ಜುಲೈ 13-14ರಂದು ನಿಗದಿಯಾಗಿದ್ದ ವಿಪಕ್ಷಗಳ ಸಭೆ ಮುಂದೂಡಿಕೆ: ಸಂಸತ್ತು ಮುಂಗಾರು ಅಧಿವೇಶನ ನಂತರ ಸಾಧ್ಯತೆ

ರಾಜಧಾನಿ ಬೆಂಗಳೂರಿನಲ್ಲಿ ಜುಲೈ 13-14ರಂದು ನಿಗದಿಯಾಗಿದ್ದ ವಿಪಕ್ಷಗಳ ಸಭೆ ಮುಂದೂಡಲಾಗಿದೆ. ಸಂಸತ್ತು ಮುಂಗಾರು ಅಧಿವೇಶನ, ಬಿಹಾರ ರಾಜ್ಯದ ವಿಧಾನಸಭೆ ಅಧಿವೇಶನ, ಕರ್ನಾಟಕದಲ್ಲಿ ಇಂದಿನಿಂದ 10 ದಿನಗಳ ಕಾಲ ಅಧಿವೇಶನ ಇತ್ಯಾದಿ ಕಾರಣಗಳಿಂದ ವಿಪಕ್ಷಗಳ ಸಭೆ ಮುಂದೂಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ವಿರೋಧ ಪಕ್ಷಗಳ ನಾಯಕರು
ವಿರೋಧ ಪಕ್ಷಗಳ ನಾಯಕರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜುಲೈ 13-14ರಂದು ನಿಗದಿಯಾಗಿದ್ದ ವಿಪಕ್ಷಗಳ ಸಭೆ(Opposition leaders meeting) ಮುಂದೂಡಲಾಗಿದೆ. ಸಂಸತ್ತು ಮುಂಗಾರು ಅಧಿವೇಶನ, ಬಿಹಾರ ರಾಜ್ಯದ ವಿಧಾನಸಭೆ ಅಧಿವೇಶನ, ಕರ್ನಾಟಕದಲ್ಲಿ ಇಂದಿನಿಂದ 10 ದಿನಗಳ ಕಾಲ ಅಧಿವೇಶನ ಇತ್ಯಾದಿ ಕಾರಣಗಳಿಂದ ವಿಪಕ್ಷಗಳ ಸಭೆ ಮುಂದೂಡಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಈ ಎಲ್ಲಾ ಕಾರಣಗಳಿಂದ ಆಗಸ್ಟ್ 20ರ ನಂತರ ವಿಪಕ್ಷಗಳ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಸುಮಾರು 15 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಭಾಗವಹಿಸಿದ್ದರು. ಇದಲ್ಲದೇ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಸಭೆಯಲ್ಲಿದ್ದರು.

ಪಾಟ್ನಾದ ಸಭೆಯ ನಂತರ ಎಲ್ಲಾ ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದರೂ ಕೂಡ, ಅನೇಕ ಪಕ್ಷಗಳು ಏಕರೂಪ ನಾಗರಿಕ ಸಂಹಿತೆ ವಿಷಯದಲ್ಲಿ ಬಿಜೆಪಿಯಂತೆಯೇ ವಿಭಿನ್ನ ಅಭಿಪ್ರಾಯ ಹೊಂದಿದ್ದವು. ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷವು ಯುಸಿಸಿಗೆ ತಾತ್ವಿಕ ಬೆಂಬಲ ನೀಡಿದ್ದರೆ, ಉದ್ಧವ್ ಠಾಕ್ರೆ ಅವರ ಶಿವಸೇನೆ ಕೂಡ ಅದೇ ನಿಲುವನ್ನು ಹೊಂದಿತ್ತು. ಇದಲ್ಲದೆ ಶರದ್ ಪವಾರ್ ಎನ್​ಸಿಪಿ ಕೂಡ ತಟಸ್ಥವಾಗಿತ್ತು.

ಈ ಒಗ್ಗಟ್ಟಿನ ಪ್ರಮುಖ ಮುಖವೆಂದು ಪರಿಗಣಿಸಲಾದ ಶರದ್ ಪವಾರ್ ಅವರ ಪಕ್ಷದ ಆಜ್ಞೆಯನ್ನು ಈಗ ಪ್ರಶ್ನಿಸಿರುವ ಕಾರಣ ಪ್ರತಿಪಕ್ಷಗಳ ಒಗ್ಗಟ್ಟಿಗೂ ದೊಡ್ಡ ಹೊಡೆತ ಬಿದ್ದಿದೆ.ಅಜಿತ್ ಪವಾರ್ ಎನ್​ಸಿಪಿ ತೊರೆದು ಏಕನಾಥ್ ಶಿಂದೆ ಸರ್ಕಾರ ಸೇರಿ ಈಗ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್​ಸಿಪಿಯು ಕೂಡ ಶಿವಸೇನೆಯಂತೆ ಇಬ್ಭಾಗವಾಗಿದೆ.

ಮುಂಗಾರು ಅಧಿವೇಶನ ನಂತರ ಸಭೆ: ಸಂಸತ್ತಿನ ಮುಂಗಾರು ಅಧಿವೇಶನ ನಂತರ ವಿಪಕ್ಷಗಳ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com