PUBG Love: ಸೀರೆ, ಸಿಂಧೂರ, ಕೈಗೆ ಬಳೆ.. 'ಸಚಿನ್ ಬಿಟ್ಟು ಬರಲ್ಲ ಎಂದ ಸೀಮಾ'..: ಜಾಮೀನು ಬಳಿಕ ಪಾಕ್ ಮಹಿಳೆ ಪ್ರತಿಕ್ರಿಯೆ!

ಪಬ್ ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಭಾರತ ಮೂಲದ ಯುವಕನಿಗಾಗಿ ಭಾರತಕ್ಕೆ ಬಂದು ಬಂಧನಕ್ಕೀಡಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಜಾಮೀನು ದೊರೆತಿದ್ದು, ನಾನೂ ಭಾರತೀಯಳಂತೆ ಅನುಭವವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ಮತ್ತು ಭಾರತ ಸಚಿನ್ ಮೀನಾ
ಪಾಕಿಸ್ತಾನದಿಂದ ಬಂದ ಸೀಮಾ ಹೈದರ್ ಮತ್ತು ಭಾರತ ಸಚಿನ್ ಮೀನಾ
Updated on

ನೋಯ್ಡಾ: ಪಬ್ ಜಿ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ಭಾರತ ಮೂಲದ ಯುವಕನಿಗಾಗಿ ಭಾರತಕ್ಕೆ ಬಂದು ಬಂಧನಕ್ಕೀಡಾಗಿದ್ದ ಪಾಕಿಸ್ತಾನ ಮೂಲದ ಮಹಿಳೆಗೆ ಜಾಮೀನು ದೊರೆತಿದ್ದು, ನಾನೂ ಭಾರತೀಯಳಂತೆ ಅನುಭವವಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ಜಾಮೀನು ಪಡೆದು ಮಳೆಯ ನಡುವೆಯೇ ಜೈಲಿನಿಂದ ಹೊರಬಂದ ಪಾಕಿಸ್ತಾನದ ಸೀಮಾ ಹೈದರ್ ತಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಮುಂದಾಗಿದ್ದು, ಭಾರತದ ಸಚಿನ್ ಮೀನಾ ಎಂಬ ವ್ಯಕ್ತಿಯನ್ನ ಮತ್ತೆ ಸೇರಿಕೊಂಡಿದ್ದಾರೆ. ಜುಲೈ 4 ರಂದು ಸೀಮಾ ಅವರನ್ನು ನೇಪಾಳದ ಮೂಲಕ ವೀಸಾ ಇಲ್ಲದೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದರು. ಅಲ್ಲದೆ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಸಚಿನ್ ಮೀನಾ ನನ್ನೂ ಕೂಡ ಪೊಲೀಸರು ಬಂಧಿಸಿದ್ದರು. ಇದೀಗ ಇದೀಗ ಕೋರ್ಟ್ ಇಬ್ಬರಿಗೂ ಷರತ್ತು ಬದ್ಧ ಜಾಮೀನು ನೀಡಿದೆ.

ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿವ ವೇಳೆ ಪಾಕಿಸ್ತಾನದ ಸೀಮಾ ಹೈದರ್ ಸೀರೆ, ಸಿಂಧೂರ, ಕೈಗೆ ಬಳೆ ತೊಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಂಡರು. ಈ ವೇಳೆ ಮಾತನಾಡಿದ ಸೀಮಾ, "ನನ್ನ ಪತಿ ಹಿಂದೂ, ಹಾಗಾಗಿ ನಾನು ಹಿಂದೂ. ನಾನು ಈಗ ಭಾರತೀಯಳು ಎಂದು ಭಾವಿಸುತ್ತೇನೆ" ಎಂದು ಸೀಮಾ ತಿಳಿಸಿದ್ದಾರೆ.

ಈ ಜೋಡಿಯ ಪ್ರೇಮಕಥೆ ಬಾಲಿವುಡ್ ಸಿನಿಮಾದಷ್ಟೇ ಕುತೂಹಲ ಮೂಡಿಸಿದ್ದು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರು PUBG ಆಡುವಾಗ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು. ಬಳಿಕ ಸ್ನೇಹಿತರಾಗಿ ಪ್ರೀತಿಸುತ್ತಿದ್ದರು. ಸೀಮಾಗೆ ಈಗ 30 ವರ್ಷ ಸಚಿನ್ ಗೆ 25 ವರ್ಷ. ಈ ವರ್ಷದ ಮಾರ್ಚ್‌ನಲ್ಲಿ ನೇಪಾಳದಲ್ಲಿ ಮೊದಲ ಬಾರಿ ಭೇಟಿ ಮಾಡಿದ್ದ ಜೋಡಿ ಅಲ್ಲಿಯೇ ಪಶುಪತಿನಾಥ ದೇಗುಲದಲ್ಲಿ ವಿವಾಹವಾಗಿದ್ದರಂತೆ.

ಈ ಬಗ್ಗೆ ಮಾತನಾಡಿರುವ ಸೀಮಾ, "ಇದು ತುಂಬಾ ದೀರ್ಘವಾದ ಮತ್ತು ಕಠಿಣ ಪ್ರಯಾಣವಾಗಿತ್ತು. ನನಗೂ ತುಂಬಾ ಭಯವಾಗಿತ್ತು. ನಾನು ಮೊದಲು ಕರಾಚಿಯಿಂದ ದುಬೈಗೆ ಹೋದೆ, ಅಲ್ಲಿ ನಾನು 11 ಗಂಟೆಗಳ ಕಾಲ ಕಾದಿದ್ದೆ. ಆ ಸಮಯದಲ್ಲಿ ನಿದ್ರೆ ಮಾಡಲು ಸಾಧ್ಯವಾಗಿರಲಿಲ್ಲ. ನಂತರ ನಾನು ನೇಪಾಳಕ್ಕೆ ಬಂದೆವು, ಅಂತಿಮವಾಗಿ ಪೋಖರಾಗೆ ಬಂದು ಅಲ್ಲಿ ರಸ್ತೆಯಲ್ಲಿ ನಾನು ಸಚಿನ್ ಅವರನ್ನು ಭೇಟಿಯಾದೆ. ಅಲ್ಲಿ ನಾವಿಬ್ಬರೂ ವಿವಾಹವಾಗಿ ಬಳಿಕ ನಾನು ಪಾಕಿಸ್ತಾನಕ್ಕೆ ಮರಳಿದೆ. ಸಚಿನ್ ಭಾರತಕ್ಕೆ ಮರಳಿದರು ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ತೆರಳಿ ವಿಷಯ ತಿಳಿಸಿದ ಸೀಮಾ
ಮನೆಗೆ ಹಿಂತಿರುಗಿ, ತನ್ನ ಪತಿಯೊಂದಿಗೆ ಭಿನ್ನಾಭಿಪ್ರಾಯವನ್ನು ಹೇಳಿಕೊಂಡ ಸೀಮಾ, ಪಾಕಿಸ್ತಾನಿ ರೂಪಾಯಿ 12 ಲಕ್ಷಕ್ಕೆ ಒಂದು ಪ್ಲಾಟ್ ಅನ್ನು ಮಾರಾಟ ಮಾಡಿದರು ಮತ್ತು ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ವಿಮಾನ ಟಿಕೆಟ್ ಮತ್ತು ನೇಪಾಳ ವೀಸಾವನ್ನು ವ್ಯವಸ್ಥೆ ಮಾಡಿಕೊಂಡರು. ಮೇ ತಿಂಗಳಲ್ಲಿ ಅವರು ದುಬೈ ಮೂಲಕ ನೇಪಾಳವನ್ನು ತಲುಪಿದರು ಮತ್ತು ಹಿಮಾಲಯ ರಾಷ್ಟ್ರದ ಪ್ರವಾಸಿ ನಗರವಾದ ಪೋಖರಾದಲ್ಲಿ ಸ್ವಲ್ಪ ಸಮಯ ಕಳೆದರು. ನಂತರ ಆಕೆ ಕಠ್ಮಂಡುವಿನಿಂದ ದೆಹಲಿಗೆ ಬಸ್ ಮೂಲಕ ಬಂದು ಮೇ 13 ರಂದು ಗ್ರೇಟರ್ ನೋಯ್ಡಾಗೆ ತನ್ನ ಮಕ್ಕಳೊಂದಿಗೆ ತಲುಪಿದ್ದಾಳೆ. ಅಲ್ಲಿ ಸಚಿನ್ ತನ್ನ ಪಾಕಿಸ್ತಾನಿ ಗುರುತನ್ನು ಬಹಿರಂಗಪಡಿಸದೆ ಬಾಡಿಗೆ ವಸತಿಗೃಹದಲ್ಲಿ ಇರಲು ವ್ಯವಸ್ಥೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಇಬ್ಬರೂ ತಮ್ಮ ವಿವಾಹದ ವಿಚಾರವಾಗಿ ವಕೀಲರನ್ನು ಭೇಟಿ ಮಾಡಿ ವಿಚಾರ ತಿಳಿಸಿದಾಗ ಪಾಕಿಸ್ತಾನದ ಲವ್ ವಿಚಾರ ಬಹಿರಂಗವಾಗಿದೆ. ವಿಚಾರ ತಿಳಿದ ಕೂಡಲೇ ಉತ್ತರ ಪ್ರದೇಶ ಪೊಲೀಸರು ಇಬ್ಬರನ್ನೂ ಜುಲೈ 4ರಂದು ಬಂಧಿಸಿದ್ದಾರೆ. ಸೀಮಾ ವಿರುದ್ಧ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಆರೋಪ ಹೊರಿಸಿದ್ದರೆ, ಸಚಿನ್ ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ ಆರೋಪದ ಮೇರೆ ಜೈಲಿಗೆ ಹಾಕಿದ್ದರು. ನಿನ್ನೆ, ಸೀಮಾ ಅವರಿಗೆ ಜಾಮೀನು ದೊರೆತಿದ್ದು, ಈಗ ಅವರು ಭಾರತಕ್ಕೆ ಅಧಿಕೃತವಾಗಿ ತೆರಳಲು ದಾಖಲೆಗಳ ಸಂಗ್ರಹಿಸುತ್ತಿದ್ದಾರೆ. 

ತಮ್ಮ ಬಿಡುಗಡೆಯ ಕುರಿತು ಮಾತನಾಡಿದ ಸೀಮಾ, "ಸುದ್ದಿ ಕೇಳಿದಾಗ ನಾನು ಸಂತೋಷದಿಂದ ಕೂಗಿದೆ, ನಾನು ತಿಂಗಳುಗಟ್ಟಲೆ ಜೈಲಿನಲ್ಲಿ ಇರುತ್ತೇನೆ ಎಂದು ಭಾವಿಸಿದ್ದೆ. ಆದರೆ ದೇವರ ದಯೆ ನನಗೆ ಜಾಮೀನು ದೊರೆತು ಮತ್ತೆ ನಾನು ಸಚಿನ್ ರನ್ನು ಸೇರಿಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ನನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸಿ: ಭಾರತ ಸರ್ಕಾರಕ್ಕೆ ಸೀಮಾ ಪತಿ ಮನವಿ
ಅತ್ತ ಸೌದಿ ಅರೇಬಿಯಾದಿಂದ ವೀಡಿಯೊ ಸಂದೇಶ ರವಾನಿಸಿರುವ ಸೀಮಾ ಪತಿ ಗುಲಾಮ್ ಹೈದರ್, ತಮ್ಮ ಪತ್ನಿಯೊಂದಿಗೆ ಮತ್ತೆ ಒಂದಾಗಲು ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ ಇತ್ತ ಗುಲಾಮ್ ಹೈದರ್ ಬಳಿಗೆ ಹಿಂತಿರುಗಲು ಬಯಸುವುದಿಲ್ಲ.. ನಾನು ಸಚಿನ್ ರೊಂದಿಗೇ ಇರುತ್ತೇನೆ. ಪಾಕಿಸ್ತಾನಕ್ಕೆ ಹಿಂತಿರುಗಿದರೆ ಜೀವ ಬೆದರಿಕೆ ಇದೆ ಎಂದು ಸೀಮಾ ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com