ಕುಸ್ತಿಪಟುಗಳ ಪ್ರತಿಭಟನೆ: ಬ್ರಿಜ್‌ ಭೂಷಣ್‌ ನಿವಾಸದಿಂದ ಕುಸ್ತಿ ಫೆಡರೇಷನ್‌ ಕಚೇರಿ ಕೊನೆಗೂ ಸ್ಥಳಾಂತರ!

ಮಹತ್ವದ ಬೆಳವಣಿಗೆಯಲ್ಲಿ ಭಾರತದ ಕುಸ್ತಿ ಫೆಡರೇಷನ್‌ ತನ್ನ ಕಚೇರಿಯನ್ನು ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ನಿವಾಸದಿಂದ ಸ್ಥಳಾಂತರಿಸಿದೆ. 
ಬ್ರಿಜ್ ಭೂಷಣ್ ಸಿಂಗ್
ಬ್ರಿಜ್ ಭೂಷಣ್ ಸಿಂಗ್

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತದ ಕುಸ್ತಿ ಫೆಡರೇಷನ್‌ ತನ್ನ ಕಚೇರಿಯನ್ನು ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ನಿವಾಸದಿಂದ ಸ್ಥಳಾಂತರಿಸಿದೆ. 

ಬ್ರಿಜ್ ಭೂಷಣ್ ಅವರ ಮನೆ ಆವರಣವನ್ನು ಖಾಲಿ ಮಾಡಿದ ನಂತರ ಡಬ್ಲ್ಯುಎಫ್‌ಐ ಹೊಸ ದೆಹಲಿಯ ಹೊಸ ವಿಳಾಸದಿಂದ ಕಾರ್ಯನಿರ್ವಹಿಸುತ್ತದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಮೂಲವೊಂದು ತಿಳಿಸಿದ್ದು, ಹೊಸ WFI ಕಚೇರಿಯು ದೆಹಲಿಯ ಹರಿ ನಗರ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ.

ಫೆಡರೇಷನ್‌ ಕಚೇರಿಯು ಸಿಂಗ್‌ ಅವರ ನಿವಾಸದಲ್ಲಿರುವುದಕ್ಕೆ ಕ್ರೀಡಾ ಸಚಿವಾಲಯ ಆಕ್ಷೇಪಿಸಿದ ನಂತರದ ಬೆಳವಣಿಗೆ ಇದಾಗಿದ್ದು, ಫೆಡರೇಷನ್‌ ತನ್ನ ಮಾಜಿ ಪದಾಧಿಕಾರಿಗಳ ಹಿಡಿತದಲ್ಲಿಯೇ ಇನ್ನೂ ಇದೆ ಎಂಬ ಆರೋಪಗಳ ಕುರಿತೂ ಕ್ರೀಡಾ ಸಚಿವಾಲಯ ಕಳವಳ ವ್ಯಕ್ತಪಡಿಸಿತ್ತು. 'ಫೆಡರೇಶನ್‌ನ ವ್ಯವಹಾರವನ್ನು ಮಾಜಿ ಪದಾಧಿಕಾರಿಗಳು (ಬ್ರಿಜ್ ಭೂಷಣ್) ನಿಯಂತ್ರಿಸುವ ಆವರಣದಿಂದ ನಡೆಸಲಾಗುತ್ತಿದೆ. ಬ್ರಿಜ್ ಭೂಷಣ್ ಮೇಲೆ ಆಟಗಾರ್ತಿಯರ ಮೇಲಿನ ಲೈಂಗಿಕ ಕಿರುಕುಳ ಗಂಭೀರ ಆರೋಪ ಇದ್ದು, ಪ್ರಸ್ತುತ ಈ ವಿಷಯವನ್ನು ನ್ಯಾಯಾಲಯವು ಆಲಿಸುತ್ತಿದೆ ಎಂದು ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿತ್ತು.

ಫೆಡರೇಷನ್‌ ಕಚೇರಿ ಇನ್ನೂ ಬ್ರಿಜ್‌ ಭೂಷಣ್‌ ನಿವಾಸದಲ್ಲಿಯೇ ಇರುವ ಕುರಿತು ಪ್ರತಿಕ್ರಿಯಿಸಿದ್ದ ಸಂಜಯ್‌ ಸಿಂಗ್‌ ತಮ್ಮ ತಂಡಕ್ಕೆ ಹೊಸ ಕಚೇರಿ ಹುಡುಕಲು ಸಮಯ ಬೇಕಾಗಿದೆ ಎಂದು ಹೇಳಿದ್ದರಲ್ಲದೆ ಆದಷ್ಟು ಬೇಗ ಸರ್ಕಾರ ಸೂಚಿಸಿದ ಯಾವುದೇ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಿದೆ ಎಂದಿದ್ದರು.

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬ್ರಿಜ್‌ ಭೂಷಣ್‌ ಆಪ್ತ ಸಂಜಯ್‌ ಸಿಂಗ್‌ ಇತ್ತೀಚೆಗೆ ಫೆಡರೇಷನ್‌ ಅಧ್ಯಕ್ಷರಾಗಿ ಆಯ್ಕೆಗೊಂಡ ಬೆನ್ನಲ್ಲೇ ಫೆಡರೇಷನ್‌ನ ನೂತನ ಆಡಳಿತ ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತಿನಲ್ಲಿರಿಸಿ ಫೆಡರೇಷನ್‌ ಕಾರ್ಯನಿರ್ವಹಣೆಗೆ ತಾತ್ಕಾಲಿಕ ಸಮಿತಿ ರಚಿಸಿತ್ತು. ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದಲ್ಲಿ ಹೊಸದಾಗಿ ರಚಿಸಲಾದ ಡಬ್ಲ್ಯುಎಫ್‌ಐ ಸಮಿತಿಯನ್ನು ಡಿಸೆಂಬರ್ 24 ರಂದು ಅಮಾನತುಗೊಳಿಸಿದ ಸಚಿವಾಲಯ, ಅದರ ಮುಖ್ಯಸ್ಥರಾಗಿ ಆಯ್ಕೆಯಾದ ಮೂರು ದಿನಗಳ ನಂತರ, ಬ್ರಿಜ್ ಭೂಷಣ್ ಅವರ ನಿವಾಸದಿಂದ ನಡೆಯುತ್ತಿರುವ ಕಚೇರಿಯನ್ನು ಕಟ್ಟುನಿಟ್ಟಾದ ಕ್ರಮವನ್ನು ತೆಗೆದುಕೊಳ್ಳಲು ಒಂದು ಕಾರಣವೆಂದು ಉಲ್ಲೇಖಿಸಿತ್ತು.

ಅಂದಹಾಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಮತ್ತೊಮ್ಮೆ ಕ್ರೀಡಾ ವ್ಯವಹಾರಗಳನ್ನು ನಡೆಸಲು ವುಶು ಅಸೋಸಿಯೇಷನ್ ಆಫ್ ಇಂಡಿಯಾ ಮುಖ್ಯಸ್ಥ ಭೂಪೇಂದರ್ ಸಿಂಗ್ ಬಾಜ್ವಾ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ಸ್ಥಾಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com