ಮುಂಬೈ: ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ, ವ್ಯಕ್ತಿಯ ಬಂಧನ

ವಾಣಿಜ್ಯ ನಗರಿ ಮುಂಬೈನ ಬಾಂದ್ರಾದಲ್ಲಿನ ಮೌಂಟ್ ಮೇರಿ ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚರ್ಚ್ ಸ್ಫೋಟಿಸುವುದಾಗಿ ಇ- ಮೇಲ್ ಕಳುಹಿಸಿದ ನಂತರ ಕೊಲ್ಕತ್ತಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಬಾಂದ್ರಾದಲ್ಲಿನ ಮೌಂಟ್ ಮೇರಿ ಚರ್ಚ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಚರ್ಚ್ ಸ್ಫೋಟಿಸುವುದಾಗಿ ಇ- ಮೇಲ್ ಕಳುಹಿಸಿದ ನಂತರ ಕೊಲ್ಕತ್ತಾದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.

ಐಪಿ ವಿಳಾಸದ ಮೂಲಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ,ಬಂಧಿಸಿದ್ದಾರೆ. ಇ-ಮೇಲ್ ಯಾರು ಕಳುಹಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಎಲ್ಲವೂ  ವಿಚಾರಣೆ ನಂತರ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.

ಮೌಂಟ್ ಮೇರಿ ಚರ್ಚ್ ಮೇಲೆ ದಾಳಿ ನಡೆಸುವುದಾಗಿ ಉಗ್ರ ಸಂಘಟನೆ ಲಷ್ಕರ್- ಇ- ತೊಯ್ಬಾದಿಂದ  ಡಿಸೆಂಬರ್ 30 ರಂದು ಇ-ಮೇಲ್ ನಿಂದ ಬೆದರಿಕೆ ಬಂದಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 505(3) ರಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ನಂತರ ಬಂದ ಇ-ಮೇಲ್ ನಲ್ಲಿ , ತನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಈ ರೀತಿಯ ಸಂದೇಶ ಕಳುಹಿಸಿರುವುದಾಗಿ ಆತನ ತಾಯಿ ಹೇಳಿಕೊಂಡ ಮಹಿಳೆಯೊಬ್ಬರು ಕ್ಷಮೆಯಾಚಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅದೇ ದಿನ ಪ್ರತ್ಯೇಕ ಘಟನೆಯೊಂದರಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮುಂಬೈನಲ್ಲಿ ಸ್ಫೋಟಿಸುವುದಾಗಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಶುಕ್ರವಾರ ರಾತ್ರಿ ಅಪರಿಚಿತ ಕರೆಯೊಂದು ಬಂದಿದೆ. ಕರೆಮಾಡಿದಾತ ತನನ್ನು ಉತ್ತರ ಪ್ರದೇಶದ ಅಜಾರ್ ಹುಸೈನ್ ಎಂದು ಪರಿಚಯಿಸಿಕೊಂಡಿದ್ದು, ಆರ್ ಡಿಎಕ್ಸ್ ಸೇರಿದಂತೆ ಅನೇಕ ಶಸಾಸ್ತ್ರಗಳು ತನ್ನ ಬಳಿ ಇರುವುದಾಗಿ ಹೇಳಿಕೊಂಡಿದ್ದ ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com