ಮನೀಶ್ ಸಿಸೋಡಿಯಾ ಮನವಿ ಸ್ವೀಕಾರ; ಹೊಸದಾಗಿ ಸಮನ್ಸ್ ಕಳುಹಿಸಲಿರುವ ಕೇಂದ್ರೀಯ ತನಿಖಾ ದಳ
ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಇತ್ತೀಚಿನ ಬೆಳವಣಿಗೆಯಲ್ಲಿ, ತನಿಖೆಗೆ ಹಾಜರಾಗಲು ಹೆಚ್ಚಿನ ಸಮಯ ಕೋರಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಮನವಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸ್ವೀಕರಿಸಿದೆ.
ಇದಕ್ಕೂ ಮುನ್ನ ಸಿಸೋಡಿಯಾ ಸಿಬಿಐಗೆ ಪತ್ರ ಬರೆದು ಏಳು ದಿನಗಳ ಕಾಲಾವಕಾಶ ಕೋರಿದ್ದರು.
ಸಿಬಿಐ ಇದೀಗ ಸಿಸೋಡಿಯಾ ಅವರಿಗೆ ಹೊಸ ಸಮನ್ಸ್ ಜಾರಿ ಮಾಡಲಿದ್ದು, ತನಿಖೆಗೆ ಹಾಜರಾಗಲು ಹೊಸ ದಿನಾಂಕವನ್ನು ನಿಗದಿಪಡಿಸಲಿದೆ.
ತೆರೆಮರೆಯಲ್ಲಿ ಇರುವುದು ಬಿಜೆಪಿಯೇ ಎಂದು ಸಿಸೋಡಿಯಾ ಆರೋಪಿಸಿದ್ದಾರೆ. ತನಿಖೆಗೆ ಹಾಜರಾಗಲು ಸಮನ್ಸ್ ನೀಡಿದಾಗ ದೆಹಲಿ ಬಜೆಟ್‌ಗೆ ಅಂತಿಮ ಸ್ಪರ್ಶ ನೀಡುವ ಕಾರ್ಯದಲ್ಲಿ ತಾನು ನಿರತನಾಗಿದ್ದಾಗಿ ಅವರು ಆರೋಪಿಸಿದ್ದಾರೆ.
'ನಾನೂ ಹಣಕಾಸು ಸಚಿವ ಕೂಡ. ಹೀಗಾಗಿ, ನಾನು ದೆಹಲಿ ಬಜೆಟ್ ಅನ್ನು ಸಿದ್ಧಪಡಿಸಬೇಕು. ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು. ಅಭಿವೃದ್ಧಿ ಕೆಲಸಗಳನ್ನು ಮಾಡುವುದರಿಂದ ನಮ್ಮನನು ತಡೆಯಲು ಬಿಜೆಪಿಯವರು ಸಿಬಿಐ ಅನ್ನು ಬಳಸುತ್ತಿದ್ದಾರೆ. ನಾನು ಸಮಯ ಕೇಳಿದ್ದೇನೆ' ಎಂದು ಸಿಸೋಡಿಯಾ ಹೇಳಿದರು.
ಇದೀಗ ಸಿಬಿಐ ಅವರ ಮನವಿಯನ್ನು ಸ್ವೀಕರಿಸಿರುವುದರಿಂದ ಅವರಿಗೆ ಹೊಸದಾಗಿ ಸಮನ್ಸ್ ನೀಡಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ