ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ನಾಳೆಯಿಂದ 2 ದಿನ ಭಾರತ ಪ್ರವಾಸ

ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಫೆಬ್ರವರಿ 6 ರಿಂದ 7 ರವರೆಗೆ ಭಾರತಕ್ಕೆ ತನ್ನ ಮೊದಲ ಅಧಿಕೃತ ಪ್ರವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ
ಕೆನಡಾ ವಿದೇಶಾಂಗ ಸಚಿವೆ ಮೆಲಾನಿ
ಕೆನಡಾ ವಿದೇಶಾಂಗ ಸಚಿವೆ ಮೆಲಾನಿ
Updated on

ನವದೆಹಲಿ: ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಫೆಬ್ರವರಿ 6 ರಿಂದ 7 ರವರೆಗೆ ಭಾರತಕ್ಕೆ ತನ್ನ ಮೊದಲ ಅಧಿಕೃತ ಪ್ರವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

" ಭಾರತಕ್ಕೆ ನನ್ನ ಮೊದಲ ಅಧಿಕೃತ ಪ್ರವಾಸಕ್ಕೆ ಹೊರಡುತ್ತಿರುವಾಗ, ನಮ್ಮ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಕಾರ್ಯರೂಪಕ್ಕೆ ತರುವ ಮೂಲಕ ಸಂಬಂಧವನ್ನು ಬಲಪಡಿಸಲು ಎದುರು ನೋಡುತ್ತಿದ್ದೇನೆ ಎಂದು ಜೋಲಿ ಟ್ವೀಟ್ ಮಾಡಿದ್ದಾರೆ.

ದೆಹಲಿಯಲ್ಲಿ, ಇಂಡೋ-ಪೆಸಿಫಿಕ್ ಕಾರ್ಯತಂತ್ರದಡಿ ಭಾರತದೊಂದಿಗೆ ಕೆನಡಾದ ಸಂಬಂಧ ಹೆಚ್ಚಿಸಲು ಹಾಗೂ ಉಭಯ ದೇಶಗಳಿಗೆ ಬೆಳವಣಿಗೆ ಮತ್ತು ಸಮೃದ್ಧಿಗೆ ಅವಕಾಶಗಳನ್ನು ಸೃಷ್ಟಿಸಲು ಜೋಲಿ ತಮ್ಮ ಭಾರತೀಯ ಸಹವರ್ತಿ ಎಸ್ ಜೈಶಂಕರ್ ಅವರನ್ನು ಭೇಟಿಯಾಗಲಿದ್ದಾರೆ.

ಇಂಡೋ-ಪೆಸಿಫಿಕ್ ಕಾರ್ಯತಂತ್ರದಡಿ  ಭಾರತದೊಂದಿಗೆ ಕೆನಡಾದ ದೃಢವಾದ ಕಾರ್ಯಸೂಚಿಗೆ ಸಂಬಂಧಿಸಿದಂತೆ ಜೋಲಿ ಭಾರತದಲ್ಲಿನ ಉದ್ಯಮಿಗಲು ಮತ್ತು ನಾಗರಿಕ ಸಮಾಜದ ಸಮುದಾಯಗಳಲ್ಲಿನ ಪ್ರಮುಖ ಪಾಲುದಾರರೊಂದಿಗೆ ಮಾತುಕತೆ ನಡೆಸಲಿದ್ದಾರೆ.

ಕೆನಡಾ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದ ನಡುವೆ  ಹೆಚ್ಚು ಮುಕ್ತ ಮತ್ತು ಸಮೃದ್ಧ ಪಾಲುದಾರಿಕೆಗಾಗಿ ಅವೇಗವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com