ಲಕ್ನೋ: ಕಾರ್ಯಕ್ರಮದ ವೇದಿಕೆಯಲ್ಲಿಯೇ ಕುಸಿದು ಬಿದ್ದು ಜನಪ್ರಿಯ ಮೃದಂಗ ವಾದಕ ದಿನೇಶ್‌ ಪ್ರಸಾದ್‌ ಸಾವು

ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗಲೇ ಜನಪ್ರಿಯ ಮೃದಂಗ ವಾದಕ  ದಿನೇಶ್‌ ಪ್ರಸಾದ್‌  (68) ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಮೃದಂಗ ವಾದಕ ದಿನೇಶ್‌ ಪ್ರಸಾದ್‌
ಮೃದಂಗ ವಾದಕ ದಿನೇಶ್‌ ಪ್ರಸಾದ್‌
Updated on: 

ಲಕ್ನೋ: ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿರುವಾಗಲೇ ಜನಪ್ರಿಯ ಮೃದಂಗ ವಾದಕ  ದಿನೇಶ್‌ ಪ್ರಸಾದ್‌  (68) ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.

ಸೋಮವಾರ ಸಫೇದ್ ಬರದರಿಯಲ್ಲಿ ಮಹೀಂದ್ರ ಸಂತಕಡ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿರುವ ವೇಳೆ ಮೃದಂಗ ಬಾರಿಸುತ್ತಿರುವ ಸಂದರ್ಭದಲ್ಲೇ ದಿನೇಶ್‌ ಪ್ರಸಾದ್‌ ಅವರು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರೂ, ಅದಾಗಲೇ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ದಿನೇಶ್‌ ಪ್ರಸಾದ್‌ ಮಥುರಾ ಮೂಲದವರಾಗಿದ್ದು, ಅವರ ಅಂತಿಮ ವಿಧಿ ವಿಧಾನ ಆಲಂಬಾಗ್ ನಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ. ಪ್ರಸಾದ್ ಇತರ ಸಂಗೀತಗಾರರಾದ ಇಲಿಯಾಸ್ ಹುಸೇನ್ ಖಾನ್, ಇಲ್ಯಾಸ್ ಖಾನ್, ಶ್ರೀಕಾಂತ್ ಶುಕ್ಲಾ, ಜೀಶಾನ್ ಮತ್ತು ಸಿದ್ದಿಕಿ ಅವರೊಂದಿಗೆ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು.

ಪ್ರಸಾದ್ ಅವರು ಸಂಗೀತ ಕಾರ್ಯಕ್ರಮದಲ್ಲಿ ನಿರತರಾಗಿದ್ದ ವೇಳೆ, ಕೆಲವು ನಿಮಿಷಗಳ ಕಾಲ ಮೃದಂಗ ನುಡಿಸುವುದನ್ನು ನಿಲ್ಲಿಸಿದರು, ನಂತರ ಪುನರಾರಂಭಿಸಿದರು. ಅವರಿಗೆ ಸ್ವಲ್ಪ ಕಾಲ ಅಸ್ವಸ್ಥಗೊಂಡರು ಮತ್ತು ಒಂದು ಲೋಟ ನೀರು ಕೇಳಿದರು. ಆದರೆ ವೇದಿಕೆಯಲ್ಲೇ ಕ್ಷಣಾರ್ಧದಲ್ಲಿ ಕುಸಿದುಬಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com