ಅಮರನಾಥ ಯಾತ್ರೆ: 2 ದಿನದಲ್ಲಿ 6 ಮಂದಿ ಯಾತ್ರಿಗಳ ಸಾವು, ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಪವಿತ್ರ ಅಮರನಾಥ ಯಾತ್ರೆ ವೇಳೆ ಕಳೆದ 48 ಗಂಟೆಗಳ ಅವಧಿಯಲ್ಲಿ 6 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಸಾವಿಗೀಡಾದ ಯಾತ್ರಾರ್ಥಿಗಳ ಸಂಖ್ಯೆ 9ಕ್ಕೇರಿಕೆಯಾಗಿದೆ.
ಅಮರನಾಥ್ ಯಾತ್ರೆ
ಅಮರನಾಥ್ ಯಾತ್ರೆ

ಡೆಹ್ರಾಡೂನ್: ಪವಿತ್ರ ಅಮರನಾಥ ಯಾತ್ರೆ ವೇಳೆ ಕಳೆದ 48 ಗಂಟೆಗಳ ಅವಧಿಯಲ್ಲಿ 6 ಮಂದಿ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಸಾವಿಗೀಡಾದ ಯಾತ್ರಾರ್ಥಿಗಳ ಸಂಖ್ಯೆ 9ಕ್ಕೇರಿಕೆಯಾಗಿದೆ.

ಕಳೆದ ಎರಡು ದಿನಗಳಲ್ಲಿ ಆರು ಅಮರನಾಥ ಯಾತ್ರಿಗಳು ಸಾವನ್ನಪ್ಪಿದ್ದು, ಈ ವರ್ಷದ ತೀರ್ಥಯಾತ್ರೆಯ ಸಂದರ್ಭದಲ್ಲಿ ಸಾವಿಗೀಡಾದ ಯಾತ್ರಾರ್ಥಿಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ. ಈ ಪೈಕಿ ಎಂಟು ಯಾತ್ರಿಗಳು ಮತ್ತು ಐಟಿಬಿಪಿ ಸಿಬ್ಬಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮೃತರ ವಿವರಗಳನ್ನು ಮತ್ತು ಸಾವಿನ ಕಾರಣವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದರೆ ಪರ್ವತದಲ್ಲಿ ಕಡಿಮೆ ಆಮ್ಲಜನಕದ ಸಾಂದ್ರತೆಯಿಂದ ಪ್ರಚೋದಿಸಲ್ಪಟ್ಟ ಹೃದಯ ಸ್ತಂಭನದಿಂದಾಗಿ ಅಮರನಾಥ ಯಾತ್ರಿಕರು ಸಾವನ್ನಪ್ಪುತ್ತಿದ್ದಾರೆ ಎಂದು ಊಹಿಸಲಾಗಿದೆ. ಈ ಬಗ್ಗೆ ಕರ್ತವ್ಯದಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳು ಕೂಡ ಇಂತಹುದೇ ಸಾಮಾನ್ಯ ಕಾರಣಗಳಿಂದ ಯಾತ್ರಾರ್ಥಿಗಳು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ.

ಇಲ್ಲಿಯವರೆಗೆ, ಯಾತ್ರೆಗೆ ಸಂಬಂಧಿಸಿದ ಒಂಬತ್ತು ಸಾವುಗಳು ಸಂಭವಿಸಿವೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com