ಅಕಾಲಿಕ ಹಿಮಪಾತ, ಭಾರಿ ಮಳೆ; ಲಡಾಖ್‌ನಲ್ಲಿ ರೆಡ್ ಅಲರ್ಟ್ ಘೋಷಣೆ

ಅಕಾಲಿಕ ಹಿಮಪಾತ ಮತ್ತು ಭಾರಿ  ಮಳೆಯಿಂದಾಗಿ ಲಡಾಖ್‌ನಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಲೇಹ್: ಅಕಾಲಿಕ ಹಿಮಪಾತ ಮತ್ತು ಭಾರಿ  ಮಳೆಯಿಂದಾಗಿ ಲಡಾಖ್‌ನಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ಲಾಮಯೂರು ಬಳಿಯಲ್ಲಿ ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.

ಎರಡು ದಿನಗಳ ಮಳೆಯ ನಂತರ ಲೇಹ್ ಮತ್ತು ಕಾರ್ಗಿಲ್ ಎರಡೂ ಜಿಲ್ಲೆಗಳಲ್ಲಿನ ಎತ್ತರದ ಪ್ರದೇಶಗಳಲ್ಲಿ ರಾತ್ರಿಯಿಡೀ ಅಕಾಲಿಕ ಹಿಮಪಾತ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಗಿಲ್‌ನ ರಂಗ್ಡಮ್ ಗ್ರಾಮವು ಸುಮಾರು ಮೂರು ಇಂಚುಗಳಷ್ಟು ಹಿಮಪಾತಕ್ಕೆ ಸಾಕ್ಷಿಯಾಗಿದೆ. ಪೆನ್ಸಿಲಾ, ಝನ್ಸ್ಕರ್ ಮತ್ತು ಕಾರ್ಗಿಲ್ ಸುತ್ತಮುತ್ತಲಿನ ಬೆಟ್ಟಗಳು ಸೇರಿದಂತೆ ಇತರ ಪ್ರದೇಶಗಳು ಸಹ ಹಿಮದ ಹೊದಿಕೆಯಿಂದ ಆವೃತವಾಗಿವೆ ಎಂದು ಅವರು ಹೇಳಿದರು.

ಮುಂಜಾಗ್ರತಾ ಕ್ರಮವಾಗಿ ಕಾರ್ಗಿಲ್-ಜನ್ಸ್ಕಾರ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಲಾಮಯೂರುನಲ್ಲಿ ಭೂಕುಸಿತದ ನಂತರ, ಲೇಹ್-ಕಾರ್ಗಿಲ್ ಮುಖ್ಯ ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ಬಂದಿಸಲಾಗಿದ್ದು, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳ ಕಾಲ ಈ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸುವುದರ ಜೊತೆಗೆ ಭಾನುವಾರ ಮಧ್ಯಾಹ್ನ ಅಥವಾ ಸಂಜೆಯವರೆಗೆ ಮಳೆ ಮತ್ತು ಹಿಮಪಾತ ಮುಂದುವರಿಯುತ್ತದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

'ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ವ್ಯಾಪಕದಿಂದ ಮಧ್ಯಮದವರೆಗೆ ಭಾರಿ ಮಳೆ ಮತ್ತು ಹಿಮಪಾತವಿದೆ. ಜನರು ಜಾಗರೂಕರಾಗಿರಲು ಮತ್ತು ಹಿಮ ಪೀಡಿತ ಪ್ರದೇಶಗಳಿಂದ ದೂರವಿರುವಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯ ದೃಷ್ಟಿಯಿಂದಾಗಿ ಹಠಾತ್ ಪ್ರವಾಹವನ್ನು ತಳ್ಳಿಹಾಕುವಂತಿಲ್ಲ.  ಆದಾಗ್ಯೂ, ಜುಲೈ 10 ರಿಂದ 14ರವರೆಗೆ ಕೆಲವು ಸ್ಥಳಗಳಲ್ಲಿ ಮಳೆಯೊಂದಿಗೆ ಶುಷ್ಕ ಹವಾಮಾನವಿರಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com