ನವದೆಹಲಿ: ಸೇನಾದಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಭಾನುವಾರ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ,
ಈ ಸಂಬಂಧ ಸಾಮಾಜಿಕ ಜಾಲತಾತಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಮಮ ಸೈನಿಕರು ಸದಾಕಾಲ ನಮ್ಮ ದೇಶವನ್ನು ಸುರಕ್ಷಿತವಾಗಿರಿಸಿದ್ದಾರೆ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಅವರ ಅತ್ಯುನ್ನತ ಸೇವೆ ಸಲ್ಲಿಸಿದ್ದಾರೆಂದು ಕೊಂಡಾಡಿದ್ದಾರೆ.
"ಸೇನಾ ದಿನದಂದು, ನಾನು ಎಲ್ಲಾ ಸೇನಾ ಸಿಬ್ಬಂದಿ, ಯೋಧರು ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರತಿಯೊಬ್ಬ ಭಾರತೀಯನು ನಮ್ಮ ಸೇನೆಯ ಬಗ್ಗೆ ಹೆಮ್ಮೆಪಡುತ್ತಾನೆ ಮತ್ತು ನಮ್ಮ ಸೈನಿಕರಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆಂದು ಹೇಳಿದ್ದಾರೆ.
ಭಾರತೀಯ ಸೇನೆ ಬ್ರಿಟಿಷರ ಆಡಳಿತ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಸ್ಥಾಪನೆ ಗೊಂಡಿದ್ದು 1895ರ ಎ.1 ಆದ ರೂ ಸಂಪೂರ್ಣವಾಗಿ ಭಾರತೀಯರ ಅಧಿಕಾರ ವ್ಯಾಪ್ತಿಗೆ ಬಂದದ್ದು 1949ರ ಜ. 15ರಂದು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ಒಂದೂವರೆ ವರ್ಷಗಳ ಅನಂತರ ಭಾರತೀಯ ಭೂಸೇನೆಗೆ ಒಬ್ಬ ಭಾರತೀಯ ಮುಖ್ಯಸ್ಥನಿಗೆ ಅಧಿಕಾರ ಹಸ್ತಾಂತರಗೊಳಿಸಲಾಗಿತ್ತು. 1949ರ ಜ.15ರಂದು ಬ್ರಿಟಿಷ್ ಜನರಲ್ ಫ್ರಾನ್ಸಿಸ್ ಬುಚರ್ ಭೂಸೇನೆಯ ಅಧಿಕಾರವನ್ನು ಅಂದಿನ ಲೆಫ್ಟಿನೆಂಟ್ ಜನರಲ್ ಕೆ. ಎಂ. ಕಾರಿಯಪ್ಪನವರಿಗೆ ಹಸ್ತಾಂತರಿಸಿ ಭಾರತದಿಂದ ನಿರ್ಗಮಿಸಿದರು. ಈ ದಿನದ ಜ್ಞಾಪಕಾರ್ಥವಾಗಿ ಭಾರತೀಯ ಭೂಸೇನೆ ಪ್ರತೀ ವರ್ಷ ಜ.15ರಂದು ಸೇನಾ ದಿವಸ ಎಂದು ಆಚರಿಸುತ್ತದೆ.
ಫೀಲ್ಡ್ ಮಾರ್ಷಲ್ ಕೊದಂಡೆರ ಮಾದಪ್ಪ ಕಾರ್ಯಪ್ಪ ನಮ್ಮ ಕರ್ನಾಟಕದ ಹೆಮ್ಮೆಯ ವೀರ ಸೇನಾನಿ. ಇವರು ಜನಿಸಿದ್ದು ಕೊಡಗಿನ ಶನಿವಾರಸಂತೆಯಲ್ಲಿ. ಮೊದಲನೇ ವಿಶ್ವ ಯುದ್ಧದ ಅನಂತರ ಭಾರತೀಯ ಸೈನಿಕರ ಶೌರ್ಯ ಸಾಹಸಗಳಿಂದ ಪ್ರಭಾವಿತರಾದ ಬ್ರಿಟಿಷರು ಭಾರತೀಯರನ್ನು ಸೈನ್ಯಾಧಿಕಾರಿ ದರ್ಜೆಯಲ್ಲೂ ಸೈನ್ಯಕ್ಕೆ ಸೇರಿಸಿಕೊಳ್ಳೋಣ ಎಂದು ನಿರ್ಧರಿಸಿದರು. ಹಾಗೆ ಪ್ರಾರಂಭಗೊಂಡ ಮೊದಲ ಬ್ಯಾಚಿನಲ್ಲೇ ಆಯ್ಕೆಗೊಂಡರು ಕಾರ್ಯಪ್ಪನವರು.
ಸುಮಾರು ಮೂರು ದಶಕಗಳ ಅವರ ಸೇವಾವಧಿಯಲ್ಲಿ ಅವರು ಎಲ್ಲದರಲ್ಲೂ ಪ್ರಥಮವಾಗೇ ಮಿಂಚಿದರು. ಒಂದು ಬೆಟಾಲಿಯನ್‌ನ ಮೊದಲ ಭಾರತೀಯ ಕಮಾಂಡರ್ ಆಗಿ, ಬ್ರಿಗೇಡ್‌ನ, ಡಿವಿಶನ್‌ನ ಕೊನೆಗೆ ಇಡೀ ಭಾರತೀಯ ಸೇನೆಗೇ ಮೊಟ್ಟಮೊದಲ ಭಾರತೀಯ ಕಮಾಂಡರ್ ಇನ್ ಚೀಫ್ ಅಧಿಕಾರ ವಹಿಸಿಕೊಂಡ ಹೆಗ್ಗಳಿಕೆ ಇವರದು. ಸ್ಯಾಮ್ ಮಾಣಿಕ್ ಷಾರವರ ಅನಂತರ ಫೀಲ್ಡ್ ಮಾರ್ಷಲ್ ಪದವಿ ಪಡೆದುಕೊಂಡ ಎರಡನೇ ಜನರಲ್ ಇವರು. ಇವರ ಶೌರ್ಯ, ಸಾಹಸಗಾಥೆಗಳ ಮತ್ತು ನೈತಿಕ ಮೌಲ್ಯಗಳ ಭದ್ರ ಬುನಾದಿಯ ಮೇಲೆ ಭಾರತ ಸೇನೆ ಪ್ರಪಂಚದಲ್ಲೇ ಆದರ್ಶಪ್ರಾಯವಾಗಿ ಮುಂದುವರಿದಿದೆ.
Advertisement