ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿ ಹೊಡೆದು 3 ಕಿ.ಮೀ.ಗೂ ಹೆಚ್ಚು ದೂರ ಎಳೆದೊಯ್ದ ಕಾರು ಚಾಲಕ!

ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ವೇಗವಾಗಿ ಬಂದ ಕಾರೊಂದು ಡಿಕ್ಕು ಹೊಡೆದು, ಮೂರು ಕಿಲೋಮೀಟರ್'ಗೂ ಹೆಚ್ಚು ದೂರ ಎಳೆದೊಯ್ದಿರುವ ಘಟನೆಯೊಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಬೈಕ್'ನ್ನು ಎಳೆದೊಯ್ಯುತ್ತಿರುವ ಕಾರು ಚಾಲಕ.
ಬೈಕ್'ನ್ನು ಎಳೆದೊಯ್ಯುತ್ತಿರುವ ಕಾರು ಚಾಲಕ.

ಗುರುಗ್ರಾಮ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ವೇಗವಾಗಿ ಬಂದ ಕಾರೊಂದು ಡಿಕ್ಕು ಹೊಡೆದು, ಮೂರು ಕಿಲೋಮೀಟರ್'ಗೂ ಹೆಚ್ಚು ದೂರ ಎಳೆದೊಯ್ದಿರುವ ಘಟನೆಯೊಂದು ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕಾರು ಚಾಲಕನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬೈಕ್ ಸವಾರನನ್ನು ಮೋನು ಎಂದು ಗುರ್ತಿಸಲಾಗಿದ್ದು, ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ವ್ಯಕ್ತಿ ರಸ್ತೆ ಬದಿಗೆ ಬಿದ್ದಿದ್ದಾರೆ. ಆದರೆ, ದ್ವಿಚಕ್ರ ವಾಹನ ಕಾರಿಗೆ ಬಂಪರ್'ಗೆ ಸಿಲುಕಿಕೊಂಡಿತ್ತು ಎಂದು ತಿಳಿದುಬಂದಿದೆ.

ಕಾರು ಬೈಕ್ ನ್ನು ಎಳೆದುಕೊಂಡು ಹೋಗುತ್ತಿದ್ದಾಗ ಸವೆತದಿಂದಾಗಿ ಬೆಂಕಿಯ ಕಿಡಿಗಳು ಹೊರಹೊಮ್ಮುತ್ತಿರುವುದನ್ನು ಹಿಂದಿನ ವಾಹನಗಳಲ್ಲಿ ಚಲಿಸುತ್ತಿದ್ದ ಕೆಲ ವ್ಯಕ್ತಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಘಟನೆಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೈಕ್ ಚಾಲಕ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕಾರು ಚಾಲಕನ ವಿರುದ್ಧ ಸೆಕ್ಷನ್ 279 (ಸಾರ್ವಜನಿಕ ಮಾರ್ಗದಲ್ಲಿ ದುಡುಕಿನ ಚಾಲನೆ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕೃತ್ಯಎಸಗುವುದು, ನೋವುಂಟು ಮಾಡುವುದು), ಮತ್ತು 427 (ಕಿಡಿಗೇಡಿತನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ಫೆಬ್ರವರಿ 1-2 ರ ಮಧ್ಯರಾತ್ರಿಯಲ್ಲಿ ಗುರುಗ್ರಾಮ್‌ನ ಸೆಕ್ಟರ್ 65 ರ ಬಳಿ ಈ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಕುಳಿತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿತ್ತು ಎಂದು ತಿಳಿಸಲಾಗಿದೆ.

ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ನಾನು ರಸ್ತೆಯ ಮೇಲೆ ಬಿದ್ದೆ. ಘಟನೆಯಲ್ಲಿ ನನಗೆ ಯಾವುದೇ ಗಾಯಗಳಾಗಿಲ್ಲ. ಆದರ, ನನ್ನ ಬೈಕು ಕಾರಿನ ಎಡ ಬಂಪರ್ ಕೆಳಗೆ ಸಿಲುಕಿಕೊಂಡಿತ್ತು. ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿ ಕಾರು ನಿಲ್ಲಿಸದೆ ನನ್ನ ಬೈಕನ್ನು ಎಳೆದುಕೊಂಡು ಹೋಗಿ ಪರಾರಿಯಾಗಿದ್ದ ಎಂದು ಬೈಕ್ ಸವಾರ ಮೋನು ಹೇಳಿಕೊಂಡಿದ್ದಾರೆ.

ಅಪಘಾತದ ವೇಳೆ ಕಾರು ಚಾಲಕ ಕುಡಿದ ಅಮಲಿನಲ್ಲಿದ್ದನೇ ಎಂಬುದು ಇನ್ನೂ ಖಚಿತವಾಗಿಲ್ಲ. "ಅಪಘಾತದ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಪ್ರಕರಣ ಸಂಬಂಧ ಇದೀಗ ವ್ಯಕ್ತಿಯನ್ನು ಬಂಧನಕ್ಕೊಳಪಡಿಸಿದ್ದು, ಎರಡೂ ವಾಹನಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com