ಹೈದರಾಬಾದ್: ನೋಡನೋಡುತ್ತಲೇ ಹೊತ್ತಿಉರಿದ ಐಷಾರಾಮಿ ಬಿಎಂಡಬ್ಲ್ಯು ಕಾರು, ವಿಡಿಯೋ ವೈರಲ್

ತೆಲಂಗಾಣ ಸೆಕ್ರೆಟರಿಯೇಟ್ ಹಿಂಭಾಗದಲ್ಲಿ ಐಷಾರಾಮಿ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬುಧವಾರ ವರದಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬಿಎಂಡಬ್ಲ್ಯು ಕಾರು ಹೊತ್ತಿ ಉರಿದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೈದರಾಬಾದ್‌ನಲ್ಲಿ ನೋಡನೋಡುತ್ತಲೇ ಹೊತ್ತಿಉರಿದ ಬಿಎಂಡಬ್ಲ್ಯು ಕಾರು
ಹೈದರಾಬಾದ್‌ನಲ್ಲಿ ನೋಡನೋಡುತ್ತಲೇ ಹೊತ್ತಿಉರಿದ ಬಿಎಂಡಬ್ಲ್ಯು ಕಾರು

ಹೈದರಾಬಾದ್: ತೆಲಂಗಾಣ ಸೆಕ್ರೆಟರಿಯೇಟ್ ಹಿಂಭಾಗದಲ್ಲಿ ಐಷಾರಾಮಿ ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ಬುಧವಾರ ವರದಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಬಿಎಂಡಬ್ಲ್ಯು ಕಾರು ಹೊತ್ತಿ ಉರಿದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೆಲಂಗಾಣ ಸೆಕ್ರೆಟರಿಯೇಟ್ ಹಿಂಭಾಗದ ಮಿಂಟ್ ಕಾಂಪೌಂಡ್ ಬಳಿ ಬಿಎಂಡಬ್ಲ್ಯು ಕಾರು ನಿಂತಿತ್ತು. ಆದರೆ, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಲೇ ಬೆಂಕಿಯ ಕೆನ್ನಾಲಗೆಗೆ ಕಾರನ್ನು ಆವರಿಸಿದೆ. 

ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದೆ. ಅನಾಹುತಕ್ಕೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಕಾರು ಯಾರಿಗೆ ಸೇರಿದ್ದು ಎಂಬುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ.

ಕಾರಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಜನಗ ಗುಂಪೊಂದು ಬೆಂಕಿ ನಂದಿಸಲು ಟ್ಯಾಂಕರ್‌ನಿಂದ ನೀರನ್ನು ಹಾಕುತ್ತಿದ್ದರೂ ಬೆಂಕಿ ಹತೋಟಿಗೆ ಬರಲಿಲ್ಲ. ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಯಾರಾದರೂ ಕಾರಿನೊಳಗೆ ಇದ್ದರೇ ಎಂಬುದು ಸ್ಪಷ್ಟವಾಗಿಲ್ಲ. 

ಸದ್ಯ ಈ ಸಂಬಂಧ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com