ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ: ಎಲ್ ಜೆಪಿ ಮಾಜಿ ಮುಖ್ಯಸ್ಥನಿಂದ ಎನ್ ಡಿಎ ಮೈತ್ರಿಕೂಟ ಸೇರುವ ಸುಳಿವು

ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ನೇತೃತ್ವದ ಎನ್ ಡಿಎ ಸೇರುವ ಸುಳಿವು ನೀಡಿದ್ದಾರೆ.
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್

ಬಿಹಾರ:ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಬಿಜೆಪಿ ನೇತೃತ್ವದ ಎನ್ ಡಿಎ ಸೇರುವ ಸುಳಿವು ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ಬಿಹಾರ ಉಪಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಎನ್ ಡಿಎ ಪರ ಪ್ರಚಾರ ನಡೆಸಿದ್ದರು.

ಎಲ್ ಜೆಪಿಯ ಬಂಡಾಯ ಬಣವಾಗಿರುವ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)  ಪಕ್ಷದ ಸಭೆ ನಡೆಸಿದ ಬಳಿಕ ಮೈತ್ರಿ ಕೂಟದ ಬಗ್ಗೆ ನಿರ್ಧರಿಸುವ ಅಧಿಕಾರವನ್ನು ಪಕ್ಷದ ಸದಸ್ಯರು ಚಿರಾಗ್ ಗೆ ವಹಿಸಿದ್ದಾರೆ.
 
ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಸಚಿವ ನಿತ್ಯಾನಂದ ರೈ ಚಿರಾಗ್ ನಿವಾಸಕ್ಕೆ ಭೇಟಿ ನೀಡಿ, ಪಾಸ್ವಾನ್ ನಿವಾಸವನ್ನು ತಮ್ಮ ಮತ್ತೊಂದು ಮನೆ ಎಂದು ಹೇಳಿದ್ದ ಬೆನ್ನಲ್ಲೇ ಪಾಸ್ವಾನ್ ಎನ್ ಡಿಎ ಸೇರುವ ಸುಳಿವು ದೊರೆತಿದೆ.

ಚಿರಾಗ್ ನಿವಾಸಕ್ಕೆ ಭೇಟಿ ನೀಡಿದ್ದಾಗ ರೈ ಮೈತ್ರಿಯ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಆದರೆ ಬಿಜೆಪಿಯೊಂದಿಗೆ ರಾಮ್ ವಿಲಾಸ್ ಪಾಸ್ವಾನ್ ಮೌಲ್ಯಗಳನ್ನು ಹಂಚಿಕೊಂಡಿದ್ದರು ಎಂದು ಹೇಳಿದ್ದರು. ಬಿಜೆಪಿ ಹಾಗೂ ಪಾಸ್ವಾನ್ ಗೆ ಜನಸೇವೆಯಲ್ಲಿ ನಂಬಿಕೆ ಇದೆ ಎಂದು ಹೇಳಿದ್ದರು.
 
ಎನ್ ಡಿಎ ಸೇರುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಚಿರಾಗ್, ಮೈತ್ರಿಯ ಬಗ್ಗೆ ಎನ್ ಡಿಎ ಘೋಷಣೆಗೂ ಮುನ್ನ ನಾನು ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದಷ್ಟೇ ಹೇಳಿದ್ದಾರೆ. ಚಿರಾಗ್- ಎನ್ ಡಿಎ ನಡುವೆ ಮತ್ತೊಂದು ಹಂತದ ಮಾತುಕತೆ ನಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com