ನವದೆಹಲಿ: ದೆಹಲಿಯಲ್ಲಿ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ 24 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನು 24 ವರ್ಷದ ಸಕ್ಷಮ್ ಎಂದು ಗುರುತಿಸಲಾಗಿದೆ. ಸಕ್ಷನ್ ಸೆಕ್ಟರ್-15ರಲ್ಲಿರುವ ಜಿಮ್‌ನಲ್ಲಿ ಟ್ರೆಡ್‌ಮಿಲ್ ಬಳಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಟ್ರೆಡ್ ಮಿಲ್ ನಲ್ಲಿ ವಿದ್ಯುತ್ ಹರಿದಿದ್ದು, ಇದರಿಂದಾಗಿ ಸಕ್ಷಮ್ ಸಾವನ್ನಪ್ಪಿದ್ದಾರೆ.
ಘಟನೆ ಜುಲೈ 18ರಂದು ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಜಿಮ್ ಮ್ಯಾನೇಜರ್ ಸಿಕ್ಕಿಬಿದ್ದಿದ್ದು ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಾಹಿತಿ ಪ್ರಕಾರ ಸಕ್ಷಮ್ ಪೃತಿ ಬಿ.ಟೆಕ್ ಮುಗಿಸಿದ್ದನು. ಆತ ಗುರುಗ್ರಾಮ್ ಮೂಲದ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ರೋಹಿಣಿ ಸೆಕ್ಟರ್ 19ರ ನಿವಾಸಿಯಾಗಿರುವ ಸಕ್ಷಮ್ ಅವರು ಸೆಕ್ಟರ್ 15 ರ ಜಿಂಪ್ಲೆಕ್ಸ್ ಫಿಟ್‌ನೆಸ್ ಝೋನ್‌ಗೆ ವರ್ಕೌಟ್ ಮಾಡಲು ಹೋಗುತ್ತಿದ್ದನು. ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಟ್ರೆಡ್ ಮಿಲ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದನು. ಮರಣೋತ್ತರ ಪರೀಕ್ಷೆಯ ವರದಿಯು ವಿದ್ಯುತ್ ಸ್ಪರ್ಶದಿಂದ ಸಾವು ಎಂದು ದೃಢಪಡಿಸಿದೆ.
ಜಿಮ್ ಮ್ಯಾನೇಜರ್ ಅನುಭವ್ ದುಗ್ಗಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದುಗ್ಗಲ್ ವಿರುದ್ಧ ಅಪರಾಧಿ ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಪ್ರಕರಣಗಳನ್ನು ದಾಖಲಿಸಲಾಗಿದೆ.
Advertisement