ನೀತಿ ಆಯೋಗ ಮತ್ತು BVR ಸುಬ್ರಮಣ್ಯಂ
ನೀತಿ ಆಯೋಗ ಮತ್ತು BVR ಸುಬ್ರಮಣ್ಯಂ

NITI Aayog: ನೀತಿ ಆಯೋಗದ ನೂತನ CEO ಆಗಿ ಬಿವಿಆರ್ ಸುಬ್ರಮಣ್ಯಂ ನೇಮಕ!

ನೀತಿ ಆಯೋಗದ ನೂತನ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಮಣ್ಯಂ ಅವರು ನೇಮಕವಾಗಿದ್ದಾರೆ.
Published on

ನವದೆಹಲಿ: ನೀತಿ ಆಯೋಗದ ನೂತನ ಸಿಇಒ ಆಗಿ ನಿವೃತ್ತ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಮಣ್ಯಂ ಅವರು ನೇಮಕವಾಗಿದ್ದಾರೆ.

ನೀತಿ ಆಯೋಗದ ಈ ಹಿಂದಿನ ಸಿಇಒ ಪರಮೇಶ್ವರನ್ ಅಯ್ಯರ್‌ ಅವರು ವಿಶ್ವ ಬ್ಯಾಂಕ್‌ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಾಮನಿರ್ದೇಶನಗೊಂಡ ಬಳಿಕ ನೀತಿ ಆಯೋಗದ ಮುಖ್ಯಸ್ಥರ ಸ್ಥಾನ ತೆರವಾಗಿತ್ತು. ಇದೀಗ ಈ ಜಾಗಕ್ಕೆ ಬಿವಿಆರ್ ಸುಬ್ರಮಣ್ಯಂ ಅವರನ್ನು ನೇಮಕ ಮಾಡಲಾಗಿದೆ.

ಮಾಜಿ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ಸೋಮವಾರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ನೇಮಿಸಲಾಗಿದ್ದು, ಸಚಿವ ಸಂಪುಟದ ನೇಮಕಾತಿ ಸಮಿತಿಯು ಸುಬ್ರಹ್ಮಣ್ಯಂ ನೇಮಕವನ್ನು ಹುದ್ದೆಯ ಉಸ್ತುವಾರಿ ವಹಿಸಿಕೊಂಡ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಅನುಮೋದಿಸಿದೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶ ತಿಳಿಸಿದೆ.

ನೀತಿ ಆಯೋಗದ ಸಿಇಒ ಆಗಿ ಕೆಲಸ ಮಾಡುತ್ತಿದ್ದ ಅಯ್ಯರ್ ಅವರನ್ನು ಮೂರು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್ ಪ್ರಧಾನ ಕಚೇರಿ, ವಾಷಿಂಗ್ಟನ್ ಡಿಸಿ, ಅಮೆರಿಕ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಅದು ಹೇಳಿದೆ.

1988ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು ಅವರ ಕೇಡರ್ ರಾಜ್ಯ ಹರಿಯಾಣಕ್ಕೆ ವಾಪಸು ಕಳುಹಿಸಲಾಗಿದೆ ಎಂದು ಅಯ್ಯರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com