ಎನ್ ಜಿಒಗಳು ಮಾಡುತ್ತಿರುವ ಕೆಲಸವೇನು?: ಅನಧಿಕೃತ ಹಣ ವರ್ಗಾವಣೆ ನಿಯಂತ್ರಣಕ್ಕೆ ಶಾಸನಬದ್ಧ ಸಂಸ್ಥೆ ಸ್ಥಾಪನೆಗೆ ಕೇಂದ್ರ ಮುಂದು

ಹಣಕಾಸು ಅನುದಾನಗಳ ಅಕ್ರಮ ತಿರುವು ಹಾಗೂ ತಮ್ಮ ಘೋಷಿತ ವ್ಯಾಪ್ತಿಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿರುವ ಹಲವಾರು ಎನ್‌ಜಿಒಗಳ(NGO) ಚಲನವಲನಗಳು, ಚಟುವಟಿಕೆಗಳ ಮೇಲೆ ನಿಗಾ ಇಡಲು ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹಣಕಾಸು ಅನುದಾನಗಳ ಅಕ್ರಮ ತಿರುವು ಹಾಗೂ ತಮ್ಮ ಘೋಷಿತ ವ್ಯಾಪ್ತಿಯನ್ನು ಮೀರಿದ ಚಟುವಟಿಕೆಗಳಲ್ಲಿ ತೊಡಗಿರುವ ಹಲವಾರು ಎನ್‌ಜಿಒಗಳ(NGO) ಚಲನವಲನಗಳು, ಚಟುವಟಿಕೆಗಳ ಮೇಲೆ ನಿಗಾ ಇಡಲು ಶಾಸನಬದ್ಧ ಸಂಸ್ಥೆಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ಮೂಲಗಳ ಪ್ರಕಾರ ಸರ್ಕಾರವು ‘ಚಾರಿಟಿ ಕಮಿಷನರ್’ನ ಕಾನೂನು ಅಂಗವನ್ನು ಸ್ಥಾಪಿಸಲು ಮುಂದಾಗಿದ್ದು, ವಿಶೇಷವಾಗಿ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ನೋಂದಾಯಿಸಲ್ಪಡದಿರುವ ಎನ್ ಜಿಒಗಳ ಮೇಲಿನ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ, 

ಸರ್ಕಾರದ ಮೂಲಗಳ ಪ್ರಕಾರ, "ಹಲವು ಎನ್‌ಜಿಒಗಳ ಕಾರ್ಯಚಟುವಟಿಕೆಗಳು ಭಾರತದ ಹಿತಾಸಕ್ತಿಗೆ ವಿರುದ್ಧವಾದ ಚಟುವಟಿಕೆಗಳು ಎಂದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿವೆ.

ಭಾರತದಲ್ಲಿ, ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಲಾದ ಎನ್‌ಜಿಒಗಳನ್ನು ಪ್ರತ್ಯೇಕ ವಿಭಾಗದ ಮೂಲಕ ಗೃಹ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ, ಸುಮಾರು 35 ಲಕ್ಷ ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಾಯಿಸಲ್ಪಡದಿರುವ ಮತ್ತು ಸೊಸೈಟಿ ನೋಂದಣಿ ಕಾಯಿದೆಯಂತಹ ಸುಮಾರು 40 ವಿವಿಧ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತಿರುವ ಕಂಪನಿಗಳ ಕಾಯಿದೆ, ಸಾರ್ವಜನಿಕ ಟ್ರಸ್ಟ್ ಕಾಯಿದೆ ಮತ್ತು ಇತರ ಕಾಯ್ದೆಗಳಿಂದ ನಡೆಸಲ್ಪಡುವ ಸಂಸ್ಥೆಗಳಾಗಿವೆ.

ಅನೇಕ ಪ್ರಕರಣಗಳಲ್ಲಿ ಎನ್ ಜಿಒಗಳು ಕಾನೂನನ್ನು ಉಲ್ಲಂಘಿಸುತ್ತಿರುವ ಅಂಶಗಳು ಪತ್ತೆಯಾಗಿವೆ. "ಚಾಲ್ತಿಯಲ್ಲಿರುವ ರಚನೆಯ ಅಡಿಯಲ್ಲಿ, ಭಾರತದಲ್ಲಿನ ಎಲ್ಲಾ ಎನ್‌ಜಿಒಗಳು ಸಮರ್ಪಕವಾಗಿ ನಿಯಂತ್ರಿಸಲ್ಪಡುತ್ತವೆ ಮತ್ತು ಅವುಗಳ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಾಕಷ್ಟು ಕಾನೂನುಗಳಿವೆ." ಎಫ್‌ಸಿಆರ್‌ಎ ಅಡಿಯಲ್ಲಿ ಅಥವಾ ಎಫ್‌ಸಿಆರ್‌ಎ ಅಲ್ಲದಿದ್ದರೂ, ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾ ಇಡಲು ಸ್ಥಳೀಯ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಸರ್ಕಾರವು ಎನ್‌ಜಿಒಗಳಿಗೆ ಅನುಮತಿ ನೀಡಿದೆ ಎಂದು ಹೆಸರು ಹೇಳಲಿಚ್ಛಿಸದ ಎನ್ ಜಿಒನ ಪ್ರತಿನಿಧಿಯೊಬ್ಬರು ಹೇಳುತ್ತಾರೆ.

ಆದರೆ ಸರ್ಕಾರವು ಎನ್‌ಜಿಒಗಳು ಹಲವಾರು ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದನ್ನು ಕಂಡುಹಿಡಿದಿದೆ, ವಿಶೇಷವಾಗಿ COVID ಸಮಯದಲ್ಲಿ. ಕಾನೂನುಬಾಹಿರ ಮತ್ತು ಅನಧಿಕೃತ ಜೈವಿಕ ತಂತ್ರಜ್ಞಾನ-ಸಂಬಂಧಿತ ಸಂಶೋಧನೆಗಳನ್ನು ನಡೆಸುವುದರಿಂದ ಹಿಡಿದು ಅಂತಾರಾಷ್ಟ್ರೀಯ ರಂಗಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳುಮಾಡುವವರೆಗೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅಡ್ಡಿಪಡಿಸುವುದರಿಂದ ಮೂಲಭೂತವಾದ ಮತ್ತು ಮತಾಂತರಕ್ಕೆ ಹಣ ನೀಡುವುದರಿಂದ, ಆಂತರಿಕ ಶಾಂತಿಯನ್ನು ಅಸ್ಥಿರಗೊಳಿಸಲು ಎನ್‌ಜಿಒಗಳು ಯೋಜಿತ ಪ್ರಚಾರದಲ್ಲಿ ತೊಡಗಿವೆ ಎಂದು ಸರ್ಕಾರದ ಗಮನಕ್ಕೆ ಬಂದಿದೆ.

ಕೋವಿಡ್ ಪರಿಹಾರದ ಉದ್ದೇಶಕ್ಕಾಗಿ ಎನ್‌ಜಿಒಗಳು ಸ್ವೀಕರಿಸಿದ ಕ್ರೌಡ್‌ಫಂಡಿಂಗ್ ಹಣದ ನಿರ್ದಿಷ್ಟ ನಿದರ್ಶನಗಳನ್ನು ಅನುಸರಿಸಿ ಸರ್ಕಾರವು ಆದ್ಯತೆಯ ಮೇಲೆ ಪ್ರಕರಣಗಳನ್ನು ಗಮನಿಸಿದೆ. ಅನೇಕ ಎನ್‌ಜಿಒಗಳ ಖಾತೆಗಳಿಗೆ ಬಂದ ವಿದೇಶಿ ನಿಧಿಗಳು ಸಹ ಅಲ್ ಖೈದಾ ಮತ್ತು ಎಲ್‌ಇಟಿಗೆ ಸಂಬಂಧಿಸಿರುವ ಘಟಕಗಳಲ್ಲಿ ಪತ್ತೆಯಾಗಿವೆ.

ಕೃಷಿ ಪ್ರತಿಭಟನೆಗಳಿಗೆ ಸಂಬಂಧಿಸಿದ ಸಂಘಟನೆಯೊಂದು ತೀವ್ರಗಾಮಿ ಖಲಿಸ್ತಾನ್ ಪರ ಸಂಘಟನೆಗಳಿಂದ ಧನಸಹಾಯ ಪಡೆದಾಗ ಇದೇ ರೀತಿಯ ನಿಧಿಯ ಮಾದರಿಯ ಪ್ರವೃತ್ತಿಯು ಮುಂಚೂಣಿಗೆ ಬಂದಿತು, "ಇದು ಹಲವಾರು ಭಯೋತ್ಪಾದಕ ಸಂಘಟನೆಗಳಿಂದ ವಿದೇಶಿ ಮೂಲದ ಭಾರತ-ವಿರೋಧಿ ಪಡೆಗಳ ಕಾರ್ಯಾಚರಣೆಯ ಸಹಯೋಗವನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com