ನಮ್ಮ ಭರವಸೆಗಳು, ನಮ್ಮ ಕನಸುಗಳು... ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ: ಚಂದ್ರಯಾನ-3 ಬಗ್ಗೆ ಪ್ರಧಾನಿ ಮೋದಿ ಮಾತು

ಚಂದ್ರಯಾನ ಮಿಷನ್ ಅಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ನೆನಪಾಗುತ್ತಾರೆ. 2019ರ ಸೆಪ್ಟೆಂಬರ್ ತಿಂಗಳು, ಬೆಂಗಳೂರಿನ ಇಸ್ರೊ ಕೇಂದ್ರದಿಂದ ಚಂದ್ರಯಾನ-2 ಉಡ್ಡಯನ ಕಾರ್ಯಕ್ರಮ ನಿಗದಿಯಾಗಿತ್ತು.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಚಂದ್ರಯಾನ ಮಿಷನ್ ಅಂದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ನೆನಪಾಗುತ್ತಾರೆ. 2019ರ ಸೆಪ್ಟೆಂಬರ್ ತಿಂಗಳು, ಬೆಂಗಳೂರಿನ ಇಸ್ರೊ ಕೇಂದ್ರದಿಂದ ಚಂದ್ರಯಾನ-2 ಉಡ್ಡಯನ ಕಾರ್ಯಕ್ರಮ ನಿಗದಿಯಾಗಿತ್ತು.

ಉಡಾವಣೆ ಮೇಲೆ ಅಪಾರ ನಿರೀಕ್ಷೆ, ಕನಸು ಹೊತ್ತುಕೊಂಡು ಬಂದು ಪ್ರಧಾನಿ ಮೋದಿಯವರು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿ ಬಂದು ಕುಳಿತು ವಿಜ್ಞಾನಿಗಳಿಗೆ ಪ್ರೋತ್ಸಾಹ ನೀಡಿದ್ದರು. ಆದರೆ ಚಂದ್ರಯಾನ-2 ಉಡಾವಣೆಗೊಂಡ ಆರಂಭದಲ್ಲಿಯೇ ವಿಫಲವಾಯಿತು. 

ಇಸ್ರೊ ಅಧ್ಯಕ್ಷರಾಗಿದ್ದ ಕೆ ಶಿವನ್ ಅವರಿಗೆ ದುಃಖ ಉಮ್ಮಳಿಸಿ ಬಂತು. ಆಗ ಪ್ರಧಾನಿಯವರೇ ಸ್ವತಃ ಅವರನ್ನು ಸಾಂತ್ವನ ಮಾಡಿದ್ದರು. ಇದೀಗ ಚಂದ್ರಯಾನ 3 ಪಯಣ ಇಂದು ಆರಂಭವಾಗುತ್ತಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ ಅಷ್ಟೇ ಆಶಾವಾದದಿಂದ ಪ್ರಧಾನಿಯವರು ಇಸ್ರೊ ವಿಜ್ಞಾನಿಗಳ ತಂಡಕ್ಕೆ, ಭಾರತೀಯರಿಗೆ ಶುಭಹಾರೈಸಿದ್ದಾರೆ.

ಫ್ರಾನ್ಸ್‌ಗೆ ಎರಡು ದಿನಗಳ ಅಧಿಕೃತ ಪ್ರವಾಸದಲ್ಲಿರುವ ಪ್ರಧಾನಿ, ಪ್ಯಾರಿಸ್‌ನಿಂದ ಟ್ವೀಟ್ ಮಾಡಿದ್ದಾರೆ, "ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜುಲೈ 14, 2023 ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಕೆತ್ತಿ ಬರೆದಿರುವ ದಿನವಾಗಿರುತ್ತದೆ. ಚಂದ್ರಯಾನ-3, ನಮ್ಮ ಮೂರನೇ ಚಂದ್ರನ ಕಾರ್ಯಾಚರಣೆಯನ್ನು ಇಂದು ಪ್ರಾರಂಭಿಸುತ್ತದೆ. ಈ ಗಮನಾರ್ಹ ಮಿಷನ್ ನಮ್ಮ ರಾಷ್ಟ್ರದ ಭರವಸೆಗಳು ಮತ್ತು ಕನಸುಗಳನ್ನು ಹೊತ್ತೊಯ್ಯುತ್ತದೆ.

ಚಂದ್ರಯಾನ-3ಯನ್ನು ಕಕ್ಷೆಯನ್ನು ಹೆಚ್ಚಿಸುವ ಕುಶಲತೆಯ ನಂತರ ಚಂದ್ರನ ವರ್ಗಾವಣೆ ಪಥಕ್ಕೆ ಸೇರಿಸಲಾಗುತ್ತದೆ. 300,000 ಕಿ.ಮೀ.ಗೂ ಹೆಚ್ಚು ಆವರಿಸುತ್ತದೆ, ಇದು ಮುಂಬರುವ ವಾರಗಳಲ್ಲಿ ಚಂದ್ರನನ್ನು ತಲುಪುತ್ತದೆ. ವೈಜ್ಞಾನಿಕ ಉಪಕರಣಗಳು ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತವೆ ಮತ್ತು ನಮ್ಮ ಜ್ಞಾನವನ್ನು ಹೆಚ್ಚಿಸುತ್ತವೆ.

ನಮ್ಮ ವಿಜ್ಞಾನಿಗಳಿಗೆ ಧನ್ಯವಾದಗಳು, ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಂತ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಚಂದ್ರಯಾನ-1 ನ್ನು ಜಾಗತಿಕ ಚಂದ್ರನ ಕಾರ್ಯಾಚರಣೆಗಳಲ್ಲಿ ಪಥ್ ಬ್ರೇಕರ್ ಎಂದು ಪರಿಗಣಿಸಲಾಗಿದೆ ಏಕೆಂದರೆ ಇದು ಚಂದ್ರನ ಮೇಲೆ ನೀರಿನ ಅಣುಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ಇದು ವಿಶ್ವಾದ್ಯಂತ 200 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಕಟಣೆಗಳಲ್ಲಿ ಪ್ರಕಟವಾಗಿದೆ ಎಂದು ಬರೆದಿದ್ದಾರೆ. 

ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಇಂದು ಮಧ್ಯಾಹ್ನ 2:35 ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com