ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದ ಇಸಿ; ಮುಂದಿನ ಹಾದಿಯನ್ನು ಚರ್ಚಿಸಲು ಪಕ್ಷದ ನಾಯಕರ ಸಭೆ ಕರೆದ ಉದ್ಧವ್

ಕೇಂದ್ರ ಚುನಾವಣಾ ಆಯೋಗವು (ಇಸಿ) ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ' ವನ್ನು ಶಿಂಧೆ ಬಣಕ್ಕೆ ನೀಡಿದ ಒಂದು ದಿನದ ನಂತರ, ಪ್ರತಿಸ್ಪರ್ಧಿ ಪಾಳಯದ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರು ಶನಿವಾರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on

ಮುಂಬೈ: ಕೇಂದ್ರ ಚುನಾವಣಾ ಆಯೋಗವು (ಇಸಿ) ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ' ವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಗುರುತಿಸಿದ ಒಂದು ದಿನದ ನಂತರ, ಪ್ರತಿಸ್ಪರ್ಧಿ ಪಾಳಯದ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರು ಶನಿವಾರ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನು ಕರೆದಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ.

ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕರು, ಉಪ ನಾಯಕರು, ಚುನಾಯಿತ ಪ್ರತಿನಿಧಿಗಳು ಮತ್ತು ವಕ್ತಾರರ ಸಭೆಯು ಮಧ್ಯಾಹ್ನ ಠಾಕ್ರೆ ಅವರ ಉಪನಗರ ಬಾಂದ್ರಾದಲ್ಲಿರುವ 'ಮಾತೋಶ್ರೀ' ನಿವಾಸದಲ್ಲಿ ನಡೆಯಲಿದೆ ಎಂದು ಠಾಕ್ರೆ ಅವರ ಆಪ್ತರು ತಿಳಿಸಿದ್ದಾರೆ.

ಚುನಾವಣಾ ಆಯೋಗವು ಶುಕ್ರವಾರ 'ಶಿವಸೇನೆ' ಮತ್ತು ಅದರ ಮೂಲ ಚುನಾವಣಾ ಚಿಹ್ನೆಯಾದ 'ಬಿಲ್ಲು ಮತ್ತು ಬಾಣ'ವನ್ನು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಗುಂಪಿಗೆ ಹಂಚಿಕೆ ಮಾಡಿರುವುದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ.

1966ರಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ಮಣ್ಣಿನ ಪುತ್ರರಿಗೆ ನ್ಯಾಯ ಎಂಬ ತತ್ವದಡಿ ಸ್ಥಾಪಿಸಿದ ಪಕ್ಷದ ಮೇಲೆ ಠಾಕ್ರೆ ಕುಟುಂಬದ ಹಿಡಿತ ತಪ್ಪಿದ್ದು ಇದೇ ಮೊದಲು.

ಶಿಂಧೆ ಸಲ್ಲಿಸಿದ ಆರು ತಿಂಗಳ ಹಳೆಯ ಅರ್ಜಿಯ ಕುರಿತು ಸರ್ವಾನುಮತದ ಆದೇಶ ನೀಡಿರುವ ತ್ರಿಸದಸ್ಯ ಆಯೋಗವು, ಶಾಸಕಾಂಗ ವಿಭಾಗದಲ್ಲಿ ಪಕ್ಷದ ಸಂಖ್ಯಾ ಬಲವನ್ನು ಅವಲಂಬಿಸಿ ಈ ಆದೇಶವನ್ನು ನೀಡಲಾಗಿದೆ. ಅಲ್ಲಿ 55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭಾ ಸದಸ್ಯರಲ್ಲಿ 13 ಸದಸ್ಯರ ಬೆಂಬಲವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೊಂದಿದ್ದಾರೆ 

ಶಿಂಧೆ ಅವರು ಕಳೆದ ವರ್ಷ ಜೂನ್‌ನಲ್ಲಿ ಠಾಕ್ರೆ ಬಣದಿಂದ ಬೇರ್ಪಟ್ಟಿದ್ದರು ಮತ್ತು ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚಿಸಿದರು.

ಶಿಂಧೆ ಬಣವನ್ನು ಬೆಂಬಲಿಸಿದ 40 ಶಾಸಕರು ಒಟ್ಟು 47,82,440 ಮತಗಳಲ್ಲಿ 36,57,327 ಮತಗಳನ್ನು ಗಳಿಸಿದ್ದಾರೆ. ಅಂದರೆ, ಇದು ಸುಮಾರು ಶೇ 76ರಷ್ಟು ಮತಗಳು ವಿಜೇತ ಶಾಸಕರ ಪರವಾಗಿ ಬಂದಿವೆ ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.
ಇನ್ನು ಉದ್ಧವ್ ಠಾಕ್ರೆ ಬಣದಿಂದ ಬೆಂಬಲಿತವಾದ 15 ಶಾಸಕರು ಒಟ್ಟು 11,25,113 ಮತಗಳನ್ನು ಗಳಿಸಿದ್ದಾರೆ.

ಚುನಾವಣಾ ಆಯೋಗದ ನಿರ್ಧಾರವನ್ನು 'ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ' ಎಂದು ಶುಕ್ರವಾರ ಠಾಕ್ರೆ ಬಣ್ಣಿಸಿದ್ದಾರೆ ಮತ್ತು ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ. ಆದರೆ, ಸಿಎಂ ಶಿಂಧೆ ಈ ಬೆಳವಣಿಗೆಯನ್ನು 'ಸತ್ಯ ಮತ್ತು ಜನರ ವಿಜಯ' ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com