ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ: ವಿಪತ್ತು ನಿರ್ವಹಣಾ ಪಡೆ

ಮುಳುಗುತ್ತಿರುವ ಉತ್ತರಾಖಂಡದ ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ ಎಂದು ವಿಪತ್ತು ನಿರ್ವಹಣಾ ಪಡೆ ಮಂಗಳವಾರ ಘೋಷಣೆ ಮಾಡಿದೆ.
ಜೋಶಿಮಠದಲ್ಲಿ ಭೂಕುಸಿತ
ಜೋಶಿಮಠದಲ್ಲಿ ಭೂಕುಸಿತ

ಡೆಹ್ರಾಡೂನ್: ಮುಳುಗುತ್ತಿರುವ ಉತ್ತರಾಖಂಡದ ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ ಎಂದು ವಿಪತ್ತು ನಿರ್ವಹಣಾ ಪಡೆ ಮಂಗಳವಾರ ಘೋಷಣೆ ಮಾಡಿದೆ.

ಉತ್ತರಾಖಂಡದ ಮೇಲ್ಭಾಗದ ಜೋಶಿಮಠದಲ್ಲಿ ಭೂಕುಸಿತ ಮತ್ತು ಕುಸಿತದ ಸುತ್ತ ವಿಕಸನಗೊಳ್ಳುತ್ತಿರುವ ಕಟ್ಟಡಗಳಲ್ಲಿನ ಬಿರುಕುಗಳು ಪ್ರಕರಣಗಳ ನಡುವೆಯೇ ಇದೀಗ ಕೇಂದ್ರ ವಿಪತ್ತು ನಿರ್ವಹಣಾ ಪಡೆ ಆಘಾತಕಾರಿ ಘೋಷಣೆ ಮಾಡಿದ್ದು, ಜೋಶಿಮಠದ 4 ವಾರ್ಡ್ ಗಳು ಸಂಪೂರ್ಣ ಅಸುರಕ್ಷಿತ ಎಂದು ಹೇಳಿದೆ.

ಈ ಬಗ್ಗೆ ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಅವರು ಮಾಹಿತಿ ನೀಡಿದ್ದು, ಪವಿತ್ರ ಪಟ್ಟಣದಲ್ಲಿ ನಾಲ್ಕು ಪುರಸಭೆಯ ಪ್ರದೇಶಗಳು ಅಥವಾ ವಾರ್ಡ್‌ಗಳು ಸಂಪೂರ್ಣ ಅಸುರಕ್ಷಿತ ಎಂದು ತಿಳಿಸಿದ್ದಾರೆ. ಮಂಗಳವಾರ ಡೆಹ್ರಾಡೂನ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿನ್ಹಾ ಅವರು, "ಜೋಶಿಮಠದ ನಾಲ್ಕು ವಾರ್ಡ್‌ಗಳನ್ನು ಸಂಪೂರ್ಣವಾಗಿ ಅಸುರಕ್ಷಿತವೆಂದು ಘೋಷಿಸಲಾಗಿದೆ. ಉಳಿದ ವಾರ್ಡ್‌ಗಳಲ್ಲಿ ಭೂಕುಸಿತ ಭಾಗಶಃ ಪರಿಣಾಮ ಬೀರಿವೆ ಎಂದು ಹೇಳಿದರು.

"ಜೋಶಿಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಸಿತದ ಕಾರಣಗಳು ಮತ್ತು ವ್ಯಾಪ್ತಿಯ ಬಗ್ಗೆ ನಡೆಯುತ್ತಿರುವ ತನಿಖೆಯಲ್ಲಿ ಅನೇಕ ಸಂಸ್ಥೆಗಳು ತೊಡಗಿಸಿಕೊಂಡಿವೆ. ನಾವು ಶೀಘ್ರದಲ್ಲೇ ಅಂತಿಮ ವರದಿಯನ್ನು ನೀಡುತ್ತೇವೆ. ನಾವು ಮಳೆಯ ನಿರೀಕ್ಷೆಯಲ್ಲಿ ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದೇವೆ" ಎಂದು ಅವರು ಹೇಳಿದರು. ಅಂತೆಯೇ ಜೋಶಿಮಠದ ಜೆಪಿ ಕಾಲೋನಿಯಲ್ಲಿ ನೀರು ಬಿಡುವ ಮಟ್ಟ ಕಡಿಮೆಯಾಗಿದೆ. ಇದು ‘ಒಳ್ಳೆಯ ಸುದ್ದಿಯಾದರೂ ಜನರಲ್ಲಿ ಆತಂಕ ಮುಂದುವರೆದಿದೆ. ಸಂತ್ರಸ್ತ ಕುಟುಂಬಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದ್ದು, ಒಂದು ವಾರದಲ್ಲಿ ಮಾದರಿ ಗುಡಿಸಲುಗಳು ಸಿದ್ಧಗೊಳ್ಳಲಿವೆ ಎಂದು ಅವರು ಹೇಳಿದರು.

ಉತ್ತರಾಖಂಡ ಸರ್ಕಾರ ಈಗಾಗಲೇ ಜೋಶಿಮಠದ ಸಂತ್ರಸ್ತ ಕುಟುಂಬಗಳಿಗೆ ಕೋಟಿಗಟ್ಟಲೆ ಪರಿಹಾರ ಪ್ಯಾಕೇಜ್ ಘೋಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com