕೊಡೆರ್ಮಾ ಜಿಲ್ಲೆಯಲ್ಲಿ ದಂಪತಿಯೊಬ್ಬರಿಗೆ 2.95 ಲಕ್ಷ ರೂ.ಗೆ ಮಾರಾಟವಾಗಿದ್ದ ನಾಲ್ಕು ವರ್ಷದ ಬಾಲಕನನ್ನು ಒಂದು ವಾರದ ನಂತರ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸದರ್ ಉಪವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‌ಡಿಪಿಒ) ಮಹೇಶ್ ಪ್ರಜಾಪತಿ ಮಾತನಾಡಿ, “ಬಾಲಕನನ್ನು ಡಿಸೆಂಬರ್ 18 ರಂದು ಹಜಾರಿಬಾಗ್‌ನ ಓಕ್ನಿ ಪ್ರದೇಶದಲ್ಲಿ ಅಪಹರಿಸಲಾಗಿತ್ತು ಮತ್ತು ಡಿಸೆಂಬರ್ 25 ರಂದು ಕೊಡರ್ಮಾದಲ್ಲಿ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಪಹರಣಕಾರರಿಂದ ಆರು ಮೊಬೈಲ್ ಫೋನ್‌ಗಳು ಮತ್ತು ಬಾಲಕನ ಅಪಹರಣಕ್ಕೆ ಬಳಸಿದ್ದ ಬಟ್ಟೆಯ ಹಾಳೆಯನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬಾಲಕನನ್ನು ಕೊಡೆರ್ಮಾ ಜಿಲ್ಲೆಯ ಇಂದ್ರಪುರಿ ಪ್ರದೇಶದಲ್ಲಿ ಗೀತಾ ದೇವಿ ಮತ್ತು ರೋಹಿತ್ ರವಿದಾಸ್ ದಂಪತಿಗೆ 2.95 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ವಂಶೋದ್ದಾರಕ ಬೇಕು ಎಂಬ ಕಾರಣಕ್ಕೆ ದಂಪತಿಗಳು ಈ ಮಗುವನ್ನು ಖರೀದಿಸಿದ್ದರು ಎಂದು ಅವರು ಹೇಳಿದ್ದಾರೆ.
Advertisement