ಭಗವದ್ಗೀತೆಯ ಒಂದು ಶ್ಲೋಕ ತಪ್ಪಾಗಿ ಅನುವಾದ: ಸಿಎಂ ಹಿಮಂತ ಬಿಸ್ವಾ ಶರ್ಮಾ ಕ್ಷಮೆಯಾಚನೆ!

ಭಗವದ್ಗೀತೆಯ ಒಂದು ಶ್ಲೋಕ ತಪ್ಪಾಗಿ ಅನುವಾದ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ನವದೆಹಲಿ: ಭಗವದ್ಗೀತೆಯ ಒಂದು ಶ್ಲೋಕ ತಪ್ಪಾಗಿ ಅನುವಾದ ಮಾಡಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. 

ಅಷ್ಟೇ ಅಲ್ಲ ಇದೀಗ ತಮ್ಮ ಹಳೆಯ ಟ್ವೀಟ್ ಒಂದನ್ನು ಡಿಲೀಟ್ ಮಾಡಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಟ್ವೀಟ್‌ನಲ್ಲಿ 'ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಸೇವೆ ಮಾಡುವುದು ಶೂದ್ರರ ಸ್ವಾಭಾವಿಕ ಕರ್ತವ್ಯ' ಎಂದು ಅನುವಾದಿಸಿದ್ದ ಪೋಸ್ಟ್ ವಿವಾದವನ್ನು ಹುಟ್ಟುಹಾಕಿತು. ವಿರೋಧ ಪಕ್ಷದ ನಾಯಕರು ಇದನ್ನು ಬಿಜೆಪಿಯ ಮನುವಾದಿ ಸಿದ್ಧಾಂತ ಎಂದು ತೀವ್ರವಾಗಿ ಖಂಡಿಸಿದರು.

ಹಿಂದುತ್ವವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಅಸ್ಸಾಂನ ಮುಸ್ಲಿಮರು ಹಲವು ವರ್ಷಗಳಿಂದ ಎದುರಿಸುತ್ತಿರುವ ದುರದೃಷ್ಟಕರ ಕ್ರೌರ್ಯದಲ್ಲಿ ಇದು ಪ್ರತಿಫಲಿಸುತ್ತದೆ ಎಂದು ಓವೈಸಿ ಹೇಳಿದ್ದಾರೆ.

ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಹಿಮಂತ ಶರ್ಮಾ ಕ್ಷಮೆಯಾಚಿಸಿದ್ದು ಇದು ಭಗವದ್ಗೀತೆಯ ಒಂದು ಶ್ಲೋಕದ ತಪ್ಪು ಅನುವಾದ ಎಂದು ಹೇಳಿದರು. 'ತಪ್ಪನ್ನು ಕಂಡ ತಕ್ಷಣ ನಾನು ಪೋಸ್ಟ್ ಅನ್ನು ತೆಗೆದುಹಾಕಿದ್ದೇನೆ. ಶ್ರೇಷ್ಠ ವ್ಯಕ್ತಿ ಶ್ರೀಮಂತ ಶಂಕರದೇವ್ ನೇತೃತ್ವದ ಸುಧಾರಣಾ ಚಳವಳಿಗೆ ಧನ್ಯವಾದಗಳು. ಅಸ್ಸಾಂ ರಾಜ್ಯವು ಜಾತಿರಹಿತ ಸಮಾಜದ ಆದರ್ಶ ಚಿತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಬರೆದಿದ್ದಾರೆ.

ನನ್ನು ಪೋಸ್ಟ್‌ನಿಂದ ಯಾರಿಗಾದರೂ ನೋವಾಗಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಅವರು ಹೇಳಿದರು. ಬಿಸ್ವಾ ಶರ್ಮಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪ್ರತಿದಿನ ಬೆಳಿಗ್ಗೆ ಭಗವದ್ಗೀತೆಯ ಶ್ಲೋಕವನ್ನು ನಿಯಮಿತವಾಗಿ ಅಪ್‌ಲೋಡ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com