ಸೀಮಾ ಹೈದರ್ ಪಾಕ್'ಗೆ ಮರಳದಿದ್ದರೆ 26/11 ಮಾದರಿ ದಾಳಿ: ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

'ಪಬ್‌ಜಿ' ಮೂಲಕ ಅಂಕುರಿಸಿದ ಪ್ರೀತಿಗಾಗಿ ಗಂಡನನ್ನು ಬಿಟ್ಟು 4 ಮಕ್ಕಳ ಸಹಿತ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ ಮಹಿಳೆ ಸೀಮಾ ಹೈದರ್‌ಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದೆ ಇದ್ದರೆ 26/11 ಮಾದರಿ ದಾಳಿ ನಡೆಸಲಾಗುವುದು ಬೆದರಿಕೆ ಕರೆಯೊಂದು ಬಂದಿದೆ.
ಸಚಿನ್ ಮೀನಾ ಹಾಗೂ ಸೀಮಾ ಹೈದರ್.
ಸಚಿನ್ ಮೀನಾ ಹಾಗೂ ಸೀಮಾ ಹೈದರ್.

ಮುಂಬೈ: 'ಪಬ್‌ಜಿ' ಮೂಲಕ ಅಂಕುರಿಸಿದ ಪ್ರೀತಿಗಾಗಿ ಗಂಡನನ್ನು ಬಿಟ್ಟು 4 ಮಕ್ಕಳ ಸಹಿತ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ ಮಹಿಳೆ ಸೀಮಾ ಹೈದರ್‌ಳನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದೆ ಇದ್ದರೆ 26/11 ಮಾದರಿ ದಾಳಿ ನಡೆಸಲಾಗುವುದು ಬೆದರಿಕೆ ಕರೆಯೊಂದು ಬಂದಿದೆ.

ಮುಂಬೈನ ಟ್ರಾಫಿಕ್​ ಕಂಟ್ರೋಲ್​ ರೂಮ್​ ಈ ಕರೆಯನ್ನು ಸ್ವೀಕರಿಸಿದೆ. ಉರ್ದುವಿನಲ್ಲಿ ಮಾತನಾಡಿರುವ ಅಪರಿಚಿತ ವ್ಯಕ್ತಿ, ಸೀಮಾಳನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ, 2008ರ ನವೆಂಬರ್​ 26ರಂದು ಮುಂಬೈ ತಾಜ್​ ಹೋಟೆಲ್​ ಮೇಲೆ ನಡೆದ ದಾಳಿಯ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ ಮತ್ತು ಭಾರತವು ವಿನಾಶವನ್ನು ಎದುರಿಸಲಿದೆ ಎಂದು ಬೆದರಿಕೆ ಹಾಕಿದ್ದಾನೆ.

ಇಷ್ಟೇ ಅಲ್ಲದೆ, ಮುಂಬೈ ದಾಳಿ ಮಾದರಿಯಲ್ಲಿ ದಾಳಿ ಮಾಡಲು ಈಗಾಗಲೇ ಎಲ್ಲರೂ ತಯಾರಾಗಿದ್ದಾರೆ. ಇದಕ್ಕೆ ಉತ್ತರ ಪ್ರದೇಶ ಸರ್ಕಾರ ಹೊಣೆಯಾಗಲಿದೆ ಎಂದೂ ಕೂಡ ಬೆದರಿಕೆ ಹಾಕಿದ್ದಾನೆಂದು ತಿಳಿದುಬಂದಿದೆ.

ಈ ಬೆದರಿಕೆ ಕರೆ ಬುಧವಾರ ರಾತ್ರಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕರೆಯನ್ನು ಆ್ಯಪ್ ಒಂದರ ಮೂಲಕ ಮಾಡಲಾಗಿದ್ದು, ಕರೆ ಮಾಡಿದಾತನ ಐಪಿ ವಿಳಾಸ ಪತ್ತೆ ಮಾಡಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಷ್ಟಕ್ಕೂ ಯಾರಿದು ಸೀಮಾ ಹೈದರ್?
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿಯಾಗಿರುವ ಸೀಮಾ ಹೈದರ್, 2014ರಲ್ಲಿ ಮದುವೆಯಾದ ನಂತರ ಕರಾಚಿಯಲ್ಲಿ ನೆಲೆಸಿದ್ದಳು. 2019ರಲ್ಲಿ ಪಬ್‌ಜಿ ಗೇಮ್ ಆಡುವಾಗ ಪರಿಚಯವಾದ ನೋಯ್ಡಾ ನಿವಾಸಿ ಸಚಿನ್ ಮೀನಾಗೋಸ್ಕರ ಆಕೆ ದುಬೈಗೆ ತೆರಳಿ, ಅಲ್ಲಿಂದ ನೇಪಾಳಕ್ಕೆ ಬಂದಿಳಿದಿದ್ದಳು. ತನ್ನ ಜತೆ ನಾಲ್ಕು ಮಕ್ಕಳನ್ನೂ ಕರೆದುಕೊಂಡು ಬಂದಿದ್ದಳು. ನೇಪಾಳದಿಂದ ಬಸ್‌ನಲ್ಲಿ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದಳು. ಆಕೆಯ್ನು ಜುಲೈ 4ರಂದು ಬಂಧಿಸಲಾಗಿತ್ತು. ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆಕೆ, ಸಚಿನ್ ಮೀನಾನ ಮನೆಯಲ್ಲಿಯೇ ವಾಸವಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com