ಅತ್ಯಾಚಾರ ಎಸಗಿ ಕೊಲೆ; 16 ವರ್ಷದ ಬಾಲಕಿ ಶವವನ್ನು ನದಿಗೆ ಎಸೆದ ಅಸ್ಸಾಂ ವ್ಯಕ್ತಿಯ ಬಂಧನ

16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆತ ಆಕೆಯ ದೇಹವನ್ನು ಅಸ್ಸಾಂನ ಗುವಾಹಟಿಯ ಸೋನಾಪುರ್ ಪ್ರದೇಶದ ಬಳಿ ನದಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಗುವಾಹಟಿ: 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದ ಮೇಲೆ ಅಸ್ಸಾಂ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆತ ಆಕೆಯ ದೇಹವನ್ನು ಅಸ್ಸಾಂನ ಗುವಾಹಟಿಯ ಸೋನಾಪುರ್ ಪ್ರದೇಶದ ಬಳಿ ನದಿಗೆ ಎಸೆದಿದ್ದಾನೆ ಎಂದು ವರದಿಯಾಗಿದೆ.

ಜೂನ್ 26 ರಂದು ತನ್ನ ಫೋನ್ ರೀಚಾರ್ಜ್ ಮಾಡಲು ಹತ್ತಿರದ ಅಂಗಡಿಗೆ ಹೋದ ಸಂತ್ರಸ್ತೆ ಅಂದಿನಿಂದ ನಾಪತ್ತೆಯಾಗಿದ್ದಳು ಎಂದು ವರದಿ ತಿಳಿಸಿದೆ.

ಜೂನ್ 30 ರಂದು ಸೋನಾಪುರದ ದಿಗರು ನದಿಯಲ್ಲಿ 8ನೇ ತರಗತಿ ವಿದ್ಯಾರ್ಥಿಯ ಶವ ಪತ್ತೆಯಾಗಿತ್ತು.

ಈ ಸುದ್ದಿ ತಿಳಿದ ಸ್ಥಳೀಯರು ಸೋನಾಪುರ ಪೊಲೀಸ್ ಠಾಣೆಯ ಬಳಿ ಪ್ರತಿಭಟನೆ ನಡೆಸಿದರು ಎಂದು ಎನ್‌ಡಿಟಿವಿ ಹೇಳಿದೆ. ಶೀಘ್ರವೇ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಆರೋಪಿಯನ್ನು ಬಬ್ಲು ತುಮುಂಗ್ ಎಂದು ಗುರುತಿಸಲಾಗಿದ್ದು, ಆಟೊರಿಕ್ಷಾ ಚಾಲಕ. ಆತ ಅಸ್ಸಾಂ ಪೊಲೀಸರ ಬಳಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com