ಮುಂಬೈ: ನಾಯಿ ಕಚ್ಚಿದ 12 ವರ್ಷಗಳ ನಂತರ ಮಾಲೀಕನಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಮುಂಬೈನ ನ್ಯಾಯಾಲಯವೊಂದು ಉದ್ಯಮಿಯೊಬ್ಬರಿಗೆ ಸೇರಿದ ಸಾಕುಪ್ರಾಣಿಯೊಂದು ವ್ಯಕ್ತಿಯನ್ನು ಕಚ್ಚಿದ 12 ವರ್ಷಗಳ ನಂತರ ಅವರಿಗೆ ನಾಯಿ ಮಾಲೀಕರಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. 
ರಾಟ್‌ವೀಲರ್ ನಾಯಿ
ರಾಟ್‌ವೀಲರ್ ನಾಯಿ
Updated on

ಮುಂಬೈ: ಇಲ್ಲಿನ ನ್ಯಾಯಾಲಯವೊಂದು ಉದ್ಯಮಿಯೊಬ್ಬರಿಗೆ ಸೇರಿದ ಸಾಕುಪ್ರಾಣಿಯೊಂದು ವ್ಯಕ್ತಿಯನ್ನು ಕಚ್ಚಿದ 12 ವರ್ಷಗಳ ನಂತರ ಅವರಿಗೆ ನಾಯಿ ಮಾಲೀಕರಿಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿದೆ. ಅಂತಹ ಆಕ್ರಮಣಕಾರಿ ನಾಯಿಯೊಂದಿಗೆ ಹೊರಗೆ ಹೋಗುವಾಗ ಸಮಂಜಸವಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ, ಅದು ಸಾರ್ವಜನಿಕರಿಗೆ ಖಂಡಿತವಾಗಿಯೂ ಹಾನಿಕಾರಕವಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ಸುರಕ್ಷತೆಯ ಪ್ರಶ್ನೆಯಿರುವ ಇಂತಹ ಪ್ರಕರಣಗಳಲ್ಲಿ, ದಯೆಯು ಅನಪೇಕ್ಷಿತವಾಗಿರುತ್ತದೆ ಎಂದು ಗಿರ್ಗಾಂವ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎನ್ಎ ಪಟೇಲ್ ಅವರು ಜನವರಿ 3ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ನ್ಯಾಯಾಲಯವು ಭಾರತೀಯ ದಂಡ ಸಂಹಿತೆ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯ ಅಪರಾಧಗಳಲ್ಲಿ ನಾಯಿಯ ಮಾಲೀಕ ಸೈರಸ್ ಪರ್ಸಿ ಹಾರ್ಮುಸ್ಜಿ (44) ತಪ್ಪಿತಸ್ಥರೆಂದು ಘೋಷಿಸಿದೆ.

ಈ ವಿವರವಾದ ಆದೇಶ ಭಾನುವಾರ ಲಭ್ಯವಾಗಿದ್ದು, ಘಟನೆಯು 2010ರ ಮೇನಲ್ಲಿ ನಡೆದಿದೆ. ಮುಂಬೈನ ನೆಪಿಯನ್ ಸೀ ರೋಡ್‌ನಲ್ಲಿ ಸಂತ್ರಸ್ತ ಕೆರ್ಸಿ ಇರಾನಿ ಮತ್ತು ಹೊರ್ಮುಸ್ಜಿ ಅವರು ಕಾರಿನ ಬಳಿ ನಿಂತು ಆಸ್ತಿ ವಿವಾದದ ಬಗ್ಗೆ ಜಗಳವಾಡುತ್ತಿದ್ದರು. ಈ ವೇಳೆ ಹೊರ್ಮುಸ್ಜಿಯವರ ಸಾಕುನಾಯಿ ಕಾರಿನೊಳಗೆ ಇದ್ದು ವಾಹನದಿಂದ ಹೊರಬರಲು ಪ್ರಯತ್ನಿಸುತ್ತಿತ್ತು.

ಬಳಿಕ ಕಾರಿನ ಬಾಗಿಲು ತೆರೆಯದಂತೆ ಮನವಿ ಮಾಡಿದರೂ ಆರೋಪಿ (ಹೊರ್ಮುಸ್ಜಿ) ಅದನ್ನು ತೆರೆದಿದ್ದರಿಂದ ನಾಯಿ ಹೊರಬಂದು ದೂರುದಾರ (ಇರಾನಿ) ಮೇಲೆ ನೇರವಾಗಿ ದಾಳಿ ಮಾಡಿದೆ. ನಾಯಿ ಇರಾನಿ ಅವರ ಬಲಗಾಲಿಗೆ ಎರಡು ಬಾರಿ ಮತ್ತು ಬಲಗೈಗೆ ಎರಡು ಬಾರಿ ಕಚ್ಚಿದೆ ಎಂದು ಪ್ರಾಸಿಕ್ಯೂಷನ್ ಹೇಳಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ ಆರೋಪಿಗೆ ಈ ನಾಯಿಯು 'ಅತ್ಯಂತ ಆಕ್ರಮಣಕಾರಿ ತಳಿ' ಎಂದು ತಿಳಿದಿತ್ತು. ಹೀಗಿದ್ದರೂ ಅವರು ಸಮಂಜಸವಾದ ಮುಂಜಾಗ್ರತಾ ಕ್ರಮವನ್ನು ವಹಿಸಿಲ್ಲ. ದೂರುದಾರರ ವಯಸ್ಸು 72 ವರ್ಷ, ಅಂತಹ ವೃದ್ಧಾಪ್ಯದಲ್ಲಿ ಬಲವಾದ ಮತ್ತು ಆಕ್ರಮಣಕಾರಿ ನಾಯಿ ಅವರ ಮೇಲೆ ದಾಳಿ ಮಾಡಿದೆ. ಆರೋಪಿಯಂತಹ ವಯಸ್ಕ ವ್ಯಕ್ತಿಯೊಬ್ಬರು ಇಂತಹ ಆಕ್ರಮಣಕಾರಿ ನಾಯಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಹೋಗುತ್ತಿರುವಾಗ, ಸಮಂಜಸವಾದ ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ ಅದು ಸಾರ್ವಜನಿಕರಿಗೆ ಹಾನಿಯುಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ರಾಟ್‌ವೀಲರ್ ನಾಯಿಗಳು ಶಕ್ತಿಯುತ ಮತ್ತು ಬಲವಂತದ ಕಚ್ಚುವಿಕೆಗೆ ಪ್ರಸಿದ್ಧವಾಗಿವೆ ಎಂದು ನ್ಯಾಯಾಲಯವು ಗಮನಿಸಿದೆ.

ಅವು 328 PSI (ಪ್ರತಿ ಚದರ ಇಂಚಿಗೆ ಪೌಂಡ್) ವರೆಗೆ ಕಡಿಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಅವು ನಾಯಿಗಳ ಪ್ರಬಲ ತಳಿಗಳಲ್ಲಿ ಒಂದಾಗಿದೆ. ಆರೋಪಿಯು ಈ ನಾಯಿಯ ಮಾಲೀಕ. ಆದ್ದರಿಂದ ಆ ನಾಯಿಯ ಆಕ್ರಮಣಶೀಲತೆಯ ಬಗ್ಗೆ ಅವನಿಗೆ ಖಂಡಿತವಾಗಿಯೂ ಜ್ಞಾನವಿದೆ. ಹೀಗಿದ್ದರೂ ಅವರು ಯಾವುದೇ ಸಾರ್ವಜನಿಕ ಸುರಕ್ಷತೆಯ ಕ್ರಮವನ್ನು ತೆಗೆದುಕೊಂಡಿಲ್ಲ. ಹೀಗಾಗಿ ಐಪಿಸಿ ಸೆಕ್ಷನ್ 289 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಆರೋಪಿಯ ಕೃತ್ಯವು ಉದ್ದೇಶಪೂರ್ವಕವಾಗಿಲ್ಲ ಆದರೆ, ನಿರ್ಲಕ್ಷ್ಯದಿಂದ ಕೂಡಿದೆ. ಆದ್ದರಿಂದ ಅವರು ಐಪಿಸಿ ಸೆಕ್ಷನ್ 337 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡಿದ್ದಾರೆ ಎಂದು ಹೇಳಿರುವ ನ್ಯಾಯಾಲಯವು ಆರೋಪಿಗೆ ಮೂರು ತಿಂಗಳ ಸರಳ ಜೈಲು ಶಿಕ್ಷೆಯನ್ನು ವಿಧಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com