55ವೇ ವಯಸ್ಸಿನಲ್ಲಿ 12ನೇ ತರಗತಿಯ ಪರೀಕ್ಷೆಗೆ ಹಾಜರಾದ ಬಿಜೆಪಿ ನಾಯಕ!

ಬರೇಲಿಯ ಬಿಜೆಪಿ ಮಾಜಿ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರ್ತೋಲ್ ಅವರು ತಮ್ಮ 55ನೇ ವಯಸ್ಸಿನಲ್ಲಿ 12 ನೇ ತರಗತಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಬಿಜೆಪಿ ಲೋಗೋ
ಬಿಜೆಪಿ ಲೋಗೋ

ಲಖನೌ: ಬರೇಲಿಯ ಬಿಜೆಪಿ ಮಾಜಿ ಶಾಸಕ ರಾಜೇಶ್ ಮಿಶ್ರಾ ಅಲಿಯಾಸ್ ಪಪ್ಪು ಭರ್ತೋಲ್ ಅವರು ತಮ್ಮ 55ನೇ ವಯಸ್ಸಿನಲ್ಲಿ 12 ನೇ ತರಗತಿ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದ್ದಾರೆ.

ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕರು ಶಿಕ್ಷಣ ಪಡೆಯಲು ವಯಸ್ಸಿನ ಮಿತಿಯಿಲ್ಲ ಎಂದು ನಂಬಿದ್ದಾರೆ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಕಾನೂನು ಅಧ್ಯಯನ ಮಾಡಲು ಯೋಜಿಸಿದ್ದಾರೆ.

ಎರಡು ವರ್ಷಗಳ ಹಿಂದೆ ರಾಜೇಶ್ ಮಿಶ್ರಾ ಅವರು ತಮ್ಮ ಮಗಳು ದಲಿತ ಯುವಕನನ್ನು ವರಿಸಿ, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾಗ ಸುದ್ದಿಯಾಗಿದ್ದರು ಮತ್ತು ಅವರ ಕುಟುಂಬವು ಮಗಳ ಈ ಕ್ರಮವನ್ನು ಬಲವಾಗಿ ವಿರೋಧಿಸಿತು.

ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದ ಯುವತಿ, ತನ್ನ ಪೋಷಕರಿಗೆ ಇಷ್ಟವಿಲ್ಲದೆ ಮದುವೆಯಾಗಿದ್ದೇನೆ. ದಲಿತ ಯುವಕನನ್ನು ಮದುವೆಯಾಗಿರುವುದಕ್ಕೆ ನಮ್ಮನ್ನು ಬಂಧಿಸುವುದಾಗಿ ಹಾಗೂ ಕೊಲ್ಲುವುದಾಗಿ ತಂದೆ, ಸಹೋದರ ಹಾಗೂ ಅವರ ಸಹವರ್ತಿಗಳು ಬೆದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಿ ಎಂದು ಬರೇಲಿಯ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದರು.

ಮಗಳ ವಿಡಿಯೋ ಮತ್ತು ಮದುವೆ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಜಿ ಶಾಸಕ ರಾಜೇಶ್ ಮಿಶ್ರಾ, ನನ್ನ ಮಗಳು ಅಪ್ರಾಪ್ತಳಲ್ಲ, ಆಕೆಗೆ ಸರಿ ಎನಿಸಿರುವ ನಿರ್ಧಾರವನ್ನು ಆಕೆ ತೆಗೆದುಕೊಂಡಿದ್ದಾಳೆ. ಆಕೆಗೆ ನಾನಾಗಲಿ, ನನ್ನ ಕುಟುಂಬದವರಾಗಲಿ ಯಾವುದೇ ಬೆದರಿಕೆ ಒಡ್ಡಿಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com