ಮಹಿಳೆಯ ಕೊಲೆಗೆ ಪ್ರಮುಖ ಸುಳಿವಾಗಿದ್ದು ಒಂದು ಪೆಂಡೆಂಟ್, ಸೇನಾ ಅಧಿಕಾರಿ ಬಂಧನ!

ಅಸ್ಸಾಂ ಪೊಲೀಸರು ತೇಜ್‌ಪುರದಲ್ಲಿರುವ ಸೇನೆಯ IV ಕಾರ್ಪ್ಸ್ ಹೆಡ್‌ಕ್ವಾರ್ಟರ್ಸ್‌ನಿಂದ ಹಿರಿಯ ಸೇನಾ ಅಧಿಕಾರಿಯನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ರಂಗಿಯಾ(ಅಸ್ಸಾಂ): ಅಸ್ಸಾಂ ಪೊಲೀಸರು ತೇಜ್‌ಪುರದಲ್ಲಿರುವ ಸೇನೆಯ IV ಕಾರ್ಪ್ಸ್ ಹೆಡ್‌ಕ್ವಾರ್ಟರ್ಸ್‌ನಿಂದ ಹಿರಿಯ ಸೇನಾ ಅಧಿಕಾರಿಯನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯ ಅಧಿಕಾರಿ 36 ವರ್ಷದ ಮಹಿಳೆಯ ಕೊಲೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಫೆಬ್ರವರಿ 15ರಂದು ಕಾಮ್ರೂಪ್ ಜಿಲ್ಲೆಯ ಚಾಂಗ್ಸಾರಿ ಪ್ರದೇಶದಲ್ಲಿ ಮಹಿಳೆಯ ಶವ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸೇನಾ ಅಧಿಕಾರಿಗಳಿಂದ ಸೂಕ್ತ ಅನುಮತಿಯೊಂದಿಗೆ ಪೊಲೀಸ್ ತಂಡವು ಕಳೆದ ರಾತ್ರಿ ತೇಜ್‌ಪುರದಿಂದ ಆರೋಪಿ ಸೇನೆಯ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಕಾಮ್ರೂಪ್ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಚಂದ್ರ ರಾಯ್ ಹೇಳಿದರು.

ಉತ್ತರ ಗುವಾಹಟಿ ಪೊಲೀಸ್ ಠಾಣೆಯಲ್ಲಿ ಆರೋಪಿಯನ್ನು ಇರಿಸಲಾಗಿದ್ದು, ಇಂದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಾಥಮಿಕ ತನಿಖೆಯಿಂದ ಆರೋಪಿಯು ಸಂತ್ರಸ್ತೆಯೊಂದಿಗೆ ಸಂಬಂಧ ಹೊಂದಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಯ್ ತಿಳಿಸಿದ್ದಾರೆ. ಸಂತ್ರಸ್ತೆ ತಮಿಳುನಾಡಿನ ನಿವಾಸಿಯಾಗಿದ್ದು, ಹಿಂದಿನ ಮದುವೆಯಿಂದ ನಾಲ್ಕು ವರ್ಷದ ಮಗಳನ್ನು ಹೊಂದಿದ್ದಳು. 'ಮಹಿಳೆ ಇತ್ತೀಚೆಗೆ ತನ್ನ ಮಗಳೊಂದಿಗೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಗುವಾಹಟಿಗೆ ಪ್ರಯಾಣ ಬೆಳೆಸಿದ್ದರು.

ಮೃತ ಮಹಿಳೆ ಆರೋಪಿಯನ್ನು 138 ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದ್ದಳು
ಆಕೆಯ ಫೋನ್ ವಿವರಗಳ ಪ್ರಕಾರ, ಆಕೆ ಫೋನ್ ಮೂಲಕ 138 ಬಾರಿ ಆರೋಪಿಯನ್ನು ಸಂಪರ್ಕಿಸಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಚಂದ್ರ ರಾಯ್ ಹೇಳಿದ್ದಾರೆ. ಸದ್ಯ ಬಾಲಕಿ ಕಾಮ್ರೂಪ್ ಪೊಲೀಸರ ವಶದಲ್ಲಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪೆಂಡೆಂಟ್ ನೀಡಿತ್ತು ಸುಳಿವು!
ಅಸ್ಸಾಂ ಪೊಲೀಸರು ಮೃತದೇಹ ನೋಡಿದಾಗ ಕೊಲೆಗಾರನನ್ನು ತಲುಪಲು ಅಸಾಧ್ಯವೆಂದು ತೋರುತ್ತಿತ್ತು. ಆದರೆ ಪೆಂಡೆಂಟ್ ಪ್ರಕರಣವನ್ನು ಬಹಿರಂಗಪಡಿಸಿತು. ಮಹಿಳೆ ಕೊರಳಲ್ಲಿ ಧರಿಸಿದ್ದ ಪೆಂಡೆಂಟ್ ದಕ್ಷಿಣ ಭಾರತದ ಪ್ರಸಿದ್ಧ ನಗರವಾದ ಕೊಯಮತ್ತೂರಿನಲ್ಲಿರುವ ಮಾ ಲಿಂಗ ಭೈರವಿ ದೇವಸ್ಥಾನಕ್ಕೆ ಸೇರಿದ್ದು. ಈ ಹಿನ್ನೆಲೆಯಲ್ಲಿ ಪೊಲೀಸರು ದೇವಸ್ಥಾನವನ್ನು ಸಂಪರ್ಕಿಸಿದರು. ಮೃತ ಮಹಿಳೆಯ ಫೋಟೋ ಇತ್ಯಾದಿಗಳನ್ನು ಕಳುಹಿಸಿದ್ದು, ಈ ಫೋಟೋ ವಂದನಾ ಶ್ರೀ ಅವರದ್ದು ಎಂದು ದೇವಸ್ಥಾನದವರು ತಿಳಿಸಿದ್ದು, ಆಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಂಡಿದ್ದರು.

ದೇವಸ್ಥಾನವು ಮಹಿಳೆಯ ತಂದೆಯ ಫೋನ್ ಸಂಖ್ಯೆಯನ್ನು ಅಸ್ಸಾಂ ಪೊಲೀಸರಿಗೆ ನೀಡಿದೆ. ನನ್ನ ಮಗಳು ವಾರಣಾಸಿಗೆ ಹೋಗುವುದಾಗಿ ಹೇಳಿ ಮಗಳೊಂದಿಗೆ ತೆರಳಿದ್ದು, ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ತಂದೆ ತಿಳಿಸಿದ್ದಾರೆ. ಫೋನ್ ವಿವರಗಳನ್ನು ಪರಿಶೀಲಿಸಿದಾಗ, ಪೊಲೀಸರು ಸೇನಾ ಅಧಿಕಾರಿ ಮತ್ತು ಕೊಲೆಯ ಆರೋಪಿ ಎಎಸ್ ವಾಲಿಯಾ ಅವರನ್ನು ತಲುಪಿದರು. ಆರೋಪಿಗಳು ಮೃತ ಮಹಿಳೆಯನ್ನು ಕೊಲ್ಲುವ ಸಲುವಾಗಿ 4 ವರ್ಷದ ಮಗಳನ್ನು ಕೋಲ್ಕತ್ತಾ ರೈಲು ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದು ಇದು ಸಿಸಿಟಿವಿ ದೃಶ್ಯಾವಳಿಯಿಂದ ಸಾಬೀತಾಗಿದೆ. ಪೊಲೀಸರು ಮಗಳನ್ನು ಆಕೆಯ ಅಜ್ಜನಿಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com