ಮದುವೆಗೆ ನಿರಾಕರಿಸಿದ್ದ ಶಾಲಾ ಶಿಕ್ಷಕಿಯ ಅಪಹರಣ ಪ್ರಕರಣ ಸುಖಾಂತ್ಯ; ಅಪಹರಣಕಾರರ ಬಂಧನ

ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು ಅಪಹರಣಕಾರರನ್ನು ಬಂಧಿಸಿರುವ ಪೊಲೀಸರು ಶಿಕ್ಷಕಿ ಅರ್ಪಿತಳನ್ನು ರಕ್ಷಿಸಿದ್ದಾರೆ.
ಅರ್ಪಿತಾ
ಅರ್ಪಿತಾ
Updated on

ಹಾಸನ: ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು ಅಪಹರಣಕಾರರನ್ನು ಬಂಧಿಸಿರುವ ಪೊಲೀಸರು ಶಿಕ್ಷಕಿ ಅರ್ಪಿತಳನ್ನು ರಕ್ಷಿಸಿದ್ದಾರೆ.

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಇಂದು ಬೆಳಗ್ಗೆ ಶಿಕ್ಷಕಿ ಅರ್ಪಿತಳನ್ನು ಇನೋವಾ ಕಾರಿನಲ್ಲಿ ಅಪಹರಿಸಲಾಗಿತ್ತು. ಅಪಹರಣದ ವಿಷಯ ತಿಳಿದ ಕೂಡಲೇ ಎಚ್ಚೇತ ಕರ್ನಾಟಕ ಪೊಲೀಸರು ಮೊಬೈಲ್ ಟವರ್ ಹಾಗೂ ಕಾರಿನ ನಂಬರ್ ಪ್ಲೇಟ್ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದರು.

ಇನ್ನು ದಕ್ಷಿಣ ಕನ್ನಡ ನೆಲ್ಯಾಡಿ ಬಳಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು, ಶಿಕ್ಷಕಿ ಅರ್ಪಿತಳನ್ನು ರಕ್ಷಿಸಿದ್ದಾರೆ. ಸದ್ಯ ಪೊಲೀಸರು ರಾಮು ಮತ್ತು ತಂಡದವರನ್ನು ವಶಕ್ಕೆ ಪಡೆದು ಹಾಸನಕ್ಕೆ ಕರೆತರುತ್ತಿದ್ದಾರೆ.

ಅರ್ಪಿತ ಮತ್ತು ರಾಮು ಸಂಬಂಧಿಗಳಾಗಿದ್ದು 15 ದಿನಗಳ ಹಿಂದೆ ರಾಮು ಮತ್ತು ಪೋಷಕರು ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಮನೆಗೆ ಬಂದಿದ್ದರು. ಈ ವೇಳೆ ಮದುವೆಗೆ ಶಿಕ್ಷಕಿ ಅರ್ಪಿತಾ ಹಾಗೂ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಶಿಕ್ಷಕಿ ಮದುವೆಗೆ ಒಪ್ಪಿಲ್ಲವೆಂದು ಆಕೆಯನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com