ಒಡಿಶಾ ರೈಲು ದುರಂತದ ಮಾದರಿಯಲ್ಲೇ ಮತ್ತೊಂದು ದುರಂತ: ರೈಲ್ವೇ ಇಲಾಖೆಗೆ ಅನಾಮಧೇಯ ಬೆದರಿಕೆ ಪತ್ರ

291 ಮಂದಿಯ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ಮಾದರಿಯಲ್ಲೇ ಮತ್ತೊಂದು ದುರಂತ ಸಂಭವಿಸಲಿದೆ ಎಂದು  ರೈಲ್ವೇ ಇಲಾಖೆಗೆ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದೆ.
ಬಾಲಾಸೋರ್ ರೈಲು ಅಪಘಾತ
ಬಾಲಾಸೋರ್ ರೈಲು ಅಪಘಾತ

ಹೈದರಾಬಾದ್: 291 ಮಂದಿಯ ಸಾವಿಗೆ ಕಾರಣವಾದ ಒಡಿಶಾ ರೈಲು ದುರಂತದ ಮಾದರಿಯಲ್ಲೇ ಮತ್ತೊಂದು ದುರಂತ ಸಂಭವಿಸಲಿದೆ ಎಂದು  ರೈಲ್ವೇ ಇಲಾಖೆಗೆ ಅನಾಮಧೇಯ ಬೆದರಿಕೆ ಪತ್ರವೊಂದು ಬಂದಿದೆ.

ಮೂಲಗಳ ಪ್ರಕಾರ “ಹೈದರಾಬಾದ್-ದೆಹಲಿ-ಹೈದರಾಬಾದ್” ಮಾರ್ಗದಲ್ಲಿ “ಬಾಲಾಸೋರ್ ತರಹದ ರೈಲು ದುರಂತ” ಸಂಭವಿಸುವ ಕುರಿತು ಬೆದರಿಕೆಯ ಅನಾಮಧೇಯ ಪತ್ರವನ್ನು ಇತ್ತೀಚೆಗೆ ಇಲ್ಲಿ ದಕ್ಷಿಣ ಮಧ್ಯ ರೈಲ್ವೆ (SCR)ಗೆ ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜೂನ್ 30 ರಂದು ಈ ಪತ್ರ ಬಂದಿದ್ದು, ದಕ್ಷಿಣ ಮಧ್ಯ ರೈಲ್ವೆಯ ವ್ಯಾಪ್ತಿಯ ಸಿಕಂದರಾಬಾದ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಕಳುಹಿಸಲಾಗಿದೆ. ಮುಂದಿನ ವಾರದಲ್ಲಿ “ಹೈದರಾಬಾದ್-ದೆಹಲಿ-ಹೈದರಾಬಾದ್” ಮಾರ್ಗದಲ್ಲಿ “ಬಾಲಾಸೋರ್ ತರಹದ ರೈಲು ದುರಂತ” ಸಂಭವಿಸುವ ಸಾಧ್ಯತೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಂಚೆ ಮೂಲಕ ಪತ್ರ ಬಂದಿತ್ತು. ಪತ್ರದ ಬಗ್ಗೆ ಎಸ್‌ಸಿಆರ್ ಅಧಿಕಾರಿಗಳು ತೆಲಂಗಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ವಾರ ಪತ್ರವನ್ನು ಅಂಚೆ ಮೂಲಕ ಸ್ವೀಕರಿಸಲಾಗಿದೆ ಮತ್ತು ಮುಂದಿನ ಕ್ರಮಕ್ಕಾಗಿ ರಾಜ್ಯ ಗುಪ್ತಚರಕ್ಕೆ ನೀಡಲಾಗಿದೆ” ಎಂದು SCR ಮೂಲಗಳು ತಿಳಿಸಿವೆ.

ಜೂನ್ 2 ರಂದು, ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮೂರು ರೈಲುಗಳು ಢಿಕ್ಕಿ ಹೊಡೆದು 280 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಭೆ
ಇದಕ್ಕೂ ಮುನ್ನ ಜೂನ್ 20 ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ವರಿಷ್ಠಾಧಿಕಾರಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಬಾಲಸೋರ್‌ನಲ್ಲಿ ಸಭೆ ನಡೆಸಿದರು. ಸಚಿವರು ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಲ್‌ಎಡಿ) ನಿಧಿಯಿಂದ 1 ಕೋಟಿ ರೂ ಮತ್ತು ಬಹನಗಾ ಗ್ರಾಮ ಮತ್ತು ಅಲ್ಲಿನ ಆಸ್ಪತ್ರೆಯ ಅಭಿವೃದ್ಧಿಗೆ ರೈಲ್ವೆ ನಿಧಿಯಿಂದ 1 ಕೋಟಿ ರೂ. ನೆರವು ಘೋಷಣೆ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com