ಜೋಶಿಮಠ ಬಿಕ್ಕಟ್ಟು: ಬಿರುಕು ಬಿಟ್ಟಿದ್ದ ಮನೆಯ ಛಾವಣಿ ಕುಸಿತ, ಆವರಣ ಮುಳುಗಡೆ

ಜೋಶಿಮಠದ ಸಿಂಗಧಾರದಲ್ಲಿ ಈಗಾಗಲೇ ಬಿರುಕು ಬಿಟ್ಟಿದ್ದ ಮನೆಯ ಛಾವಣಿ ಕುಸಿದು ಬಿದ್ದಿದೆ. ಭೂ ಕುಸಿತದಿಂದ ಈ ಪ್ರದೇಶವು ತೀವ್ರವಾಗಿ ಬಾಧಿತವಾಗಿದೆ. ಭಾನುವಾರ ಮನೆ ಕುಸಿದು ಬಿದ್ದಿದ್ದು, ಆವರಣವೂ ಸಾಕಷ್ಟು ಮುಳುಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಜೋಶಿಮಠ: ಜೋಶಿಮಠದ ಸಿಂಗಧಾರದಲ್ಲಿ ಈಗಾಗಲೇ ಬಿರುಕು ಬಿಟ್ಟಿದ್ದ ಮನೆಯ ಛಾವಣಿ ಕುಸಿದು ಬಿದ್ದಿದೆ. ಭೂ ಕುಸಿತದಿಂದ ಈ ಪ್ರದೇಶವು ತೀವ್ರವಾಗಿ ಬಾಧಿತವಾಗಿದೆ. ಭಾನುವಾರ ಮನೆ ಕುಸಿದು ಬಿದ್ದಿದ್ದು, ಆವರಣವೂ ಸಾಕಷ್ಟು ಮುಳುಗಿದೆ.

ಇದು ಸುತ್ತಮುತ್ತಲಿನ ವಸತಿ ಕಟ್ಟಡಗಳಿಗೆ ಹೊಸ ಅಪಾಯವನ್ನು ತಂದೊಡ್ಡಿದೆ. ಆದಾಗ್ಯೂ, ಇಲ್ಲಿ ವಾಸಿಸುವ ಕುಟುಂಬಗಳನ್ನು ಆಡಳಿತವು ಈಗಾಗಲೇ ಪ್ರಾಥಮಿಕ ಶಾಲೆ, ಮಿಲನ್ ಕೇಂದ್ರ ಸೇರಿದಂತೆ ಇತರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.

ಮನೆ ಮಾಲೀಕ ದಿನೇಶ್ ಲಾಲ್ ಅವರನ್ನು ಜನವರಿ 3 ರಂದು ಮನೆಯಿಂದ ಸ್ಥಳಾಂತರಿಸಲಾಗಿತ್ತು. ಆದರೆ, ಅವರು ಆಶ್ರಯ ಪಡೆದಿರುವ ಮನೆಯೂ ಬಿರುಕು ಬಿಟ್ಟಿದೆ. 

ಈ ಪ್ರದೇಶದಲ್ಲಿ ಬಿರುಕುಗಳು ವೇಗವಾಗಿ ಹೆಚ್ಚುತ್ತಿವೆ. ಇಲ್ಲಿನ ಮನೆಗಳು ಹಾಗೂ ಹೊಲಗದ್ದೆಗಳಲ್ಲಿ 2 ರಿಂದ 2.5 ಅಡಿ ಬಿರುಕು ಬಿಟ್ಟಿವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಸಿಂಗಧಾರ್‌ನ ನಿವಾಸಿ ವಿಶ್ವೇಶ್ವರಿ ದೇವಿ ಮಾತನಾಡಿ, ನಮ್ಮ ಮನೆ ಬಿರುಕು ಬಿಟ್ಟ ನಂತರ ಆಡಳಿತವು ತನ್ನನ್ನು ಶಿಬಿರಕ್ಕೆ ಸ್ಥಳಾಂತರಿಸಿತು. ಆದರೆ, ದನದ ಕೊಟ್ಟಿಗೆ ಕುಸಿತದಿಂದ ಹಾನಿಗೊಳಗಾದ ನಂತರವೂ ಜಾನುವಾರುಗಳಿಗೆ ಯಾವುದೇ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿಲ್ಲ ಎಂದು ಹೇಳಿದರು.

ಹಗಲಿನಲ್ಲಿ ತನ್ನ ಎರಡು ಹಾಲು ಕೊಡುವ ಹಸುಗಳು ಮತ್ತು ಎರಡು ಕರುಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಆದರೆ, ರಾತ್ರಿಯಲ್ಲಿ ಅವುಗಳಿಗೆ ಏನಾದರೂ ಸಂಭವಿಸುವ ಭಯವಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com