ಬಿಹಾರದಲ್ಲಿ ಗಂಗಾ ನದಿಗೆ 4.56 ಕಿಮೀ ಉದ್ದದ ಹೊಸ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಂಪುಟ ಅಸ್ತು

ಬಿಹಾರದ ದಿಘಾ ಮತ್ತು ಸೋನೆಪುರವನ್ನು ಸಂಪರ್ಕಿಸುವ ಗಂಗಾ ನದಿಗೆ 4.56 ಕಿ.ಮೀ ಉದ್ದದ ಹೊಸ 6 ಪಥದ ಸೇತುವೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಗಂಗಾ ನದಿ
ಗಂಗಾ ನದಿ

ನವದೆಹಲಿ: ಬಿಹಾರದ ದಿಘಾ ಮತ್ತು ಸೋನೆಪುರವನ್ನು ಸಂಪರ್ಕಿಸುವ ಗಂಗಾ ನದಿಗೆ 4.56 ಕಿ.ಮೀ ಉದ್ದದ ಹೊಸ 6 ಪಥದ ಸೇತುವೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಯೋಜನೆಯ ಒಟ್ಟು ವೆಚ್ಚ 3,064 ಕೋಟಿ ರೂ. ಆಗಿದೆ. ಈ ಸೇತುವೆಯು ಸಂಚಾರವನ್ನು ಸುಗಮ ಮತ್ತು ಸುಲಭಗೊಳಿಸುತ್ತದೆ. ಇದರ ಪರಿಣಾಮ ರಾಜ್ಯದ, ವಿಶೇಷವಾಗಿ ಉತ್ತರ ಬಿಹಾರದ ಒಟ್ಟಾರೆ ಅಭಿವೃದ್ಧಿಗೆ ಕಾರಣವಾಗುತ್ತದೆ" ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಗಂಗಾ ನದಿಗೆ ಅಡ್ಡಲಾಗಿ ಹೊಸ 4,556 ಮೀ ಉದ್ದದ 6-ಲೇನ್ ಕೇಬಲ್ ಆಧಾರಿತ ಸೇತುವೆ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

ದಿಘಾ(ಪಾಟ್ನಾ ಮತ್ತು ಗಂಗಾ ನದಿಯ ದಕ್ಷಿಣ ದಂಡೆಯಲ್ಲಿದೆ) ಮತ್ತು ಸೋನೆಪುರ್ (ಸರನ್ ಜಿಲ್ಲೆಯ ಗಂಗಾ ನದಿಯ ಉತ್ತರ ದಂಡೆ) ಪ್ರಸ್ತುತ ಲಘು ವಾಹನಗಳ ಸಂಚಾರಕ್ಕಾಗಿ ರೈಲು ಕಮ್ ರಸ್ತೆ ಸೇತುವೆ ಸಂಪರ್ಕ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com