ದೆಹಲಿಗೆ ಬಂಗಾಳ ಗೌರ್ನರ್: ಗೃಹ ಸಚಿವ ಅಮಿತ್ ಶಾ ಭೇಟಿ ಸಾಧ್ಯತೆ
ಕೋಲ್ಕತ್ತ: ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ, ಬಂಗಾಳ ಗೌರ್ನರ್ ಸಿವಿ ಆನಂದ ಬೋಸ್ ದೆಹಲಿಗೆ ಭೇಟಿ ನೀಡಲಿದ್ದಾರೆ.
ದೆಹಲಿ ಭೇಟಿ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಶನಿವಾರದಂದು ಹಿಂಸಾಚಾರದ ಹಲವು ಘಟನೆಗಳು ವರದಿಯಾಗಿದ್ದು, ನೀತಿ ಸಂಹಿತೆ ಮೇಲೆ ಪರಿಣಾಮ ಬೀರಿದೆ.
ಇದೇ ವೇಳೆ ಹಿಂಸಾಚಾರದಲ್ಲಿ ಭಾನುವಾರ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರದಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಂಗಾಳ ರಾಜ್ಯ ಚುನಾವಣಾ ಆಯೋಗ ಹೇಳಿದೆ.
ಪಂಚಾಯತ್ ಚುನಾವಣೆಗೆ ಮತದಾನದ ದಿನ ಚುನಾವಣೆಗೆ ಸಂಬಂಧಿಸಿದಂತೆ ಬಂಗಾಳದಲ್ಲಿ ಹಲವೆಡೆ ಹಿಂಸಾಚಾರಗಳು ವರದಿಯಾಗಿದ್ದು, 10 ಮಂದಿ ಸಾವನ್ನಪ್ಪಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ ಎಂದು ಆಯೋಗ ಹೇಳಿದೆ. ಬ್ಯಾಲೆಟ್ ಪೇಪರ್ ಗಳನ್ನು ಲೂಟಿ ಮಾಡಲಾಗಿದ್ದು ಹಲವೆಡೆ ರಿಗ್ಗಿಂಗ್ ಆರೋಪವೂ ಕೇಳಿಬಂದಿದೆ. ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ 60 ಕ್ಕೂ ಹೆಚ್ಚು ಬೂತ್ ಗಳಲ್ಲಿ ಮರು ಮತದಾನ ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ